ಬ್ರೇಕಿಂಗ್ ನ್ಯೂಸ್
01-02-21 02:31 pm Mangalore Correspondent ಕ್ರೈಂ
ಮಂಗಳೂರು, ಫೆ.1: ಕೊಣಾಜೆ ಬಳಿಯ ಗೋಪಾಲಕೃಷ್ಣ ಭಜನಾ ಮಂದಿರದ ಒಳಗೆ ಮಲ, ಮೂತ್ರ ವಿಸರ್ಜಿಸಿ ಅಪವಿತ್ರಗೊಳಿಸಿದ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತಲಪಾಡಿಯ ಕೊಮರಂಗಳ ನಿವಾಸಿ ಮಹಮ್ಮದ್ ಸೊಹೈಲ್ (19) ಮತ್ತು ತಲಪಾಡಿಯ ಪಿಲಿಕೂರು ನಿವಾಸಿ ನಿಜಾಮುದ್ದೀನ್ (21) ಬಂಧಿತರು. ವಿವಿಧೆಡೆ ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದ್ದ ಇಬ್ಬರು ಯುವಕರ ಕೃತ್ಯದ ಬೆನ್ನತ್ತಿ ಹೋದ ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಗೋಪಾಲಕೃಷ್ಣ ಮಂದಿರಕ್ಕೆ ಕಾಣಿಕೆ ಹುಂಡಿಯಿಂದ ಹಣ ಕಳವು ಮಾಡಲು ನುಗ್ಗಿದ್ದರು. ಆದರೆ, ಅಲ್ಲಿ ಯಾವುದೇ ರೀತಿಯ ಹಣವಾಗಲೀ, ಬೆಲೆಬಾಳುವ ಆಭರಣಗಳಾಗಲೀ ಸಿಕ್ಕಿರಲಿಲ್ಲ. ಕಾಣಿಕೆ ಡಬ್ಬಿ ಒಡೆದ ಕೃತ್ಯ ಬೇರೆ ಯಾರೋ ಮಾಡಿದ್ದಾರೆ ಎನ್ನುವ ರೀತಿ ಬಿಂಬಿಸಲು ಮಲ, ಮೂತ್ರ ವಿಸರ್ಜಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಶಶಿಕುಮಾರ್, ಇವರ ತಂಡದಲ್ಲಿ ಇನ್ನೂ ಆರು ಮಂದಿ ಇದ್ದಾರೆ ಎನ್ನುವುದು ಗೊತ್ತಾಗಿದೆ. ಇದಲ್ಲದೆ ಕೋಣಾಜೆ, ಉಳ್ಳಾಲ, ಕಂಕನಾಡಿ ಗ್ರಾಮಾಂತರ, ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಒಂಬತ್ತು ಕಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕಂಡುಬಂದಿದೆ. ಈ ಪೈಕಿ ಐದು ದೈವಸ್ಥಾನದ ಹುಂಡಿ ಕಳವು ಪ್ರಕರಣಗಳಾಗಿವೆ. ಕೋಣಾಜೆಯಲ್ಲಿ ಮಂದಿರದ ಕೃತ್ಯ ನಡೆಯುವುದಕ್ಕೂ ಸ್ವಲ್ಪ ದಿನಗಳ ಹಿಂದೆ ಅಲ್ಲಿಯೇ ಸಮೀಪದಲ್ಲಿ ದೈವಸ್ಥಾನ ಒಂದರ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ್ದರು. ಅದರಲ್ಲಿ ಹಣ ಕಳವುಗೈದು, ಕಾಣಿಕೆ ಡಬ್ಬಿಯನ್ನು ಗೋಪಾಲಕೃಷ್ಣ ಮಂದಿರದ ಬಳಿ ಎಸೆದಿದ್ದರು. ಅದೇ ದಿನ ಗೋಪಾಲಕೃಷ್ಣ ಮಂದಿರಕ್ಕೂ ನುಗ್ಗಲು ಪ್ಲಾನ್ ಹಾಕಿದ್ದರು ಎಂದು ತಿಳಿಸಿದರು.
ತಲಪಾಡಿಯ ಪಿಲಿಕೂರು ಎಂಬಲ್ಲಿ ಸಿಕ್ಕಿದ ಸಿಸಿಟಿವಿ ವಿಡಿಯೋ ಆಧರಿಸಿ, ಸಂಶಯಯದ ಮೇರೆಗೆ ಇಬ್ಬರನ್ನು ವಶಕತ್ಕೆ ಪಡೆದು ವಿಚಾರಿಸಿದಾಗ ದುಷ್ಕೃತ್ಯ ಬಯಲಾಗಿದೆ. ಕೊಣಾಜೆ ಪರಿಸರದ ಮುಲಾರದ ಅರಸು ಮುಂಡಿತ್ತಾಯ ದೈವಸ್ಥಾನದ ಕಾಣಿಕೆ ಹುಂಡಿ ಕಳವು, ಜ.15ರಂದು ಮಾಡೂರಿನ ರಸ್ತೆ ಬದಿಯ ದೈವಸ್ಥಾನದ ಕಾಣಿಕೆ ಡಬ್ಬಿ ಕಳವು, ಕುತ್ತಾರಿನ ಆದಿಸ್ಥಳದ ಕೊರಗಜ್ಜ ದೈವಸ್ಥಾನದ ಕಾಣಿಕೆ ಡಬ್ಬಿ ಕಳವು ಯತ್ನ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸೇವಾ ಕೌಂಟರಿಗೆ ನುಗ್ಗಿ ಕಳವು ಹೀಗೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಡಿಯೋ ಸ್ಕೂಟರ್, ಚೂರಿ, ಸ್ಪಾನರ್, ವಿವಿಧ ರೀತಿಯ ಕಾಣಿಕೆ ಡಬ್ಬಿಗಳನ್ನು ವಶಕ್ಕೆ ಪಡೆಯಲಾಗಿದೆ.
ಅಪವಿತ್ರ ಪ್ರಕರಣದಲ್ಲಿ ಬೇರೆ ತಂಡ
ಕದ್ರಿ, ಕಂಕನಾಡಿ, ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ದೈವಸ್ಥಾನದ ಕಾಣಿಗೆ ಡಬ್ಬಿಗೆ ಅಪವಿತ್ರ ವಸ್ತುಗಳನ್ನು ಹಾಕಿ, ದುಷ್ಕೃತ್ಯ ಎಸಗಿರುವ ಪ್ರಕರಣದಲ್ಲಿ ಇವರ ಕೈವಾಡ ಕಂಡುಬಂದಿಲ್ಲ. ಅದರಲ್ಲಿ ಬೇರೆಯದ್ದೇ ತಂಡ ಪಾಲ್ಗೊಂಡಿರುವ ಸಾಧ್ಯತೆಯಿದೆ. ಅದರ ಬಗ್ಗೆ ಸುಳಿವು ಲಭಿಸಿದ್ದು ತನಿಖೆ ನಡೆಸಲಾಗುತ್ತಿದೆ. ದೈವಸ್ಥಾನ ಅಪವಿತ್ರ ಪ್ರಕರಣಗಳ ಬಗ್ಗೆ ಸಿಸಿಟಿವಿ ವಿಡಿಯೋ ಅಥವಾ ಕೃತ್ಯದ ಬಗ್ಗೆ ಇನ್ನಿತರ ಮಾಹಿತಿಗಳಿದ್ದರೆ ಸಾರ್ವಜನಿಕರು ಪೊಲೀಸರಿಗೆ ಹಂಚಿಕೊಳ್ಳಬಹುದು. ಇಂಥ ಮಾಹಿತಿಗಳಿಂದ ಆರೋಪಿಗಳನ್ನು ಹಿಡಿಯಲು ಸಹಾಯವಾಗುತ್ತದೆ ಎಂದು ಕಮಿಷರನ್ ಹೇಳಿದರು.
ಕಾಣಿಕೆ ಡಬ್ಬಿ ಕಳವು ಪ್ರಕರಣದ ಆರೋಪಿಗಳು ಬೇರೆ ಕೆಲವು ಪ್ರಕರಣಗಳಲ್ಲೂ ಭಾಗಿಯಾಗಿರುವ ಸಾಧ್ಯತೆಯಿದೆ. ಪೆಟ್ರೋಲ್ ಪಂಪ್ ಮತ್ತು ಅಂಗಡಿಗೆ ನುಗ್ಗಿ ಹಣ ಕದ್ದಿರುವ ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ಪ್ರತಿ ಪ್ರಕರಣದಲ್ಲೂ ಹತ್ತು ಸಾವಿರ, ಹದಿನೈದು, ಒಂದು ಲಕ್ಷದ ವರೆಗೆ ಹಣ ಸಿಕ್ಕಿರುವ ಬಗ್ಗೆ ಮಾಹಿತಿಗಳಿವೆ. ಕೋಣಾಜೆ ಪ್ರಕರಣದಲ್ಲಿ ಮಾತ್ರ ಅಲ್ಲಿ ಹಣ ಸಿಕ್ಕಿಲ್ಲವೆಂದು ಪ್ರಕರಣದ ದಿಕ್ಕು ತಪ್ಪಿಸಲು ಮಲ ವಿಸರ್ಜಿಸಿ ತಂತ್ರ ಹೂಡಿದ್ದರು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಮ್ ಶಂಕರ್ ಮತ್ತು ವಿನಯ ಗಾಂವ್ಕರ್ ಉಪಸ್ಥಿತರಿದ್ದರು.
Video:
The city Police have arrested two Youths who were involved in cruel act of making the Konaje Bajana mandir temple dirty with Urine and Shit.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm