ಬ್ರೇಕಿಂಗ್ ನ್ಯೂಸ್
01-02-21 03:00 pm Mangalore Correspondent ಕ್ರೈಂ
ಮಂಗಳೂರು, ಫೆ.1: ಒಂದೂವರೆ ವರ್ಷಗಳಿಂದ ಪ್ರೀತಿಸಿ ಕೈಕೊಟ್ಟಿದ್ದ ಯುವತಿಯನ್ನು ಚೂರಿ ಇರಿದು ಹತ್ಯೆಗೈಯಲು ಮುಂದಾದ ಪಾಗಲ್ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಜೊತೆ ಬೋಳೂರಿನ ತ್ರಿಶೂಲ್ ಸಾಲ್ಯಾನ್ (21) ಎಂಬಾತ ಸಂಪರ್ಕದಲ್ಲಿದ್ದು ಇತ್ತೀಚೆಗೆ ಇವರ ಸಂಬಂಧ ಹಳಸಿತ್ತು. ಹಾಗಾಗಿ, 18 ವರ್ಷದ ಯುವತಿ ನಿನ್ನ ಜೊತೆ ಸಂಬಂಧವೇ ಬೇಡ ಎಂದಿದ್ದಳು. ಅಲ್ಲದೆ, ನೀನು ಕೊಟ್ಟಿದ್ದ ರಿಂಗ್ ಸೇರಿ ಎಲ್ಲ ಗಿಫ್ಟ್ ಗಳನ್ನೂ ಹಿಂತಿರುಗಿಸುತ್ತೇನೆ ಎಂದು ಮೊನ್ನೆ ಜ.30ರಂದು ಬಂಟ್ಸ್ ಹಾಸ್ಟೆಲಿಗೆ ಬಂದಿದ್ದಳು. ಇದರಿಂದ ಕಂಗೆಟ್ಟಿದ್ದ ಯುವಕ ತ್ರಿಶೂಲ್, ಅಲ್ಲಿಯೇ ಹಲ್ಲೆ ಮಾಡಲು ಮುಂದಾಗಿದ್ದ.
ಅದೇ ದಿನ ಸಂಜೆ ಯುವತಿ ತನ್ನ ಸ್ನೇಹಿತೆಯ ಹುಟ್ಟುಹಬ್ಬಕ್ಕೆಂದು ಬೆಂದೂರ್ ವೆಲ್ ನಲ್ಲಿರುವ ಕುಮಾರ್ ಇಂಡರ್ನ್ಯಾಶನಲ್ ಹೊಟೇಲಿಗೆ ತೆರಳಿದ್ದಳು. ಅಲ್ಲಿ ಇತರು ಯುವತಿಯರು ಮತ್ತು ಯುವಕರ ಜೊತೆ ಪಾರ್ಟಿ ನಡೆಸುತ್ತಿರುವ ವಿಚಾರ ತಿಳಿದ ತ್ರಿಶೂಲ್, ತನ್ನ ಇತರ ಸಂಗಡಿಗರನ್ನು ಕರೆದೊಯ್ದು ಅಲ್ಲಿ ಆಕೆಯನ್ನು ಕೊಲ್ಲಲು ಮುಂದಾಗಿದ್ದಾನೆ. ಚೂರಿಯಿಂದ ಇರಿಯಲು ಮುಂದಾಗಿದ್ದು, ಹುಡುಗಿ ಅಲ್ಲಿ ತಪ್ಪಿಸಿಕೊಂಡಿದ್ದಾಳೆ. ಅಡ್ಡ ಬಂದಿದ್ದ ಯುವಕ ಪ್ರತೀಕ್ಷ್ ಎಂಬಾತನಿಗೆ ನಾಲ್ಕು ಕಡೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ.
ತ್ರಿಶೂಲ್ ಮತ್ತು ಇತರ ಇಬ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಚಹರೆ ಆಧರಿಸಿ ಮೂವರನ್ನು ಬಂಧಿಸಿದ್ದಾರೆ. ಕೋಡಿಕಲ್ ನಿವಾಸಿ ಸಂತೋಷ್ ಪೂಜಾರಿ(19) ಮತ್ತು ಅಶೋಕ ನಗರ ನಿವಾಸಿ ಡ್ಯಾನಿಶ್ (18) ಇತರ ಇಬ್ಬರು ಬಂಧಿತರು. ಯುವತಿಯ ಹೆತ್ತವರು ಕೆನಡಾದಲ್ಲಿದ್ದು, ಪುತ್ತೂರಿನ ಅಜ್ಜಿ ಮನೆಯಲ್ಲಿದ್ದುಕೊಂಡು ಮಂಗಳೂರಿನಲ್ಲಿ ಕಲಿಯುತ್ತಿದ್ದಳು. ಈಕೆಗೆ ಇನ್ ಸ್ಟಾ ಗ್ರಾಮಿನಲ್ಲಿ ತ್ರಿಶೂಲ್ ಪರಿಚಯ ಆಗಿತ್ತು ಎಂದು ಪ್ರಕರಣದ ಬಗ್ಗೆ ವಿವರ ನೀಡಿದ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ತ್ರಿಶೂಲ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಬಂದರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಉರ್ವಾ ಠಾಣೆಯಲ್ಲೂ ಕೇಸು ಇದೆ. ಪ್ರತೀಕ್ಷ್ ಕೂಡ, ಯುವತಿಗೆ ಇನ್ ಸ್ಟಾ ಗ್ರಾಮಿನಲ್ಲಿ ಪರಿಚಯ ಆಗಿದ್ದ. ಇನ್ನೊಬ್ಬ ಸ್ನೇಹಿತೆಯೂ ಇನ್ ಸ್ಟಾ ಗ್ರಾಮಿನಲ್ಲಿ ಪರಿಚಯ ಆಗಿದ್ದು ಹುಟ್ಟುಹಬ್ಬಕ್ಕೆ ಕರೆದಿದ್ದಳು. ಪಾರ್ಟಿ ನಡೆಸುತ್ತಿದ್ದಾಗಲೇ ಆರೋಪಿ ತ್ರಿಶೂಲ್ ತಂಡ ಕಟ್ಟಿಕೊಂಡು ಬಂದು ಕೃತ್ಯ ನಡೆಸಿದ್ದಾನೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read: ಮಾಜಿ ಪ್ರೇಯಸಿ ಜೊತೆಗಿದ್ದ ಯುವಕನಿಗೆ ರೌಡಿಯಿಂದ ಹಲ್ಲೆ ; ಹೊಟೇಲ್ ನುಗ್ಗಿ ಕೃತ್ಯ ಸಿಸಿಟಿವಿಯಲ್ಲಿ ಸೆರೆ !
Video:
Boy stabs Ex-girlfriend with his friends and also attacks her friends who were in a party at a local restaurant in Mangalore. The police have arrested three youths in connection to this case.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm