ಬ್ರೇಕಿಂಗ್ ನ್ಯೂಸ್
02-02-21 05:26 pm Headline Karnataka News Network ಕ್ರೈಂ
ಬೆಂಗಳೂರು, ಫೆ.2: ಖ್ಯಾತ ಟಿವಿ ಜ್ಯೋತಿಷಿ ಆನಂದ ಗುರೂಜಿಯನ್ನು ವಿಡಿಯೋ ತುಣುಕು ಮುಂದಿಟ್ಟು ಪತ್ರಕರ್ತರ ಸೋಗಿನಲ್ಲಿ ಬ್ಲ್ಕಾಕ್ ಮೇಲ್ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಆನಂದ ಗುರೂಜಿ ಆಪ್ತ ಬಿ.ಆರ್.ನಾಗರಾಜ್ ನೀಡಿದ್ದ ದೂರಿನಂತೆ, ಕೃಷ್ಣಮೂರ್ತಿ, ವೆಂಕಟೇಶ್ ಮತ್ತು ಜಿ.ಕೆ.ವೇಲು ಅಲಿಯಾಸ್ ಮಾರ್ಕೆಟ್ ವೇಲು ಎಂಬ ಮೂವರ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸ್ ಸೂರ್ಯ ಎನ್ನುವ ಪತ್ರಿಕೆಯ ಸಂಪಾದಕ ಜಿ.ಕೆ.ವೇಲು ಅಲಿಯಾಸ್ ಮಾರ್ಕೆಟ್ ವೇಲು ಮತ್ತು ಯುವ ಕರ್ನಾಟಕ ಸಂಘಟನೆಯ ಅಧ್ಯಕ್ಷ ಎ.ಸಿ.ವೆಂಕಟೇಶ್ ಎಂಬವರು ಕಾಂಗ್ರೆಸ್ ಮುಖಂಡ ಸುಧೀಂದ್ರ ಹಾಗೂ ಆನಂದ ಗುರೂಜಿ ಕುಟುಂಬದ ವೈಯಕ್ತಿಕ ವಿವರಗಳನ್ನು ಕಲೆಹಾಕಿದ್ದು ಅದನ್ನು ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಹೇಳಿ ಬ್ಲಾಕ್ ಮೇಲ್ ಮಾಡುತ್ತಿದ್ದರು. ಅಲ್ಲದೆ, ಸುದ್ದಿಯನ್ನು ಹಾಕದಿರಲು 50 ಲಕ್ಷ ರೂ. ನೀಡುವಂತೆ ಬೆದರಿಸಿದ್ದರು.
ಬೆದರಿಕೆಯ ಬಗ್ಗೆ ಸುಧೀಂದ್ರ ನಿರ್ಲಕ್ಷ್ಯ ಮಾಡಿದ್ದರು. ಆದರೆ, ಇಷ್ಟಕ್ಕೇ ಸುಮ್ಮನಾಗದ ಆರೋಪಿಗಳು ಸುಧೀಂದ್ರ ಮತ್ತು ಆನಂದ ಗುರೂಜಿ ಬಗ್ಗೆ ಕೆಟ್ಟದ್ದಾಗಿ ಚಿತ್ರಿಸಿ ವಿಡಿಯೋ ಒಂದನ್ನು ರೆಡಿ ಮಾಡಿ, ಕೃಷ್ಣಮೂರ್ತಿ ಎಂಬಾತನ ಮೊಬೈಲ್ ನಂಬರಿನಿಂದ ಸುಧೀಂದ್ರ ಆಪ್ತ ನಾಗರಾಜ್ ಮೊಬೈಲಿಗೆ ಕಳುಹಿಸಿದ್ದ. ಇದನ್ನು ಜಾಲತಾಣದಲ್ಲಿ ಹರಿಯಬಿಟ್ಟು ಮಾನ ಕಳೆಯುತ್ತೇವೆ. ಇಲ್ಲದಿದ್ದರೆ ಹಣ ಕೊಟ್ಟುಬಿಡಿ ಎಂದು ದುಂಬಾಲು ಬಿದ್ದಿದ್ದಾರೆ. ಕಳೆದ ಜ.12ರಿಂದ 21ರ ವರೆಗೂ ಸತತವಾಗಿ ಪೀಡಿಸಿದ್ದಾರೆ. ಕೊನೆಗೆ 26 ಲಕ್ಷ ನೀಡುವಂತೆ ಹೇಳಿ ತಮ್ಮ ಡಿಮಾಂಡನ್ನು ಇಳಿಸಿದ್ದಾರೆ. ಈ ಬಗ್ಗೆ ಸುಧೀಂದ್ರ ಪಿಎ ಆಗಿರುವ ನಾಗರಾಜ್ ಕೊಟ್ಟ ದೂರಿನಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಕೃಷ್ಣಮೂರ್ತಿ ಮತ್ತು ವೆಂಕಟೇಶ್ ನನ್ನು ಬಂಧಿಸಿದ್ದಾರೆ. ಮಾರ್ಕೆಟ್ ವೇಲುಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Anand Guruji Blackmailed by Media Persons Demands 50 Lakhs. A case has been registered by the registered at the Giri Nagara Police Station
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm