ಬ್ರೇಕಿಂಗ್ ನ್ಯೂಸ್
04-02-21 01:15 pm Headline Karnataka News Network ಕ್ರೈಂ
ಚಿಕ್ಕಮಗಳೂರು, ಫೆ.4: ಕಲ್ಲು ಕೋರೆಯಲ್ಲಿ ದುಡಿಯುತ್ತಿದ್ದ 15 ವರ್ಷದ ಬಾಲಕಿಯನ್ನು ಐದಾರು ತಿಂಗಳಿಂದ 17ಕ್ಕೂ ಹೆಚ್ಚು ಮಂದಿ ನಿರಂತರವಾಗಿ ಅತ್ಯಾಚಾರ ನಡೆಸಿ ಶೋಷಣೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಶೃಂಗೇರಿ ಠಾಣೆಯಲ್ಲಿ ಗ್ಯಾಂಗ್ ರೇಪ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಬೆಳಗಾವಿ ಜಿಲ್ಲೆಯ ಶಿಗ್ಗಾಂವಿ ಮೂಲದವಳಾಗಿದ್ದು ಕೂಲಿ ಕೆಲಸಕ್ಕೆಂದು ಕುಟುಂಬದ ಜೊತೆ ಬಂದಿದ್ದಳು. ಮೂರು ವರ್ಷದ ಹಿಂದೆ ಬಾಲಕಿ ತಾಯಿ ತೀರಿಕೊಂಡಿದ್ದು, ಬಳಿಕ ಆಕೆಯ ಚಿಕ್ಕಮ್ಮ ತನ್ನ ಜೊತೆಗೆ ಕುಳ್ಳಿರಿಸಿ ಓದಿಸುವುದಾಗಿ ಹೇಳಿಕೊಂಡಿದ್ದಳು. ಶಾಲೆಗೆ ಹೋಗುತ್ತಿದ್ದ ಬಾಲಕಿ ಹತ್ತನೇ ಕ್ಲಾಸ್ ನಲ್ಲಿ ಕಲಿಯುತ್ತಿದ್ದಳು. ಆದರೆ, ಈ ನಡುವೆ ಕೊರೊನಾದಿಂದಾಗಿ ಶಾಲೆ ಇಲ್ಲದ ಕಾರಣ ತನ್ನ ಜೊತೆ ಜಲ್ಲಿ ಕ್ರಷರ್ ನಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದಳು.
ಶೃಂಗೇರಿಯ ಎಂಜಿಆರ್ ಕ್ರಷರ್ ನಲ್ಲಿ ಬಾಲಕಿಯ ಚಿಕ್ಕಮ್ಮ ಗೀತಾ ಕೆಲಸ ಮಾಡುತ್ತಿದ್ದು, ಅಲ್ಲಿಗೆ ಕೆಲಸಕ್ಕಾಗಿ ಹೋಗುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಸರದಿಯಂತೆ ಅಲ್ಲಿನ ಕೆಲಸಗಾರರು ಅತ್ಯಾಚಾರ ನಡೆಸಿದ್ದಾರೆ. ಮೊದಲಿಗೆ ಅಲ್ಲಿಯೇ ಲಾರಿ ಚಾಲಕನಾಗಿದ್ದ ಗಿರೀಶ್ ಎಂಬಾತ ಅತ್ಯಾಚಾರ ನಡೆಸಿದ್ದು, ಬಳಿಕ ಅಭಿ ಎಂಬ ಯುವಕನಿಗೆ ಹುಡುಗಿಯನ್ನು ಪರಿಚಯ ಮಾಡಿದ್ದ. ಅಭಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ ಫೋಟೋ, ವಿಡಿಯೋ ತೆಗೆದಿಟ್ಟು ಬ್ಲಾಕ್ ಮೇಲ್ ಮಾಡಿ ತನ್ನ ಗೆಳೆಯರಿಗೂ ಗ್ಯಾಂಗ್ ರೇಪ್ ಮಾಡಲು ನೀಡಿದ್ದಾನೆ. ಈ ವಿಚಾರ ಆಕೆಯ ಚಿಕ್ಕಮ್ಮನಿಗೆ ಗೊತ್ತಿದ್ದು, ಆಕೆಗೆ ಹಣ ನೀಡಿ ತಂಡ ಬಾಯಿ ಮುಚ್ಚಿಸಿದ್ದರು.
ಕಳೆದ ಐದಾರು ತಿಂಗಳಲ್ಲಿ 17ಕ್ಕೂ ಹೆಚ್ಚು ಮಂದಿ ಗ್ಯಾಂಗ್ ರೇಪ್ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ವಿಷಯ ತಿಳಿದ ಚೈಲ್ಡ್ ಲೈನ್ ಸಂಸ್ಥೆಯವರು ಜ.30ರಂದು ಶೃಂಗೇರಿ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಪೊಲೀಸರು ಆಕೆಯ ಆಂಟಿ ಗೀತಾ ಸಹಿತ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಅಭಿ, ಗಿರೀಶ್, ಮಣಿಕಂಠ, ಅಶ್ವಥ್ ಗೌಡ, ರಾಜೇಶ್, ವಿಕಾಸ್, ಅಮಿತ್, ಸಂತೋಷ್, ದೀಕ್ಷಿತ್, ಸಂತೋಷ್, ನಿರಂಜನ್, ನಾರಾಯಣ ಗೌಡ, ಅಭಿ ಗೌಡ, ಯೋಗೀಶ್ ಸೇರಿದಂತೆ ಜಲ್ಲಿ ಕ್ರಷರ್ ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಸದ್ಯಕ್ಕೆ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಾಲಕಿಯ ಪ್ರಕಾರ 30ಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಆರೋಪಿಗಳ ವಿರುದ್ಧ ಬಾಲಕಿಯನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದು ಮತ್ತು ಪೋಕ್ಸೋ ಹಾಗೂ ಅಪ್ರಾಪ್ತೆಯನ್ನು ಜಲ್ಲಿ ಕ್ರಶರ್ ನಲ್ಲಿ ಕಾರ್ಮಿಕೆಯಾಗಿ ದುಡಿಸಿಕೊಂಡಿರುವ ವಿಚಾರದಲ್ಲಿ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಬಿಜೆಪಿ ಪ್ರಮುಖರ ಆಪ್ತರು ಎನ್ನಲಾಗುತ್ತಿದ್ದು, ಇದಕ್ಕಾಗೇ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಸಿ.ಟಿ. ರವಿ ಸುಮ್ಮನಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಆರೋಪ ಕೇಳಿಬರುತ್ತಿದ್ದಂತೆ ಎಚ್ಚತ್ತುಕೊಂಡ ಸಂಸದೆ ಶೋಭಾ ಕರಂದ್ಲಾಜೆ, ಈ ಬಗ್ಗೆ ಚಿಕ್ಕಮಗಳೂರು ಪೊಲೀಸ್ ವರಿಷ್ಠರ ಜೊತೆ ಮಾತನಾಡಿದ್ದು, ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ. ಆ ಹುಡುಗಿ ಯಾಕೆ ಬಂದಿದ್ದಾಳೆ, ಆರೋಪಿತ ಮಹಿಳೆ ಇನ್ನೆಷ್ಟು ಅಪ್ರಾಪ್ತ ಮಕ್ಕಳನ್ನು ಹೀಗೆ ಬಳಸಿಕೊಂಡಿದ್ದಾಳೆ ಎಂದು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಶೃಂಗೇರಿಯಲ್ಲಿ ನಡೆದಿರುವ ಪ್ರಖರಣ ಅತ್ಯಂತ ಖಂಡನೀಯ, ಈ ಕುರಿತು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
— Shobha Karandlaje (@ShobhaBJP) February 3, 2021
ಪ್ರಕರಣ ಅಪ್ರಾಪ್ತ ಬಾಲಕಿಯ ಭವಿಷ್ಯದ ವಿಚಾರವಾದುದರಿಂದ, ಮಾಧ್ಯಮ ಹೇಳಿಕೆಗಳನ್ನು ನೀಡದೆ, ಪ್ರತಿನಿತ್ಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. pic.twitter.com/QfrLrT7Use
In a Shocking Incident, a 15-year-old Girl has been raped for months by 17 Men in Sringeri, Chikmagalur. Police are now investigating the case.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm