ಅರಂತೋಡು ; ಹಂದಿ ಬೇಟೆಗೆ ಹೋಗಿ ಜೊತೆಗಾರನಿಗೇ ಗುಂಡೇಟು ! ಮೂವರ ಬಂಧನ 

05-02-21 10:34 pm       Mangaluru Correspondent   ಕ್ರೈಂ

ಹಂದಿ ಬೇಟೆಗೆಂದು ಶಿಕಾರಿ ತೆರಳಿದ್ದ ವೇಳೆ ಕಾಡು ಪ್ರಾಣಿಗೆಂದು ಹಾರಿಸಿದ್ದ ಗುಂಡು ಜೊತೆಗಾರನಿಗೇ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ. 

ಸುಳ್ಯ, ಫೆ.5: ಹಂದಿ ಬೇಟೆಗೆಂದು ಶಿಕಾರಿ ತೆರಳಿದ್ದ ವೇಳೆ ಕಾಡು ಪ್ರಾಣಿಗೆಂದು ಹಾರಿಸಿದ್ದ ಗುಂಡು ಜೊತೆಗಾರನಿಗೇ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ. 

ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಅರಂತೋಡು ಬಳಿಯ ಅರಣ್ಯ ವಿಭಾಗದ ಪೂಮಲೆ ಬೆಟ್ಟದಲ್ಲಿ ನಾಲ್ವರು ಶಿಕಾರಿಗೆ ತೆರಳಿದ್ದರು.‌ ಕಾಡಿಗೆ ತಲುಪಿದ ಬಳಿಕ ಹಂದಿಯನ್ನು ಅಟ್ಟಿಸಲೆಂದು  ನಾಲ್ಕು ಕಡೆಗೆ ತೆರಳಿದ್ದು ಈ ಪೈಕಿ ಸತ್ಯಮೂರ್ತಿ ಎಂಬಾತನ ಮೇಲೆ ಗುಂಡೇಟು ಬಿದ್ದಿದೆ. ಕಾಡು ಹಂದಿಯೆಂದು ಶಬ್ದ ಕೇಳಿಬಂದಿದ್ದ ಕಡೆಗೆ ಗುಂಡು ಹಾರಿಸಿದ್ದು ಅಲ್ಲಿ ಕುಳಿತಿದ್ದ ಸತ್ಯಮೂರ್ತಿ ಮೇಲೆ ಹಲವು ಸುತ್ತುಗಳ ಗುಂಡು ಬಿದ್ದಿತ್ತು. ನಾಡಕೋವಿಯ ಗುಂಡು ಎದೆ, ತಲೆಯ ಭಾಗಕ್ಕೆ ಗುಂಡು ಬೀಳದ ಕಾರಣ ಆತ ಸಾವಿನಿಂದ ಬಚಾವಾಗಿದ್ದಾನೆ. ಕೂಡಲೇ ಅಲ್ಲಿಂದ ಎತ್ತಿಕೊಂಡು ಬಂದು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಘಟನೆ ಸಂಬಂಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇತರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಾಧಾಕೃಷ್ಣ (48) ಗಣೇಶ್ (35) ಮತ್ತು ಮೋನಪ್ಪ (50) ಬಂಧಿತರು. ಬೇಟೆಗೆ ತೆರಳಿದ್ದ ನಾಲ್ವರು ಕೂಡ ಅರಂತೋಡು ನಿವಾಸಿಗಳಾಗಿದ್ದಾರೆ.

Dakshina Kannada Police have arrested three persons in connection with alleged misfire during hunting.