ಬ್ರೇಕಿಂಗ್ ನ್ಯೂಸ್
07-02-21 12:43 pm Headline Karnataka News Network ಕ್ರೈಂ
ಅಶ್ಲೀಲ ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ ಆರೋಪದ ಮೇಲೆ ಖ್ಯಾತ ನಟಿ ಮತ್ತು ರೂಪದರ್ಶಿ ಗೆಹನಾ ವಸಿಷ್ಠ ಅವರನ್ನು ಮುಂಬೈ ಕ್ರೈಂ ಬ್ರಾಂಚ್ ಪೋಲೀಸರು ಬಂಧಿಸಿದ್ದಾರೆ.
ಆಕೆಯ ಜೊತೆ ಇನ್ನು ಅನೇಕ ರೂಪದರ್ಶಿಯರು ಸೇರಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಗೆಹನಾ ವಿಚಾರಣೆ ನಡೆಸಿದ ಪೊಲೀಸರು, ಇದುವರೆಗೂ ಸುಮಾರು 87ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ, ತನ್ನ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಅಲ್ಲದೆ ಆಕೆಯ ವೆಬ್ ಸೈಟ್ ಗೆ ಚಂದಾದಾರಲಾಗಲು 2000 ರೂ. ಪಾವತಿಸಬೇಕು ಎನ್ನುವ ಮಾಹಿತಿಯನ್ನು ಮುಂಬೈ ಪೊಲೀಸರು ಬಹಿರಂಗ ಪಡಿಸಿದ್ದಾರೆ.
ಬಂಧಿತರಲ್ಲಿ ವಯಸ್ಕ ಸಿನಿಮಾ ನಿರ್ದೇಶನ ಮಾಡುತ್ತಿದ್ದ ನಿರ್ದೇಶಕ, ನಿರ್ಮಾಪಕ ಮತ್ತು ಗ್ರಾಫಿಕ್ಸ್ ಡಿಸೈನರ್, ಕ್ಯಾಮರಾ ಮ್ಯಾನ್ ಸೇರಿದಂತೆ ಇಡೀ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಅವರ ಬ್ಯಾಂಕ್ ಖಾತೆಯನ್ನು ಸೀಸ್ ಮಾಡಿದ್ದಾರೆ.

ಗೆಹನಾ ಮತ್ತು ಆಕೆಯ ಗ್ಯಾಂಗ್ ಅಶ್ಲೀಲ ದೃಶ್ಯಗಳಲ್ಲಿ ನಟಿಸುವಂತೆ ಒತ್ತಾಯ ಮಾಡುತ್ತಿದ್ದರು ಎಂದು ಬಂಧಿತರಲ್ಲಿ ಮೂವರು ದೂರು ನೀಡಿದ್ದಾರೆ. ರಕ್ಷಿಸಿದ ಸಂತ್ರಸ್ತೆಯರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗೆಹನಾ ಮಿಸ್ ಏಷ್ಯಾ ಬಿಕಿನಿ ಕಿರಿಟವನ್ನು ಗೆದ್ದುಕೊಂಡಿದ್ದಾರೆ. ಅನೇಕ ಜಾಹೀರಾತು ಗಳಲ್ಲಿಯೂ ಮಿಂಚಿದ್ದಾರೆ. ಹಿಂದಿ ಮತ್ತು ತೆಲುಗು ಸಿನಿಮಾರಂಗದಲ್ಲೂ ಗೆಹನಾ ಗುರುತಿಸಿಕೊಂಡಿದ್ದಾರೆ. ವಯಸ್ಕ ವೆಬ್ ಸೀರಿಸ್ ನಲ್ಲೂ ಗೆಹನಾ ನಟಿಸಿದ್ದಾರೆ. ತನ್ನದೇ ಆದ ಮೊಬೈಲ್ ಅಪ್ಲಿಕೇಶನ್ ಹೊಂದಿರುವ ಗೆಹನಾ ಆಗಾಗ ಅಶ್ಲೀಲ ವಿಡಿಯೋಗಳನ್ನು ಹರಿಬಿಡುತ್ತಿರುತ್ತಾರೆ.
The Mumbai Police Crime Branch on Saturday arrested web series actor Gehana Vasisth in connection an FIR registered earlier this week in connection with forcing women to expose for porn movies. With the arrest of Vasisth, a total of six persons have been arrested in the case.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
06-12-25 04:58 pm
HK News Desk
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm