ಬ್ರೇಕಿಂಗ್ ನ್ಯೂಸ್
10-02-21 07:16 pm Mangaluru Correspondent ಕ್ರೈಂ
ಮಂಗಳೂರು, ಫೆ.10: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ನವಾಜ್ ಮೇಲೆ ತಲವಾರು ದಾಳಿ ನಡೆದಿದೆ. ಕಾಟಿಪಳ್ಳ ಸೆಕೆಂಡ್ ಕ್ರಾಸ್ ನಲ್ಲಿ ಘಟನೆ ನಡೆದಿದ್ದು ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ತಲವಾರು ದಾಳಿ ನಡೆಸಿದೆ.
ಕಾಟಿಪಳ್ಳ ನಿವಾಸಿಯಾಗಿರುವ ಪಿಂಕಿ ನವಾಜ್ ರೌಡಿ ಶೀಟರ್ ಆಗಿದ್ದು ರಸ್ತೆ ಬದಿ ನಿಂತಿದ್ದಾಗಲೇ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬಂದ ನಾಲ್ಕರಿಂದ ಐದು ಮಂದಿಯಿದ್ದ ತಂಡ ತಲವಾರು ಬೀಸಿದೆ. ಆದರೆ, ನವಾಜ್ ಓಡಿ ತಪ್ಪಿಸಿಕೊಂಡಿದ್ದು ಬೆನ್ನು ಮತ್ತು ಕೈಗೆ ತೀವ್ರ ಗಾಯಗೊಂಡಿದ್ದಾನೆ. ಬಳಿಕ ಆತನನ್ನು ನಗರದ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ದಾಳಿ ಮಾಡಿದವನನ್ನು ಶಾಕಿಬ್ ಯಾನೆ ಶಬ್ಬು ಎಂದು ಗುರುತಿಸಲಾಗಿದ್ದು ಸರಗಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಶಾಕಿಬ್ ಕೂಡ ಕಾಟಿಪಳ್ಳದ ನಿವಾಸಿಯೇ ಆಗಿದ್ದು ಯಾಕಾಗಿ ತಲವಾರು ದಾಳಿ ನಡೆಸಿದ್ದಾನೆ ಎನ್ನೋದು ಗೊತ್ತಾಗಿಲ್ಲ.
ನಾಲ್ಕು ವರ್ಷಗಳ ಹಿಂದೆ ಹಾಡುಹಗಲೇ ಕಾಟಿಪಳ್ಳ ಪೇಟೆಯ ಬಳಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ನಡೆದಿತ್ತು. ಅದರಲ್ಲಿ ಪಿಂಕಿ ನವಾಜ್ ಸೇರಿ ನಾಲ್ವರು ಆರೋಪಿಗಳಿದ್ದರು. ಕೊಲೆಯ ಬಳಿಕ ಅಲ್ಲಿಂದ ಪರಾರಿಯಾಗಿದ್ದು ಪೊಲೀಸರು ವಿಷಯ ತಿಳಿದು ಫಾಲೋ ಮಾಡಿದ್ದರು. ಕಿನ್ನಿಗೋಳಿಯಿಂದ ಮೂಡುಬಿದ್ರೆ ಕಡೆಗೆ ಕಾರಿನಲ್ಲಿ ಪರಾರಿಯಾಗುತ್ತಿದ್ದ ವೇಳೆ ಪೊಲೀಸರು ಅಡ್ಡಗಟ್ಟಿದ್ದರು. ಆರೋಪಿಗಳು ತಲವಾರು ಬೀಸಿದ್ದರಿಂದ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಈ ಪೈಕಿ ಪಿಂಕಿ ನವಾಜ್ ಕಾಲಿಗೂ ಗುಂಡು ಬಿದ್ದಿತ್ತು.
ಇಂದು ಸಂಜೆ ನವಾಜ್ ನನ್ನು ಗುರಿಯಾಗಿರಿಸಿ ದಾಳಿ ನಡೆದಿದೆ. ಪ್ರಾಥಮಿಕ ಮಾಹಿತಿಯಲ್ಲಿ ಶಾಕಿಬ್ ಮತ್ತು ತಂಡ ಈ ಕೃತ್ಯ ಎಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರ ನಡುವೆ, ಯಾವ ರೀತಿಯ ದ್ವೇಷ ಇತ್ತು ಎನ್ನೋದು ಗೊತ್ತಾಗಿಲ್ಲ. ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
Deepak Roa Murder accused Pinky Nawaz has been attacked by some miscreants with sword at Surathkal in Mangalore. The Surathkal police are investigating the case. Pinky Nawaz was one among the four accused of Deepak Rao Murder.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm