ಬ್ರೇಕಿಂಗ್ ನ್ಯೂಸ್
11-02-21 03:18 pm Mangalore Correspondent ಕ್ರೈಂ
ಮಂಗಳೂರು, ಫೆ.11; ತುಳು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಕನ್ನಡದ ಚಿತ್ರರಂಗದ ಖ್ಯಾತ ನಟಿ ಪದ್ಮಜಾ ರಾವ್ ವಿರುದ್ಧ ಮಂಗಳೂರಿನ ಕೋರ್ಟಿನಲ್ಲಿ ವಂಚನೆ ಕೇಸು ದಾಖಲಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಪದ್ಮಜಾ ರಾವ್, ಚಾಲಿಪೋಲಿಲು ಚಿತ್ರದಲ್ಲಿ ನಟಿಸುತ್ತಿದ್ದಾಗ ಅದರ ನಿರ್ದೇಶನ ಮಾಡುತ್ತಿದ್ದ ವೀರೇಂದ್ರ ಶೆಟ್ಟಿ ಬಳಿಯಿಂದ ಹಣ ಪಡೆದಿದ್ದರು. ವೈಯಕ್ತಿಕವಾಗಿ ಒಂದು ಲಕ್ಷ , ಎರಡು ಲಕ್ಷವೆಂದು ಹಣ ಸಾಲ ಪಡೆದಿದ್ದು, ಹಿಂತಿರುಗಿ ಕೊಟ್ಟಿರಲಿಲ್ಲ. 2018ರಿಂದ 19ರ ನಡುವೆ ಸುಮಾರು 41 ಲಕ್ಷ ರೂಪಾಯಿ ಹಣವನ್ನು ಸಾಲ ಪಡೆದಿದ್ದು, ಹಿಂತಿರುಗಿಸದೆ ವಂಚಿಸಿದ್ದಾರೆಂದು ವೀರೇಂದ್ರ ಶೆಟ್ಟಿ ಮಂಗಳೂರಿನ ಕೋರ್ಟಿನಲ್ಲಿ ದೂರು ದಾಖಲಿಸಿದ್ದಾರೆ.
ಒಂದು ಲಕ್ಷ ರೂ. ಮಾತ್ರ ನಗದು ರೂಪದಲ್ಲಿ ಕೊಟ್ಟಿದ್ದು, ಉಳಿದೆಲ್ಲವನ್ನೂ ಚೆಕ್ ರೂಪದಲ್ಲಿ ನೀಡಿದ್ದೆ. ಅಲ್ಲದೆ, ತನ್ನ ಪ್ರೊಡಕ್ಷನ್ ಹೌಸ್ ವೀರು ಟಾಕೀಸ್ ಹೆಸರಲ್ಲೇ ಹಣವನ್ನು ಸಾಲ ನೀಡಿದ್ದೆ. ಹಾಗಾಗಿ ಹಣ ನೀಡಿದ್ದಕ್ಕೆ ದಾಖಲೆ ಇದೆ. ಬದಲಿಗೆ, ಪದ್ಮಜಾ ರಾವ್ ಖಾಲಿ ಚೆಕ್ ನೀಡಿದ್ದರು. ಕಳೆದ 2020ರ ಸೆಪ್ಟಂಬರ್ ತಿಂಗಳಲ್ಲಿ ಚೆಕ್ ಬೌನ್ಸ್ ಕೇಸು ಮಾಡಿದ್ದು ನೋಟೀಸ್ ಹೋಗಿತ್ತು. ನೋಟಿಸಿಗೆ ಉತ್ತರ ನೀಡದ ಕಾರಣ ಮತ್ತೆ ನವೆಂಬರ್ ನಲ್ಲಿ ವಿಚಾರಣೆಗೆ ಬಂದಿತ್ತು. ಆಗಲೂ ನಟಿ ಕ್ಯಾರ್ ಮಾಡದೆ, ನೋಟೀಸಿಗೆ ಉತ್ತರವನ್ನೂ ನೀಡಿರಲಿಲ್ಲ. ಇದೀಗ ಮಂಗಳೂರಿನ ಜೆಎಂಎಫ್ 5ನೇ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು, ಬೆಂಗಳೂರಿನ ಕಲಘಟ್ಟ ಪೊಲೀಸರಿಗೆ ಬಂಧಿಸಿ ಕರೆತರುವಂತೆ ಸೂಚನೆ ನೀಡಿದ್ದಾಗಿ ವೀರೇಂದ್ರ ಶೆಟ್ಟಿ ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.
ಪದ್ಮಜಾ ರಾವ್, ಕನ್ನಡದ ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿದ್ದು ಮುಂಗಾರು ಮಳೆ ಚಿತ್ರದ ಬಳಿಕ ಖ್ಯಾತಿ ಗಳಿಸಿದ್ದರು. ಇತ್ತೀಚೆಗೆ ತುಳು ಚಿತ್ರಗಳಲ್ಲಿಯೂ ಪದ್ಮಜಾ ಕಾಣಿಸಿಕೊಂಡಿದ್ದರು. ಕೋರ್ಟಿನಲ್ಲಿ ಮುಂದಿನ ವಿಚಾರಣೆ ಮಾರ್ಚ್ 9ಕ್ಕೆ ಇದ್ದು, ಪದ್ಮಜಾರನ್ನು ಪೊಲೀಸರು ಬಂಧಿಸಿ ಹಾಜರು ಮಾಡಬೇಕಿದೆ.
The JMF Mangalore court has issued a Non-Bailable warrant against Kannada Actress Padmaja Rao over cheque Bounce Case. She had borrowed loan from Tulu Director Veerendra Shetty Kavoor.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 02:51 pm
HK News Desk
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm