ಬ್ರೇಕಿಂಗ್ ನ್ಯೂಸ್
12-02-21 12:43 pm Headline Karnataka News Network ಕ್ರೈಂ
ಹೊನ್ನಾವರ, ಫೆ.12 : ಅಮೆರಿಕದಲ್ಲಿ ಉದ್ಯೋಗ ಗಿಟ್ಟಿಸುವ ಆಸೆಗೆ ಬಿದ್ದ ಯುವತಿಯೊಬ್ಬಳು ಜಾಲತಾಣದ ವಂಚನೆಗೊಳಗಾಗಿ ಲಕ್ಷಾಂತರ ರೂಪಾಯಿ ಕಳಕೊಂಡ ಘಟನೆ ಹೊನ್ನಾವರದಲ್ಲಿ ನಡೆದಿದೆ.

ಹೊನ್ನಾವರ ತಾಲೂಕಿನ ನೇತ್ರಾವತಿ (25) ಹಣ ಕಳೆದುಕೊಂಡ ಯುವತಿ. ನರ್ಸಿಂಗ್ ಕೋರ್ಸ್ ಮಾಡಿದ್ದ ನೇತ್ರಾವತಿ ಕೆಲವು ವರ್ಷ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದರು. ಕಳೆದ ಲಾಕ್ಡೌನ್ ಬಳಿಕ ತಮ್ಮೂರಿಗೆ ಬಂದು, ಬೇರೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತಿದ್ದರು. ಮತ್ತೆ ವಿದೇಶದಲ್ಲೇ ಉದ್ಯೋಗ ಮಾಡುವ ಆಕಾಂಕ್ಷೆಯಿಂದ ಜಾಲತಾಣದಲ್ಲಿ ಅರ್ಜಿ ಹಾಕಿ, ಹುಡುಕಾಟದಲ್ಲಿ ತೊಡಗಿದ್ದರು. ಇದೇ ವೇಳೆ, ನೇತ್ರಾವತಿ ಇ-ಮೇಲ್ ಗೆ ಮೇಲ್ ಸಂದೇಶ ಬಂದಿದ್ದು ಅಮೆರಿಕದಲ್ಲಿ ನರ್ಸಿಂಗ್ ಉದ್ಯೋಗದ ಭರವಸೆ ನೀಡಿದ್ದರು. ಅದನ್ನು ನಂಬಿ ಅರ್ಜಿ ಹಾಕಿದ್ದ ನೇತ್ರಾವತಿ ಆರು ತಿಂಗಳಲ್ಲಿ ಸರದಿಯಂತೆ ಬರೋಬ್ಬರಿ 57.14 ಲಕ್ಷ ಕಳೆದುಕೊಂಡಿದ್ದಾರೆ.

ಅಪರಿಚಿತ ಇ-ಮೇಲ್ ಸಂದೇಶದಲ್ಲಿ ಉದ್ಯೋಗಾವಕಾಶ ಹಾಗೂ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ನಮೂದಿಸಿದ್ದರು. ಅದಕ್ಕೆ ಕರೆ ಮಾಡಿದ್ದ ನೇತ್ರಾವತಿ ತನ್ನ ಪರಿಚಯ ಹೇಳಿಕೊಂಡಿದ್ದರು. ಕರೆ ಸ್ವೀಕರಿಸಿದ್ದ ವಂಚಕರು, ಯುವತಿಗೆ ನೇರವಾಗಿ ಪ್ರಶ್ನೆ ಪತ್ರಿಕೆ ಕಳುಹಿಸಿಕೊಟ್ಟು ಇಂಟರ್ವ್ಯೂ ಎಂದು ಉತ್ತರಿಸುವಂತೆ ತಿಳಿಸಿದ್ದರು. ಉತ್ತರ ಪತ್ರಿಕೆಯ ಬಳಿಕ ಆರೋಪಿಗಳು ಪಾಸ್‍ಪೋರ್ಟ್, ವೀಸಾ, ವೈದ್ಯಕೀಯ ಪ್ರಮಾಣಪತ್ರ, ಆರೋಗ್ಯ ವಿಮೆ ಮುಂತಾದವುಗಳಿಗೆ ಶುಲ್ಕ, ತೆರಿಗೆ ಪಾವತಿಸಲು ಹೇಳಿದ್ದರು. ಇದನ್ನು ನಿಜವೆಂದೇ ನಂಬಿದ ನೇತ್ರಾವತಿ, ಆರೋಪಿಗಳು ನೀಡಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ 2020ರ ಆ.13ರಿಂದ 2021ರ ಜ.17ರ ತನಕ ಹಂತ ಹಂತವಾಗಿ 57.14 ರೂ. ಲಕ್ಷ ಹಣ ಜಮೆ ಮಾಡಿದ್ದಾರೆ.

ಅಮೆರಿಕದಲ್ಲಿ ಭಾರೀ ಸಂಬಳದ ಉದ್ಯೋಗವನ್ನು ನಂಬಿ ತಮ್ಮ ಸಂಪಾದನೆ, ಸಂಬಂಧಿಕರಲ್ಲಿ, ಪರಿಚಯಸ್ಥರಲ್ಲಿ, ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ಹಣ ಹೊಂದಿಸಿದ್ದ ನೇತ್ರಾವತಿಯವರು ಆರು ತಿಂಗಳ ಅವಧಿಯಲ್ಲಿ ಇಷ್ಟೆಲ್ಲಾ ಹಣ ಪಾವತಿಸಿದ್ದರೂ ನೇಮಕಾತಿ ಆದೇಶ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಹಿಂದೆ ಸಂಪರ್ಕಿಸಿದ ದೂರವಾಣಿ ನಂಬರಿಗೆ ಕರೆ ಮಾಡಿ ಕೇಳಿದರೆ, ಅವರಿಂದ ಯಾವುದೇ ರೀತಿಯ ಸ್ಪಷ್ಟನೆಯಾಗಲೀ ಹಣ ಮರಳಿಸುವ ಬಗ್ಗೆ ಪ್ರತಿಕ್ರಿಯೆಯೂ ಬರಲಿಲ್ಲ. ಇದರಿಂದ ನೇತ್ರಾವತಿಗೆ ತಾನು ಮೋಸ ಹೋಗಿದ್ದು ಅರಿವಿಗೆ ಬಂದಿದ್ದು, ಕಾರವಾರದ ಸೈಬರ್ ಅಪರಾಧ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.
Read: Exclusive: ಕೆನಡಾದಲ್ಲಿ ನರ್ಸಿಂಗ್ ನೌಕರಿ ! ತಿಂಗಳಿಗೆ ಮೂರು ಲಕ್ಷ ವೇತನ ! ಉದ್ಯೋಗಕ್ಕೆ ನೋಂದಾಯಿಸಿದರೆ ಖೋತಾ !!
28-10-25 07:18 pm
Bangalore Correspondent
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
28-10-25 03:36 pm
Mangalore Correspondent
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm