ಬ್ರೇಕಿಂಗ್ ನ್ಯೂಸ್
18-02-21 02:08 pm Mangaluru Correspondent ಕ್ರೈಂ
ಮಂಗಳೂರು, ಫೆ.18: ಯುವಕರು ಕುಂಡೆ ಒಳಗಿಟ್ಟುಕೊಂಡು ಚಿನ್ನ ತರುವುದು ಈವರಗೆ ಪತ್ತೆ ಆಗಿತ್ತು. ಈಗ ಮಹಿಳೆಯೊಬ್ಬರು ಸ್ಯಾನಿಟರಿ ಪ್ಯಾಡ್ ನಲ್ಲಿ ಚಿನ್ನವನ್ನು ಪೇಸ್ಟ್ ರೂಪಕ್ಕಿಳಿಸಿ ಕಳ್ಳಸಾಗಣಿಕೆ ಮಾಡಿ ಸಿಕ್ಕಿಬಿದ್ದಿದ್ದಾರೆ. ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿಮಾನದಲ್ಲಿ ಮಹಿಳೆ ಅಪರಾವತಾರ ಮಾಡಿ ಕಸ್ಟಮ್ಸ್ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಕೊಟ್ಟಚ್ಚೇರಿ ನಿವಾಸಿ ಫಾತಿಮಾ(47) ಎಂಬಾಕೆಯನ್ನು ಸಂಶಯದಿಂದ ತಪಾಸಣೆ ನಡೆಸಲಾಗಿತ್ತು. ಮಹಿಳಾ ವಿಭಾಗದ ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಒಳ ಉಡುಪಿನಲ್ಲಿ ಚಿನ್ನ ಇರುವುದು ತಿಳಿದುಬಂದಿದೆ. ಕೂಲಂಕಷ ತನಿಖೆ ನಡೆದ ಬಳಿಕ ಆಕೆ ಹಾಕ್ಕೊಂಡಿದ್ದ ಸ್ಯಾನಿಟರಿ ಪ್ಯಾಡ್ ನಲ್ಲಿ 38 ಲಕ್ಷ ರೂ. ಮೌಲ್ಯದ 805 ಗ್ರಾಂ ಚಿನ್ನ ಪತ್ತೆಯಾಗಿದೆ.
ದುಬೈನಿಂದ ಬಂದಿದ್ದ ಅದೇ ಫ್ಲೈಟಿನಲ್ಲಿ ಇನ್ನೊಬ್ಬನೂ ಅಕ್ರಮ ಚಿನ್ನ ಇರಿಸಿಕೊಂಡು ಬಂದು ಸಿಕ್ಕಿಬಿದ್ದಿದ್ದಾನೆ. ಭಟ್ಕಳ ಮೂಲದ ಮೊಹಮ್ಮದ್ ಮೊಹಿದೀನ್ (50) ತನ್ನ ಗುದ ದ್ವಾರದ ಒಳಗೆ ಉಂಡೆ ಗಾತ್ರದ ಚಿನ್ನವನ್ನು ಇರಿಸಿಕೊಂಡು ಬಂದಿದ್ದ. ಪೇಸ್ಟ್ ರೂಪದಲ್ಲಿ ಇರಿಸಿದ್ದ ಎರಡು ಚಿನ್ನದ ಉಂಡೆ ಸಿಕ್ಕಿದ್ದು ಅದರಲ್ಲಿ 14.63 ಲಕ್ಷ ಮೌಲ್ಯದ 303 ಗ್ರಾಮ್ ಚಿನ್ನ ಪತ್ತೆಯಾಗಿದೆ.
ಕಸ್ಟಮ್ಸ್ ಇಲಾಖೆಯ ಡೆಪ್ಯುಟಿ ಕಮಿಷನರ್ ಅವಿನಾಶ್ ಕಿರಣ್ ನೇತೃತ್ವದಲ್ಲಿ ಸುಪರಿಡೆಂಟ್ ಮನು ಕಾತ್ಯಾಯಿನಿ, ಬಿಕ್ರಮ್ ಚಕ್ರವರ್ತಿ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುದ್ದಿ ಕೊಡದೆ ಸತಾಯಿಸಿದ ಅಧಿಕಾರಿಗಳು !
ಕಸ್ಟಮ್ಸ್ ಇಲಾಖೆಯಿಂದ ಚಿನ್ನ ಪತ್ತೆಯಾದ ಬಗ್ಗೆ ಬೆಳಗ್ಗೆ ಟ್ವೀಟ್ ಮಾಡಲಾಗಿತ್ತು. ಯಾರು, ಏನು, ಬಂಧನ ಆಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡದೆ ಒಂದು ಕೇಜಿ ಚಿನ್ನ ವಶಕ್ಕೆ ಅಂತಷ್ಟೆ ಮಾಹಿತಿ ಕೊಟ್ಟಿದ್ದರು. ಹೆಡ್ ಲೈನ್ ಕರ್ನಾಟಕದಿಂದ ಈ ಬಗ್ಗೆ ಅಸಿಸ್ಟೆಂಟ್ ಕಮಿಷನರ್ ಕಪಿಲ್ ಗದೆ ಅವರನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಕೇಳಿಕೊಳ್ಳಲಾಯಿತು. ಕೊಡ್ತೀವಿ ಎಂದಿದ್ದರು. ಮತ್ತೆರಡು ಲೈನ್ ಸೇರಿಸಿ ವಾಟ್ಸಪ್ ಮಾಡಿದ್ರು. ಬಂಧಿತರ ಮಾಹಿತಿ ಇರಲಿಲ್ಲ. ಹಾಗಾಗಿ, ನೀವು ಸುದ್ದಿ ಕೊಡೋದಾದ್ರೆ ಪೂರ್ತಿಯಾಗಿ ಕೊಡಿ. ಇಲ್ಲಾಂದ್ರೆ ಬೇಡ ಎಂದಿದ್ದೆವು. ಸಂಜೆ ನಾಲ್ಕು ಗಂಟೆಗೆ ಕಾರ್ಯಾಚರಣೆ ಬಗ್ಗೆ ಕಡೆಗೂ ಅರ್ದಂಬರ್ಧ ಮಾಹಿತಿಗಳನ್ನು ಕೊಟ್ಟುಬಿಟ್ಟರು. ಪ್ರತಿ ಬಾರಿಯೂ ಕಸ್ಟಮ್ಸ್ ಕಾರ್ಯಾಚರಣೆ ನಡೆಯುತ್ತದೆ. ಅವರು ಕೊಟ್ಟಿದ್ದೇ ಮಾಹಿತಿ. ಅದಷ್ಟೇ ಕಟ್ ಅಂಡ್ ಪೇಸ್ಟ್ ಸುದ್ದಿ. ಎಷ್ಟೋ ಬಾರಿ ಸುದ್ದಿಯನ್ನೇ ಕೊಡಲ್ಲ. ಕೆಲವು ಪ್ರಕರಣಗಳು ಅಲ್ಲಿಗೇ ಮುಚ್ಚಿ ಹೋಗುವುದೂ ಇರುತ್ತದೆ. ಬಂಧಿಸಿದರೆ ಮುಂದಿನ ಕ್ರಮಕ್ಕೆ ಆರೋಪಿಗಳನ್ನು ಬಜ್ಪೆ ಠಾಣೆಗೆ ಹಸ್ತಾಂತರ ಮಾಡಲಾಗುತ್ತದೆ. ಆಬಳಿಕ ಏನಾಗುತ್ತದೆ, ಏನು ಕ್ರಮ ಆಯ್ತು ಅನ್ನೋದು ಗೊತ್ತಾಗುವುದೇ ಇಲ್ಲ..!
Customs officials at the Mangaluru International Airport seized over a kilo of gold that was being smuggled by two passengers by a women in her sanitary Pad. The seized gold recovered from the duo is worth Rs 53,51,640.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 02:51 pm
HK News Desk
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm