ಬ್ರೇಕಿಂಗ್ ನ್ಯೂಸ್
18-02-21 09:02 pm Mangaluru Correspondent ಕ್ರೈಂ
ಉಳ್ಳಾಲ, ಫೆ.18: ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ಸ್ಮಾರ್ಟ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿ ಮೊಬೈಲ್ ಅಂಗಡಿಗೆ ಬಂದಿದ್ದ ಗಾಂಜಾ ವ್ಯಸನಿ ರೌಡಿಯೊಬ್ಬ ದಾಂಧಲೆಗೈದ ಘಟನೆ ಗುರುವಾರ ಸಂಜೆ ನಡೆದಿದೆ.
ರೌಡಿಯ ವಿರುದ್ಧ ದೂರು ಕೊಟ್ಟ ಮೊಬೈಲ್ ಅಂಗಡಿಯ ಯುವಕನಿಗೆ ಪೊಲೀಸರ ಸಮ್ಮುಖದಲ್ಲೇ ಕಲ್ಲೆಸೆದಿದ್ದಲ್ಲದೆ, ನಂತರ ಮೊಬೈಲ್ ಅಂಗಡಿಗೆ ತೆರಳಿ ತಲವಾರು ಝಳಪಿಸಿ ಬೆದರಿಸಿದ್ದಾನೆ. ಸ್ಮಾರ್ಟ್ ಸಿಟಿ ಕಟ್ಟಡದಲ್ಲಿರುವ ಸ್ಪೋರ್ಟ್ಸ್ ವಿನ್ನರ್ ಎನ್ನುವ ಕ್ರೀಡಾ ಪರಿಕರಗಳ ಮಳಿಗೆಯ ಪಾಲುದಾರ ಎನ್ನಲಾದ ಉಳ್ಳಾಲದ ಸುಭಾಷ್ ನಗರ ನಿವಾಸಿ ಸವಾದ್ ಯಾನೆ ಶವ್ವ ಎಂಬಾತನೇ ಧಾಂದಲೆಗೈದ ರೌಡಿ. ಈತ ಸಂಜೆ ಹೊತ್ತಿಗೆ ಅದೇ ಕಟ್ಟಡದಲ್ಲಿರುವ ಬ್ಲಾಸ್ಟ್ ಎಂಬ ಮೊಬೈಲ್ ಅಂಗಡಿಗೆ ತೆರಳಿ ಕ್ಷುಲ್ಲಕ ಕಾರಣ ಎತ್ತಿ ಅಲ್ಲಿನ ಗಾಜು ಇನ್ನಿತರ ಸೊತ್ತುಗಳನ್ನು ಚಾಕುವಿನಿಂದ ಒಡೆದು ಹಾಕಿದ್ದಾನೆ ಎನ್ನಲಾಗಿದೆ.
ಅಂಗಡಿ ಮಾಲೀಕ ನೌಫಾಲ್ ಕೂಡಲೇ (ಸಂಜೆ 6.40ರ ವೇಳೆಗೆ) ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದು ಬಂದಿದ್ದಾರೆ. ಈ ವೇಳೆ ಕಟ್ಟಡದಲ್ಲೇ ಇದ್ದ ರೌಡಿ ಸವಾದ್ ಪೊಲೀಸರಿಬ್ಬರು ನೋಡುತ್ತಿದ್ದಂತೆಯೇ ದೂರು ನೀಡಿದ್ದ ನೌಫಾಲನ್ನು ಗುರಿಯಾಗಿಸಿ ಜಲ್ಲಿ ಕಲ್ಲುಗಳನ್ನು ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಧಾಂದಲೆ ನಡೆಸಿದ್ದಾನೆ. ಎಸೆದ ಕಲ್ಲುಗಳು ಅಲ್ಲಿ ನೆರೆದಿದ್ದ ಸಾರ್ವಜನಿಕರ ಮೇಲೆ ಬೀಳುವುದರಿಂದ ಸ್ವಲ್ಪದರಲ್ಲೇ ತಪ್ಪಿದೆ.
ಪೊಲೀಸರು ತೆರಳಿದ ನಂತರ ಮತ್ತೆ ಬಂದ ಸವಾದ್ ಮೊಬೈಲ್ ಅಂಗಡಿಯತ್ತ ತೆರಳಿ ಮತ್ತೆ ಅಲ್ಲಿ ಬಾಟಲಿಯನ್ನು ಒಡೆದು ತಲವಾರು ಝಲಪಿಸಿದ್ದಾನೆಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಮತ್ತೆ ಬಂದ ಪಿ.ಎಸ್.ಐ ರೇವಣ ಸಿದ್ದಯ್ಯ ಬಳಿ ಅಲ್ಲಿನ ವ್ಯಾಪಾರಿಗಳು ಘಟನೆಯ ಬಗ್ಗೆ ವಿವರಿಸಿ ಆರೋಪಿಯ ಬಂಧನಕ್ಕೆ ಒತ್ತಾಯಿಸಿದ್ದಾರೆ. ಸವಾದ್ ಈ ಹಿಂದೆಯೂ ಇದೇ ಕಟ್ಟಡದಲ್ಲಿ ಗಲಾಟೆ ನಡೆಸಿದ್ದನೆನ್ನಲಾಗಿದೆ. ಸವಾದ್ ಮಾದಕ ವ್ಯಸನಿಯಾಗಿದ್ದು ಪದೇ ಪದೇ ಕಟ್ಟಡದಲ್ಲಿ ಗಲಾಟೆ ನಡೆಸುತ್ತಾ ಬಂದಿದ್ದಾನೆ. ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಅಲ್ಲಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದ್ದು ರೌಡಿ ನಡೆಸಿದ ಭಯಾನಕ ಕೃತ್ಯಗಳು ದಾಖಲಾಗಿವೆ. ಕೊನೆಗೆ, ಮತ್ತೆ ಕಟ್ಟಡಕ್ಕೆ ಎಂಟ್ರಿ ಕೊಟ್ಟ ಸವಾದ್ ನನ್ನು ಅಲ್ಲಿನ ನಿವಾಸಿಗಳೇ ಹಿಡಿದಿಟ್ಟು ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ಮೂಕ ಪ್ರೇಕ್ಷಕರಾಗಿ ವರ್ತಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.
Miscreant Damages Mobile shop using stones and also shows sword to public and creates panic at Thokottu in Mangalore. The Konaje Polie have arrested the accused.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm