ಬ್ರೇಕಿಂಗ್ ನ್ಯೂಸ್
20-02-21 06:09 pm Mangalore Correspondent ಕ್ರೈಂ
ಮಂಗಳೂರು, ಫೆ.20: ಕಳೆದ ಅಕ್ಟೋಬರ್ 30ರಂದು ಫಳ್ನೀರ್ ನಲ್ಲಿ ಹೊಟೇಲಿಗೆ ಬಂದಿದ್ದ ತಂಡವೊಂದು ದಾಂಧಲೆ ನಡೆಸಿತ್ತು. ಪಿಸ್ತೂಲ್ ತೋರಿಸಿ, ಹೊಟೇಲ್ ಸಿಬಂದಿಯನ್ನು ಬೆದರಿಸಿ ಪರಾರಿಯಾಗಿತ್ತು. ಅಂದು ನಾಲ್ಕು ಮಂದಿಯನ್ನು ಹೊಟೇಲ್ ಸಿಬಂದಿಯೇ ಹಿಡಿದು ಕೊಟ್ಟಿದ್ದರು. ಘಟನೆ ಬಳಿಕ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಮತ್ತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆದರೆ, ಪ್ರಮುಖ ಆರೋಪಿ ಪಿಸ್ತೂಲ್ ತೋರಿಸಿ ಬೆದರಿಸಿದ್ದ ಉಳ್ಳಾಲದ ಸಮೀರ್ ನನ್ನು ಪೊಲೀಸರು ಬಂಧಿಸಿರಲಿಲ್ಲ.
ಪ್ರಕರಣ ನಡೆದು ಮೂರೂವರೆ ತಿಂಗಳ ಬಳಿಕ ಈಗ ಇಬ್ಬರು ಆರೋಪಿಗಳನ್ನು ಸಿಸಿಬಿ ತಂಡ ಬಂಧಿಸಿದೆ. ಪಿಸ್ತೂಲ್ ನಲ್ಲಿ ಗುಂಡು ಹಾರಿಸಿ ಕೊಲೆಯತ್ನ ನಡೆಸಿದ್ದ ಉಳ್ಳಾಲ ನಿವಾಸಿ ಮಹಮ್ಮದ್ ಸಮೀರ್ (29) ಮತ್ತು ಮೊಹಮ್ಮದ್ ಅರ್ಫಾನ್ (23) ಬಂಧಿತರು. ಸಮೀರ್ ಮತ್ತು ಸಹಚರರು ಅಂದು ಎರಡು ಕಾರುಗಳಲ್ಲಿ ಫಳ್ನೀರಿಗೆ ಬಂದಿದ್ದು ಎಂಎಫ್ ಸಿ ಖಟ್ಟಾಮೀಟಾ ಚಹಾ ಕುಡಿಯುವ ನೆಪದಲ್ಲಿ ಹೊಟೇಲಿಗೆ ನುಗ್ಗಿದ್ದರು. ಹೊಟೇಲಿನಲ್ಲಿ ಸಮೋಸಾ ಬಿಸಿಯಿಲ್ಲ ಎಂಬ ಕಾರಣಕ್ಕೆ ತಕರಾರು ಆಗಿದ್ದು ಈ ಬಗ್ಗೆ ಸಿಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಹೊಟೇಲ್ ಕೂಡ ಉಳ್ಳಾಲದ ಮುಸ್ಲಿಮ್ ಒಬ್ಬರಿಗೆ ಸೇರಿದ್ದಾಗಿದ್ದು ಸಿಬಂದಿಗಳು ಅಲ್ಲಿನವರೇ ಆಗಿದ್ದರು. ಸಮೋಸಾ ವಿಚಾರದ ತಕರಾರಿನಲ್ಲಿ ಮಾತಿಗೆ ಮಾತು ಬೆಳೆದಿದ್ದು ಗಲಾಟೆ ಆಗಿದೆ. ಮೇಜು, ಕುರ್ಚಿಗೆ ಹಾನಿ ಮಾಡಿದ್ದು ಹೊಡೆದಾಟ ನಡೆದಿದೆ. ಗಾಜು ಪುಡಿ ಮಾಡಿದ್ದಾರೆ. ಬಳಿಕ ಸಮೀರ್ ಹೊಟೇಲ್ ಸಿಬಂದಿ ಮೇಲೆ ತನ್ನ ಪಿಸ್ತೂಲ್ ನಲ್ಲಿ ಫೈರ್ ಮಾಡಿದ್ದಾನೆ. ಒಬ್ಬನ ಕಾಲಿಗೆ ಮತ್ತು ಮತ್ತೊಬ್ಬನ ಕುಂಡೆಗೆ ಗುಂಡು ತಗಲಿತ್ತು. ಇವೆಲ್ಲವೂ ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಸ್ಥಳದಲ್ಲೇ ಮೂವರನ್ನು ಸಿಬಂದಿ ಹಿಡಿದು ಕೊಟ್ಟಿದ್ದರು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಬಿ ನೆರವಿನಲ್ಲಿ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಪ್ರಮುಖ ಆರೋಪಿ ಸಮೀರನ ಬಂಧನ ಮಾತ್ರ ಆಗಿರಲಿಲ್ಲ.
ಪ್ರಕರಣ ನಡೆದು ಮೂರು ತಿಂಗಳು ಕಳೆದಿದೆ. ಬಂಧಿತರಾಗಿದ್ದವರು ಜಾಮೀನು ಪಡೆದು ಹೊರಬಂದಿದ್ದಾರೆ. ಈಗ ಎಲ್ಲ ಮುಗೀತು ಅನ್ನುವಷ್ಟರಲ್ಲಿ ಸಮೀರ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಕೂಡ ನೋಟೆಡ್ ಕ್ರಿಮಿನಲ್ ಆಗಿದ್ದು ಸಮೀರ್ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಇಲ್ಯಾಸನ್ನು ಕೊಲೆಗೈದಿದ್ದ ದಾವೂದ್ ತಂಡದ ಸದಸ್ಯನೂ ಆಗಿದ್ದಾನೆ. ಆವತ್ತು ಲೈಸೆನ್ಸ್ ಇಲ್ಲದೆ ಪಿಸ್ತೂಲ್ ಹೊಂದಿರುವುದು, ಸಾರ್ವಜನಿಕ ಪ್ರದೇಶದಲ್ಲಿ ಗುಂಡು ಹಾರಿಸಿ ಭೀತಿ ಮೂಡಿಸಿದ್ದು ನಡೆದಿದ್ದರೂ ಪೊಲೀಸರು ಬಂಧಿಸದೆ ಬಿಟ್ಟಿದ್ದು ಈಗ ಸಂಶಯಕ್ಕೆ ಕಾರಣವಾಗಿದೆ. ಅಂದು ಪಿಸ್ತೂಲ್ ಬಗ್ಗೆ ಕೇಳಿದಾಗ, ಅದು ಏರ್ ಗನ್ ಎಂದಿದ್ದರು ಪೊಲೀಸ್ ಅಧಿಕಾರಿಗಳು. ಏರ್ ಗನ್ ಇಟ್ಟುಕೊಳ್ಳಲು ಲೈಸೆನ್ಸ್ ಬೇಕಿಲ್ಲ ಎಂದಿದ್ದರು.
ಈಗ ಇಬ್ಬರು ನಟೋರಿಯಸ್ ಗಳನ್ನು ಹಿಡಿದಿದ್ದಾಗಿ ಪ್ರೆಸ್ ರಿಲೀಸ್ ಕೊಟ್ಟಿದ್ದಾರೆ. ಈ ಬಗ್ಗೆ ಪೊಲೀಸ್ ಕಮಿಷನರ್ ಬಳಿ ಕೇಳಿದಾಗ, ವಿಚಿತ್ರ ಉತ್ತರ ಕೊಟ್ಟಿದ್ದಾರೆ. ಅಭೀ ಟ್ರೈಲರ್ ಹೈ.. ಪಿಕ್ಚರ್ ಭೀ ಬಾಕೀ ಹೈ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಮಂಗಳೂರಿನ ಸಿಸಿಬಿ ಕೇಂದ್ರಿತವಾಗಿ ಭಾರೀ ವಹಿವಾಟು ನಡೆದಿರುವ ಆರೋಪಗಳು ಕೇಳಿಬಂದಿದ್ದವು. ಕಾರು ಮಾರಾಟ ಪ್ರಕರಣ, ಸುರೇಶ್ ಬಂಟ್ವಾಳ್ ಹತ್ಯೆ ಪ್ರಕರಣದಲ್ಲಿ ಹೈಲೆವೆಲ್ ಸಂಚು ಮತ್ತು ವಹಿವಾಟು ನಡೆದಿರುವ ಆರೋಪ ಕೇಳಿಬಂದು ಒಂದು ಪ್ರಕರಣದಲ್ಲಿ ಈಗ ಇಲಾಖಾ ತನಿಖೆಯೂ ನಡೆದಿತ್ತು. ಈಗ ಒಬ್ಬ ನೋಟೆಡ್ ಆರೋಪಿಯನ್ನು ಅಂದಿನ ಪ್ರಕರಣದಲ್ಲಿ ಅಧಿಕಾರಿಗಳು ಬಂಧಿಸದೆ ಉಳಿಸಿಕೊಂಡಿದ್ದರು ಎನ್ನುವ ವಿಚಾರ ಸಹಜವಾಗೇ ಕುತೂಹಲ ಕೆರಳಿಸಿದೆ. ಸಮೀರ್ ಆಪ್ತ ದಾವೂದ್ ವಿದೇಶದಲ್ಲಿದ್ದು ಉಳ್ಳಾಲದಲ್ಲಿ ಮತ್ತೊಂದು ಗ್ಯಾಂಗ್ ಕಟ್ಟಿಕೊಂಡು ವಹಿವಾಟು ನಡೆಸುತ್ತಿದ್ದಾನೆ. ಇಂಥ ಸಂದರ್ಭದಲ್ಲೇ ದಾವೂದ್ ಆಪ್ತ ಸಮೀರ್ ಬಂಧನವಾಗದೆ ಉಳಿದುಕೊಂಡಿದ್ದಾನೆ. ಇದರ ಹಿಂದಿನ ಅಜೆಂಡಾ ಏನಿದ್ದಿರಬಹುದು ಅನ್ನೋ ಪ್ರಶ್ನೆ , ಕುತೂಹಲ ಸಹಜ.
ಈಗ ಪಿಸ್ತೂಲ್, ಚೂರಿ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಆತನಲ್ಲಿ ಇದ್ದುದು ಏರ್ ಗನ್ ಅಲ್ಲ. ಕಂಟ್ರಿ ಗನ್ ಎಂದು ಪೊಲೀಸರು ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಏ ಟ್ರೈಲರ್ ಹೈ, ಪಿಕ್ಚರ್ ಅಭೀ ಬಾಕಿ ಹೈ.. ಪಿಕ್ಚರ್ ಏನು ಅನ್ನೋದು ಸದ್ಯದಲ್ಲೇ ರಟ್ಟಾಗಲಿದೆ.
ಫಳ್ನೀರ್ ; ಹೊಟೇಲ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ದಾಂಧಲೆ !!
ಫಳ್ನೀರ್ ನಲ್ಲಿ ಯುವಕರ ದಾಂಧಲೆ ; ಇಬ್ಬರು ವಶಕ್ಕೆ, ನಿಜಕ್ಕೂ ಆಗಿದ್ದೇನು ?
Air gun attack at a restaurant in falnir two arrested after three months by Mangalore police. A crime report by Headline Karnataka.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm