ಕುಡಿದ ಅಮಲಿನಲ್ಲಿ ಸ್ವಂತ ಮಗಳನ್ನೇ ಕೊಚ್ಚಿ ಕೊಂದ ಪಾಪಿ ತಂದೆ

22-02-21 03:57 pm       Headline Karnataka News Network   ಕ್ರೈಂ

ಕುಡಿದ ಅಮಲಿನಲ್ಲಿ ಹೆತ್ತ ಮಗಳನ್ನೇ ತಂದೆ ಕೊಚ್ಚಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಯರಜಂತಿಯಲ್ಲಿ ನಡೆದಿದೆ.

ರಾಯಚೂರು, ಫೆ.22: ಕುಡಿದ ಅಮಲಿನಲ್ಲಿ ಜಗಳವಾಡಿ ಹೆತ್ತ ಮಗಳನ್ನೇ ತಂದೆ ಕೊಚ್ಚಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಜಂತಿಯಲ್ಲಿ ನಡೆದಿದೆ.

ಮೋನಮ್ಮ(14) ಕೊಲೆಯಾದ ನತದೃಷ್ಟ ಮಗಳು. ಆರೋಪಿ ತಿಮ್ಮಯ್ಯ ಮೋನಮ್ಮಳನ್ನು ಕೊಡಲಿಯಿಂದ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲವಾದರೂ ಕುಡಿತದ ಅಮಲೇ ಕೊಲೆಗೆ ಕಾರಣ ಎನ್ನಲಾಗಿದೆ. ಪ್ರತೀ ದಿನ ರಾತ್ರಿ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ತಿಮ್ಮಯ್ಯ ಮಗಳೊಂದಿಗೆ ಜಗಳವಾಡಿದ್ದಾನೆ. ರಾತ್ರಿ ಕಂಠಪೂರ್ತಿ ಕುಡಿದಿದ್ದ ಆರೋಪಿ ಬೆಳಗಿನ ಜಾವ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆಮಾಡಿದ್ದಾನೆ.

ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್ ಹೇಳಿದ್ದಾರೆ.

In a shocking incident, a 14-year-old daughter was brutally killed by her drunk father in Raichur. The deceased had been identified as Monamma.