ಬ್ರೇಕಿಂಗ್ ನ್ಯೂಸ್
25-02-21 11:30 am Mangalore Correspondent ಕ್ರೈಂ
ಮಂಗಳೂರು, ಫೆ.25: ಉಳ್ಳಾಲದ ಕೊರಗಜ್ಜನ ಕಟ್ಟೆಗೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ ಪ್ರಕರಣದ ಬೆನ್ನಲ್ಲೇ ಮಂಗಳೂರು ನಗರದಲ್ಲಿ ಮತ್ತೊಂದು ಕಡೆ ಅದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕಾಪಿಕಾಡ್ ಬಳಿಯ ದಡ್ಡಲ್ ಕಾಡ್ ಎಂಬಲ್ಲಿ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಮುಂದಿರುವ ಕಾಣಿಕೆ ಡಬ್ಬಿಯ ಹುಂಡಿ ಹಣವನ್ನು ಕದ್ದು ಅಪವಿತ್ರಗೊಳಿಸಲಾಗಿದೆ.
ನಿನ್ನೆ ರಾತ್ರಿ ದುಷ್ಕರ್ಮಿಗಳು ಬಬ್ಬುಸ್ವಾಮಿಯ ಕಾಣಿಕೆ ಡಬ್ಬಿಯಿಂದ ಹುಂಡಿ ಹಣವನ್ನು ಕಳವು ಮಾಡಿದ್ದು ಬಳಿಕ ಅದಕ್ಕೆ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ್ದಾರೆ. ಅಲ್ಲದೆ, ಹುಂಡಿಗೆ ಏನೇನೋ ವಿಚಿತ್ರ ರೀತಿಯಲ್ಲಿ ಬರೆದಿರುವ ಚೀಟಿ ಒಂದನ್ನು ಹಾಕಿದ್ದಾರೆ. ವಿಗ್ರಹಾರಾಧನೆ, ದೈವಿಕ ಶಕ್ತಿಯನ್ನು ನಿಂದಿಸಿ ಬರೆಯಲಾಗಿದೆ. ಇಂದು ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು ಸ್ಥಳೀಯರು ಉರ್ವಾ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ, ರಾತ್ರಿ ವೇಳೆ ಈ ಜಾಗದಲ್ಲಿ ಬೀದಿ ದೀಪ ಆರಿಸಲಾಗಿತ್ತು. ಕಿಡಿಗೇಡಿಗಳು ಬಬ್ಬುಸ್ವಾಮಿ ಸ್ಥಾನದ ಆಸುಪಾಸಿನ ಬೀದಿ ದೀಪಗಳನ್ನು ಆರಿಸಿ, ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
ಉರ್ವಾ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ವ್ಯಾಪ್ತಿಯಲ್ಲಿ ಇದು ನಾಲ್ಕನೇ ಪ್ರಕರಣವಾಗಿದ್ದು ಬೆನ್ನು ಬೆನ್ನಿಗೆ ಈ ರೀತಿಯ ಕೃತ್ಯ ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಉದ್ದೇಶಪೂರ್ವಕ ಈ ರೀತಿ ಕೃತ್ಯ ಮಾಡುತ್ತಿದ್ದಾರೆ.
ತಿಂಗಳ ಹಿಂದೆ ಕೊಟ್ಟಾರದ ಬಬ್ಬುಸ್ವಾಮಿ ಮತ್ತು ಅತ್ತಾವರದ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ಇದೇ ರೀತಿ ಅವಹೇಳನ ಮಾಡಲಾಗಿತ್ತು. ಅದರಲ್ಲಿ ಬಿಜೆಪಿ ನಾಯಕರು ಮತ್ತು ಏಸುವಿನ ಬಗ್ಗೆ ಬರೆದಿದ್ದ ಭಿತ್ತಿಪತ್ರವೂ ಪತ್ತೆಯಾಗಿತ್ತು. ಬಳಿಕ ಉಳ್ಳಾಲ ವ್ಯಾಪ್ತಿಯಲ್ಲಿ ಕೊರಗಜ್ಜನ ಕಟ್ಟೆಯಲ್ಲಿ ಇದೇ ರೀತಿ ಕೃತ್ಯ ನಡೆದಿತ್ತು. ಪೊಲೀಸರು ಈ ಬಗ್ಗೆ ತಪಾಸಣೆ, ತನಿಖೆ ನಡೆಸಿದ್ದರೂ, ಆರೋಪಿಗಳ ಪತ್ತೆಯಾಗಿಲ್ಲ. ಪತ್ತೆಯಾದ ಕರಪತ್ರಗಳ ಬರವಣಿಗೆ ಒಂದೇ ರೀತಿ ಕಂಡುಬಂದಿದ್ದು ಹಳೆ ಆರೋಪಿಗಳೇ ಈ ಕೃತ್ಯ ನಡೆಸಿರುವ ಸಾಧ್ಯತೆ ಕಂಡುಬಂದಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Condom with a communal letter found inside Kotedha Babbu Swami temple offering box again by some miscreants in Urwa. The same cruel act was done in Ullal and Konaje a few months ago.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 06:46 pm
HK News Desk
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm