ಬ್ರೇಕಿಂಗ್ ನ್ಯೂಸ್
08-03-21 01:45 pm Mangaluru Correspondent ಕ್ರೈಂ
ಕೊಣಾಜೆ, ಮಾ.8: ಹಿಂದು ಸಂಘಟನೆಯ ಸೋಗಿನಲ್ಲಿದ್ದ ಕಳ್ಳನೊಬ್ಬನನ್ನು ಮೊಂಟೆಪದವಿನ ನಾಗರಿಕರು ಸೆರೆ ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೊಂಟೆಪದವು ಪರಿಸರದಲ್ಲಿ ಹಲವು ಮನೆಗಳಿಂದ ಕಳ್ಳತನಗೈದ ಆರೋಪ ಹೊತ್ತಿರುವ ಹಿಂದು ಸಂಘಟನೆಯ ಕಾರ್ಯಕರ್ತನಾಗಿದ್ದ ತಾರನಾಥ ಯಾನೆ ಮೋಹನ ಬಂಧಿತ ಆರೋಪಿ.
ತಾರನಾಥ ಹಲವು ಮನೆಗಳಿಂದ ಚಿನ್ನಾಭರಣ, ಅಡಕೆ ಮೂಟೆ, ತನ್ನ ಮಿತ್ರರ ವಾಹನಗಳಿಂದಲೇ ಪೆಟ್ರೋಲ್ ಕದ್ದು ಯಾರಿಗೂ ಸಂಶಯ ಬಾರದಂತೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.


ಶನಿವಾರ ಮೊಂಟೆಪದವಿನ ಮನೆಯೊಂದರ ಅಂಗಳದಲ್ಲಿದ್ದ ಸ್ಕೂಟರ್ ಕದ್ದು ಪರಾರಿಯಾಗಿದ್ದು ಮನೆ ಮಂದಿ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಹಲವು ಮಂದಿಯ ಜೊತೆ ಚರ್ಚಿಸಿದಾಗ ಆರೋಪಿ ತಾರನಾಥ ಎಂಬುದನ್ನು ಖಚಿತಪಡಿಸಿಕೊಂಡು ಭಾನುವಾರ ರಾತ್ರಿ ಆತನ ಮನೆಗೆ ಹೋದಾಗ ಪರಾರಿಯಾಗಲು ಯತ್ನಿಸಿದ್ದಾನೆ. ಬೆನ್ನಟ್ಟಿದ್ದ ಸಾರ್ವಜನಿಕರು ಸೆರೆ ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಬಂಧಿತ ಆರೋಪಿ ಈ ಹಿಂದೆ ಗಂಗರಮಜಲು ಪರಿಸರದ ಬಡ ಕುಟುಂಬದ ಮನೆಯಿಂದ ಕಳ್ಳತನಕ್ಕೆ ಯತ್ನಿಸಿದ್ದಾಗ ಮನೆ ಮಂದಿ ಎಚ್ಚರಗೊಂಡಿದ್ದ ವೇಳೆ ತಾನು ಬಂದಿದ್ದ ಸ್ಕೂಟರ್ ಬಿಟ್ಟು ಪರಾರಿಯಾಗಿದ್ದ. ಪೊಲೀಸರಿಗೆ ಹೆದರಿ ಖುದ್ದು ಠಾಣೆಗೆ ಹಾಜರಾದ ಆತನನ್ನು ಕೊಣಾಜೆ ಪೊಲೀಸರು ಮುಚ್ಚಳಿಕೆ ಬರೆಸಿ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದರು. ಕಳ್ಳತನ ಆರೋಪಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ತಾರನಾಥನನ್ನು ಹಿಂದು ಸಂಘಟನೆಯ ಮುಖಂಡರು ಸಂಘಟನೆಯಿಂದ ಉಚ್ಛಾಟಿಸಿದ್ದರು. ಆ ಬಳಿಕ ಸುಮಾರು ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ತಾರನಾಥ ತನ್ನ ಕೃತ್ಯ ಮತ್ತೆ ಮುಂದುವರಿಸಿದ್ದು ಶನಿವಾರ ಸ್ಕೂಟರ್ ಕದ್ದಿದ್ದು, ಸಾರ್ವಜನಿಕರು ಭಾನುವಾರ ರಾತ್ರಿ ಸೆರೆ ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hindu organisation member arrested for constant stealing and robbery in Konaje region in Mangalore. The arrested has been identified as Tarnath.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 01:37 pm
HK News Staffer
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
Mangalore Eye, Project: ಕದ್ರಿಯ ನೂರಾರು ಕೋಟಿ ಜಾ...
20-09-26 08:59 pm
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm