ಬ್ರೇಕಿಂಗ್ ನ್ಯೂಸ್
16-03-21 08:29 pm Udupi Crime Correspondent ಕ್ರೈಂ
ಕುಂದಾಪುರ, ಮಾ.16: ಬೆಂಗಳೂರಿನ ಐಎಂಎ ಜುವೆಲ್ಲರಿ ವಂಚನೆ ಮಾದರಿಯಲ್ಲೇ ಮತ್ತೊಂದು ಗೋಲ್ಡ್ ಸ್ಕೀಮ್ ವಂಚನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ. ಗೋಲ್ಡ್ ಸ್ಕೀಮ್ ಹೆಸರಲ್ಲಿ ನೂರಾರು ಮಂದಿಯಿಂದ ಹೂಡಿಕೆ ಮಾಡಿಸಿ, ಬಂಗಾರವನ್ನು ಬೇರೊಂದು ಫೈನಾನ್ಸ್ ನಲ್ಲಿ ಅಡವಿಟ್ಟು ಜುವೆಲ್ಲರಿ ಮಾಲಕನೇ ನಾಪತ್ತೆಯಾಗಿದ್ದಾನೆ.
ಕುಂದಾಪುರ ಪೇಟೆಯ ಪಾರಿಜಾತಾ ಹೊಟೇಲ್ ಬಳಿಯಿರುವ ಗೋಲ್ಡ್ ಜುವೆಲ್ಲರಿಯಲ್ಲಿ ಕುಂದಾಪುರ ಮತ್ತು ಭಟ್ಕಳ ಭಾಗದ ನೂರಾರು ಮಂದಿ ಗೋಲ್ಡ್ ಸ್ಕೀಮ್ ನಡಿ ಹೂಡಿಕೆ ಮಾಡಿದ್ದರು. 5 ಲಕ್ಷ, ಹತ್ತು ಲಕ್ಷ ಹೀಗೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಹಲವಾರು ಮಂದಿ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರು. ಹೀಗೆ ಹೂಡಿಕೆ ಮಾಡಿದ ಚಿನ್ನದ ಮೇಲೆ ತಿಂಗಳಿಗೆ ಇಂತಿಷ್ಟು ಎಂದು ಬಡ್ಡಿಯನ್ನು ಕೊಡಲಾಗುತ್ತಿತ್ತು. ಒಂದು ಲಕ್ಷದ ಬಂಗಾರ ಪಡೆದು ಹೂಡಿಕೆ ಮಾಡಿದ್ದರೆ, ತಿಂಗಳಿಗೆ ಚಿನ್ನದ ಮಾರುಕಟ್ಟೆ ದರದಂತೆ 2ರಿಂದ 2500 ರೂ. ಬಡ್ಡಿಯನ್ನು ನೀಡುತ್ತಿದ್ದರು. ಒಂದು ಲಕ್ಷ ನಗದು ಹೂಡಿಕೆ ಮಾಡಿದ್ದರೆ, 3 ಸಾವಿರದ ವರೆಗೆ ಬಡ್ಡಿ ನೀಡುತ್ತಿದ್ದರು.
ಆದರೆ, ಗೋಲ್ಡ್ ಜುವೆಲ್ಲರಿಯವರು ಗ್ರಾಹಕರು ಖರೀದಿಸಿಟ್ಟ ಚಿನ್ನವನ್ನು ಕೇರಳದ ಮಣಪ್ಪುರಂ ಗೋಲ್ಡ್ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದು ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದರು. ಕೋಟಿಗಟ್ಟಲೆ ರೂಪಾಯಿ ಸಾಲ ಪಡೆದು, ಹಿಂತಿರುಗಿಸದೇ ಇದ್ದಾಗ ಏಲಂ ಮಾಡುವ ನೋಟೀಸ್ ನೀಡಿದ್ದರು. ಆದರೆ, ಈ ಮಧ್ಯೆ ಚಿನ್ನದ ಪಾಕೆಟ್ ಮೇಲೆ ಅಂಟಿಸಿದ್ದ ಗೋಲ್ಡ್ ಸ್ಕೀಮ್ ಕಾರ್ಡ್ ನಲ್ಲಿ ನಮೂದಿಸಿದ್ದ ವಿಳಾಸಕ್ಕೆ ಫೈನಾನ್ಸ್ ಸಂಸ್ಥೆಯವರು ಕರೆ ಮಾಡಿದ್ದು, ನಿಮ್ಮ ಅಡವಿಟ್ಟ ಗೋಲ್ಡ್ ಹರಾಜಾಗುವ ಬಗ್ಗೆ ತಿಳಿಸಿದ್ದಾರೆ.
ತಾವು ಮಣಪ್ಪುರಂ ಫೈನಾನ್ಸ್ ನಲ್ಲಿ ಗೋಲ್ಡ್ ಇಟ್ಟಿಲ್ಲವೆಂದು ವಾದಿಸಿದರೆ, ಗೋಲ್ಡ್ ಜುವೆಲ್ಲರಿಯ ಅಸಲಿ ಮೋಸದ ಕತೆ ರಟ್ಟಾಗಿದೆ. ಇಷ್ಟಾಗುತ್ತಿದ್ದಂತೆ, ಕುಂದಾಪುರದ ಗೋಲ್ಡ್ ಜುವೆಲ್ಲರಿಯಲ್ಲಿ ಹೂಡಿಕೆ ಮಾಡಿದ್ದ ನೂರಾರು ಮಂದಿ ಜುವೆಲ್ಲರಿ ಮುಂದೆ ಸೇರಿದ್ದಾರೆ. ಜುವೆಲ್ಲರಿ ಬಂದ್ ಆಗಿದ್ದರೆ, ಮಾಲಕನ ಮನೆಯವರೂ ನಾಪತ್ತೆಯಾಗಿದ್ದಾರೆ.
ಗೋಲ್ಡ್ ಜುವೆಲ್ಲರಿಗೆ ನಾಲ್ವರು ಪಾಲುದಾರಿಕೆ ನೆಲೆಯಲ್ಲಿ ಮಾಲೀಕರಾಗಿದ್ದು, ಒಬ್ಬ ದಕ್ಷಿಣ ಆಫ್ರಿಕಾದಲ್ಲಿದ್ದಾನೆ. ಕಂಡ್ಲೂರಿನ ಮೊಹಮ್ಮದ್ ಇಫ್ತಿಕಾರ್ ಜುಮ್ಕಿ, ಭಟ್ಕಳದ ಮೊಮಿನ್ ಯೂಸುಫ್ ಆಲಿ, ಮೊಳಹಳ್ಳಿ ಗಣೇಶ್ ಶೆಟ್ಟಿ, ಭಟ್ಕಳದ ಖತೀಬ್ ಅಬ್ದುಲ್ ರೆಹ್ಮಾನ್ ಪಾಲುದಾರರು ಎನ್ನಲಾಗುತ್ತಿದ್ದು, ಈ ನಾಲ್ವರು ಮತ್ತು ಸಿಬಂದಿ ಸೇರಿ ಒಟ್ಟು 24 ಮಂದಿಯ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯವಸ್ಥಾಪಕ ನಿರ್ದೇಶಕ ಜಾಫರ್ ಕಂಡ್ಲೂರು ಮತ್ತು ಅಕೌಂಟೆಂಟ್ ಫರಾಜ್ ಮಾವಿನಕಟ್ಟೆ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಹಿತಿ ಪ್ರಕಾರ, ಹತ್ತು ಕೇಜಿಯಷ್ಟು ಚಿನ್ನವನ್ನು ಅಡ ಇಟ್ಟಿದ್ದಾರೆ ಎನ್ನಲಾಗುತ್ತಿದ್ದು, ಹತ್ತು ಕೋಟಿ ರೂಪಾಯಿ ವಂಚನೆ ಆಗಿದೆ ಎನ್ನುವ ದೂರುಗಳಿವೆ. ಬೆಂಗಳೂರಿನಲ್ಲಿ ಐಎಂಎ ಜುವೆಲ್ಲರಿ ಹೆಸರಿನಲ್ಲಿ ವಂಚನೆ ಆಗಿರುವ ಮಾದರಿಯಲ್ಲೇ ಕುಂದಾಪುರದಲ್ಲಿ ಭಾರೀ ಗೋಲ್ಮಾಲ್ ಆಗಿದೆ. ಹೀಗೆ ಮೋಸ ಹೋದವರಲ್ಲಿ ಅತಿ ಹೆಚ್ಚು ಮಂದಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಮುಸ್ಲಿಮರೇ ಆಗಿದ್ದು, ತಮ್ಮವರಿಂದಲೇ ತಾವು ಮೋಸ ಹೋದ ಬಗ್ಗೆ ಜುವೆಲ್ಲರಿ ಮತ್ತು ಕುಂದಾಪುರ ಠಾಣೆಯ ಮುಂದೆ ಬಂದು ಗೋಳಿಡುತ್ತಿದ್ದಾರೆ.
ಮೂರು ವರ್ಷಗಳಲ್ಲಿ ಗೋಲ್ಡ್ ಸ್ಕೀಮ್ ನಡೆಯುತ್ತಿದ್ದು, 400ಕ್ಕೂ ಹೆಚ್ಚು ಮಂದಿ ಗೋಲ್ಡ್ ಹೆಸರಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಮೋಸಕ್ಕೆ ಒಳಗಾದವರು ತಿಳಿಸಿದ್ದಾರೆ.
Hundreds cheated in crores in the name of the Gold Scheme in Kundapura, Udupi like IMA Jewel's scam. The Owner is now missing after the incident has come to light.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm