ಬ್ರೇಕಿಂಗ್ ನ್ಯೂಸ್
17-03-21 02:46 pm Headline Karnataka News Network ಕ್ರೈಂ
ದೆಹಲಿ,ಮಾ.17: ಹೆತ್ತ ತಾಯಿಯೊಂದಿಗೆ ಜಗಳ ಮಾಡಿದ ಮಗ, ಆಕೆಗೆ ಬಲವಾಗಿ ಒಂದು ಏಟು ಕೊಟ್ಟಿದ್ದಾನೆ. ಇದರ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದ ವೃದ್ಧೆ (76)ಯ ಜೀವ ಹೋಗಿದೆ. ಈ ಘಟನೆ ರಾಷ್ಟ್ರ ರಾಜಧಾನಿಯ ದ್ವಾರಕಾದ ಬಿಂದಾಪುರ್ದಲ್ಲಿ ನಡೆದಿದೆ. ಇವರ ಗಲಾಟೆ, ಹೊಡೆದಾಟದ ನಂತರ ಮಹಿಳೆ ರಸ್ತೆ ಮೇಲೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಸೋಮವಾರವೇ ನಡೆದ ಘಟನೆಯಾಗಿದ್ದು, ಇಂದು ಬೆಳಕಿಗೆ ಬಂದಿದೆ.

ಮಹಿಳೆಯ ಪುತ್ರ ರಣವೀರ್ ಮತ್ತು ಆತನ ಪತ್ನಿ ಸೋಮವಾರ ವೃದ್ಧೆಯೊಂದಿಗೆ ರಸ್ತೆ ಮೇಲೆಯೇ ನಿಂತು ಜಗಳವಾಡಿದ್ದಾರೆ. ಅದಾದ ಬಳಿಕ ರಣವೀರ್ ತನ್ನ ತಾಯಿಗೆ ಬಲವಾಗಿ ಹೊಡೆದಿದ್ದಾನೆ. ಈ ಜಗಳ ಶುರುವಾಗಿದ್ದು ಪಾರ್ಕಿಂಗ್ ವಿಚಾರಕ್ಕೆ. ಮೂವರೂ ತುಂಬ ಹೊತ್ತು ಕೂಗಾಡಿಕೊಂಡಿದ್ದಾರೆ. ನಂತರ ಮಗನ ಹೊಡೆತ ತಾಳಲಾಗದೆ ಕೆಳಗೆ ಬಿದ್ದ ಮಹಿಳೆಯನ್ನು ಮೊದಲು ಆತನ ಪತ್ನಿ ಮೇಲೆತ್ತಲು ಪ್ರಯತ್ನಿಸಿದ್ದಾರೆ. ಆದರೆ ವೃದ್ಧೆ ಏಳಲಿಲ್ಲ. ಆಗಲೇ ಎಚ್ಚರ ತಪ್ಪಿದ್ದರು. ಕುಟುಂಬದವರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ವೈದ್ಯರು ಮಹಿಳೆ ಮೃತಪಟ್ಟಿದ್ದಾಗಿ ಘೋಷಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವೃದ್ಧೆಯ ದೇಹವನ್ನು ಪೋಸ್ಟ್ಮಾರ್ಟಮ್ ಮಾಡಲಾಗಿದ್ದು ಇನ್ನೂ ವರದಿ ಬಂದಿಲ್ಲ. ಸಾವಿಗೆ ನಿಜವಾದ ಕಾರಣ ಇನ್ನೂ ಗೊತ್ತಾಗಿಲ್ಲ. ರಿಪೋರ್ಟ್ ಬಂದ ಕೂಡಲೇ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದೂ ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ದೆಹಲಿಯಲ್ಲಿ 22 ವರ್ಷದ ಯುವತಿಯೊಬ್ಬಳು ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಳು. ಆಕೆ ಬೀಳುತ್ತಿದ್ದಂತೆ ವ್ಯಕ್ತಿಯೊಬ್ಬ ಬಂದು ಆ ದೇಹವನ್ನು ಎತ್ತಿದ್ದ. ಅದಾದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು. ಯುವತಿ ಬಿದ್ದು ಮೃತಪಟ್ಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ನೆರಮನೆಯಾತ ಪೊಲೀಸರಿಗೆ ದೂರು ನೀಡಿದ್ದ.
Horrible. A man in Delhi slaps his old mother, she dies. pic.twitter.com/NsAO8PZb7b
— Sandeep Singh (@PunYaab) March 16, 2021
The capital of India, again witnessed a very shameful incident on Monday( March 15)in Dwarka, letting humanity go down again. The incident was caught in a CCTV camera wherein a man is seen slapping an elderly woman due to which she collapsed. Later, the video went viral on social media.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm