ಬ್ರೇಕಿಂಗ್ ನ್ಯೂಸ್
25-03-21 05:48 pm Mangaluru correspondent ಕ್ರೈಂ
ಮಂಗಳೂರು, ಮಾ.25: ಒಂದು ಕಾಲದಲ್ಲಿ ರೌಡಿಸಂ ಮಾಡಿ, ಈಗ ಉದ್ಯಮಿ ಮತ್ತು ಇಂಟಕ್ ಕಾರ್ಮಿಕ ಸಂಘಟನೆಯ ಮೂಲಕ ಕಾಂಗ್ರೆಸ್ ಮುಖಂಡನಾಗಿ ಪರಿವರ್ತನೆಯಾಗಿರುವ ರಾಕೇಶ್ ಮಲ್ಲಿ ತನಗೆ ಜೀವ ಭಯ ಇದ್ದು ಪೊಲೀಸ್ ರಕ್ಷಣೆ ನೀಡುವಂತೆ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.
ದಿ. ಮುತ್ತಪ್ಪ ರೈ ಪುತ್ರರಿಂದ ಜೀವ ಭಯ ಇದೆ. ಅಲ್ಲದೆ, ಬೆಂಗಳೂರಿನ ರೌಡಿಗಳಾದ ಒಂಟೆ ರೋಹಿತ್ ಮತ್ತು ಸೈಲಂಟ್ ಸುನೀಲ ತನ್ನನ್ನು ಕೊಲ್ಲಲು ಸಂಚು ನಡೆಸಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯಿಂದ ಗನ್ ಮ್ಯಾನ್ ನೀಡಬೇಕೆಂದು ಕದ್ರಿ ಠಾಣೆಯಲ್ಲಿ ಅರ್ಜಿ ನೀಡಿದ್ದಾರೆ.


ರಾಕೇಶ್ ಮಲ್ಲಿ ದೂರು ನೀಡಿರುವ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ದೃಢಪಡಿಸಿದ್ದು ಗನ್ ಮ್ಯಾನ್ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಈ ಹಿಂದೆ ಮುತ್ತಪ್ಪ ರೈ ಜೊತೆಗೆ ಗುರುತಿಸಿಕೊಂಡಿದ್ದ ರಾಕೇಶ್ ಮಲ್ಲಿ, ರೈಯವರ ಕೊನೆಗಾಲದಲ್ಲಿ ಬೇರೆಯಾಗಿದ್ದರು. ಅಲ್ಲದೆ, ತಮ್ಮ ನಡುವೆ ನಡೆದಿರುವ ಭೂ ವ್ಯವಹಾರದಲ್ಲಿ ಮುತ್ತಪ್ಪ ರೈ ತನ್ನ ಜೊತೆ ಮುನಿಸಿಕೊಂಡಿದ್ದಾರೆ ಎಂದು ರಾಕೇಶ್ ಮಲ್ಲಿ ಹೇಳಿಕೊಂಡಿದ್ದರು.
ವರ್ಷದ ಹಿಂದೆ ಹಿಂದೆ ಮುತ್ತಪ್ಪ ರೈ ಅಸೌಖ್ಯದಿಂದ ಮೃತಪಟ್ಟಿದ್ದು ಅವರ ತೋಟ ಮನೆ ಮತ್ತು ವ್ಯವಹಾರವನ್ನು ಪುತ್ರರು ನೋಡಿಕೊಂಡಿದ್ದಾರೆ. ರಾಕಿ ಮತ್ತು ರಿಕ್ಕಿ ರೈ ಎಂಬ ಇಬ್ಬರು ಪುತ್ರರಿದ್ದು, ಅದರಲ್ಲಿ ಒಬ್ಬಾತ ವಿದೇಶದಲ್ಲಿದ್ದರೆ ರಿಕ್ಕಿ ಬೆಂಗಳೂರಿನಲ್ಲಿದ್ದುಕೊಂಡು ಹೊಟೇಲ್ ಇನ್ನಿತರ ವಹಿವಾಟು ನೋಡಿಕೊಳ್ಳುತ್ತಿದ್ದಾರೆ.
INTEC Rakesh Malli gets Life threat from Former Late Don Muthappa Rai son. Rakesh Malli seeks for Gun Man and also lodges complaint at the Kadri Police Station.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm