ಬ್ರೇಕಿಂಗ್ ನ್ಯೂಸ್
26-03-21 08:38 pm Headline Karnataka News Network ಕ್ರೈಂ
ಬೆಂಗಳೂರು, ಮಾ.26: ಆತ ಜೈಲಿನಲ್ಲಿದ್ದುಕೊಂಡೇ ಎಸಿಬಿ ಅಧಿಕಾರಿಯ ಹೆಸರಿನಲ್ಲಿ ಭ್ರಷ್ಟರನ್ನು ಬೇಟೆಯಾಡುತ್ತಿದ್ದ. ಯಾರು ಭ್ರಷ್ಟಾಚಾರದಿಂದ ಹಣ ಮಾಡುತ್ತಿದ್ದಾರೋ, ಅಂಥ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಯೆಂದು ಫೋನಾಯಿಸಿ ಹಣ ಪೀಕಿಸುತ್ತಿದ್ದ.
ಹೌದು.. ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಬೆಳಗಾವಿ ಮೂಲದ ಮರಿಗೆಪ್ಪ ನಿಂಗಪ್ಪ ಕುಂಬಾರ (54) ಎಂಬಾತನನ್ನು ಬಾಡಿ ವಾರೆಂಟ್ ಪಡೆಯಲು ಈಗ ಚಿತ್ರದುರ್ಗ ಪೊಲೀಸರು ಬಂದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ ಎಂಬವರಿಗೆ ಮಾರ್ಚ್ 17ರಂದು ಈತ ಕರೆ ಮಾಡಿದ್ದ. ತಾನು ಎಸಿಬಿಯಲ್ಲಿ ಡಿವೈಎಸ್ಪಿಯಾಗಿದ್ದು, ನಿಮ್ಮ ಕಚೇರಿ ಮೇಲೆ ದಾಳಿ ನಡೆಸಲು ರೆಡಿ ಮಾಡ್ಕೊಂಡಿದ್ದೇವೆ ಎಂದು ಹೇಳಿದ್ದಾನೆ. ಅಲ್ಲದೆ, ತನ್ನ ಪ್ರಭಾವದ ಬಗ್ಗೆ ಮಾತನಾಡಿ, ವಿಶ್ವಾಸ ಗಳಿಸಿದ್ದಾನೆ. ಆಬಳಿಕ ಅಧಿಕಾರಿ ಸತೀಶ್ ರೆಡ್ಡಿ ಅಲ್ಲಿನ ಎಸಿಬಿ ಡಿವೈಎಸ್ಪಿ ಯಾರೆಂದು ವಿಚಾರಿಸಿದ್ದು, ಅವರ ಧ್ವನಿಗೂ ತನಗೆ ಫೋನ್ ಮಾಡಿದ್ದ ಧ್ವನಿಗೂ ತಾಳೆಯಾಗದ ಕಾರಣ ನೇರವಾಗಿ ಪೊಲೀಸ್ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿಯ ಲೊಕೇಶನ್ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲನ್ನು ತೋರಿಸಿತ್ತು. ತನಿಖೆ ನಡೆಸಿದ ಪೊಲೀಸರು ಮರಿಗೆಪ್ಪ ನಿಂಗಪ್ಪ ವೃತ್ತಾಂತ ನೋಡಿ ಸ್ವತಃ ಬೆಚ್ಚಿದ್ದಾರೆ. ಆತನ ಬಳಿ ಮೊಬೈಲ್, ಹಲವು ಸಿಮ್ ಕಾರ್ಡ್ ಗಳನ್ನು ಪತ್ತೆ ಮಾಡಿದ್ದಾರೆ. ಈಗ ಆತನನ್ನು ವಶಕ್ಕೆ ಪಡೆಯಲು ನ್ಯಾಯಾಲಯದಿಂದ ಬಾಡಿ ವಾರೆಂಟ್ ಪಡೆದಿದ್ದಾರೆ.
ಈ ಹಿಂದೆ ಹಿರಿಯೂರಿನ ಪಂಚಾಯತಿರಾಜ್ ಇಲಾಖೆಯ ಇಂಜಿನಿಯರನ್ನು ಇದೇ ರೀತಿ ಎಸಿಬಿ ಅಧಿಕಾರಿಯೆಂದು ಬೆದರಿಸಿ, ಹಣ ಕೇಳಿದ್ದ. ಪೊಲೀಸ್ ದೂರು ದಾಖಲಾಗಿ, ಸಿಕ್ಕಿಬಿದ್ದು ಈಗ ಜೈಲಿನಲ್ಲಿದ್ದಾನೆ. ಮೂಲತಃ ಬೆಳಗಾವಿ ಜಿಲ್ಲೆಯ ಹಿಂಡಲಗಾ ನಿವಾಸಿಯಾಗಿರುವ ಈತನ ಮೇಲೆ ರಾಜ್ಯದ ಹಲವೆಡೆ ಕೇಸುಗಳಿವೆ.
1990-2002ರ ಅವಧಿಯಲ್ಲಿ ಬೆಳಗಾವಿಯಲ್ಲಿ ಪೊಲೀಸ್ ಪೇದೆಯಾಗಿದ್ದ ಮರಿಗೆಪ್ಪ ಆಬಳಿಕ ಹತ್ತು ತಿಂಗಳ ಕಾಲ ಲೋಕಾಯುಕ್ತದಲ್ಲೂ ಕರ್ತವ್ಯ ನಿರ್ವಹಿಸಿದ್ದ. ಈ ವೇಳೆ, ಮಾಹಿತಿ ಕಲೆಹಾಕುವುದನ್ನು ಕಲಿತುಕೊಂಡಿದ್ದು ಈಗ ನೆರವಿಗೆ ಬಂದಿದೆ. ತಾನು ಫೋನ್ ಮಾಡಿ ಬೆದರಿಸುವುದಕ್ಕೂ ಮುನ್ನ ಅಧಿಕಾರಿಯ ಮಾಹಿತಿ ಕಲೆಹಾಕುತ್ತಾನೆ. ಆತ ಎಲ್ಲೆಲ್ಲಿ ಆಸ್ತಿ ಗಳಿಸಿಕೊಂಡಿದ್ದಾನೆ ಎನ್ನುವ ಮಾಹಿತಿ ತಿಳಿದೇ ಕರೆ ಮಾಡಿ ಬೆದರಿಸುತ್ತಾನೆ. ಪ್ರಭಾವಿಗಳ ಹೆಸರೇಳಿ, ರೈಡ್ ಮಾಡುವ ಸಿದ್ಧತೆಯ ಬಗ್ಗೆ ಹೇಳುತ್ತಾನೆ. ಈ ವೇಳೆ, ಬಲೆಗೆ ಬೀಳುವ ಭ್ರಷ್ಟ ಅಧಿಕಾರಿಗಳು ಆತನ ಖಾತೆಗೆ ಹಣ ಹಾಕುತ್ತಿದ್ದರು. ಕೆಲವೊಮ್ಮೆ ಯಾರನ್ನೋ ಕಳುಹಿಸಿ ನೇರವಾಗಿಯೂ ಹಣವನ್ನು ಸಂಗ್ರಹ ಮಾಡುತ್ತಿದ್ದನು.
ಪೊಲೀಸ್ ಕರ್ತವ್ಯದಲ್ಲಿದ್ದಾಗ ಬಸ್ ವಾರೆಂಟ್ ಪ್ರಕರಣದಲ್ಲಿ ದುರುಪಯೋಗ ಆಗಿ, ಎಫ್ಐಆರ್ ದಾಖಲಾಗಿತ್ತು. ಬಳಿಕ ಪೊಲೀಸ್ ಇಲಾಖೆಯಿಂದ ವಜಾ ಆಗಿದ್ದ ಮರಿಗೆಪ್ಪ ನಿಂಗಪ್ಪ ಹಣಕ್ಕಾಗಿ ಈ ರೀತಿಯ ಕೆಲಸಕ್ಕೆ ಮುಂದಾಗಿದ್ದ. ರಾಜ್ಯದ ಹಲವೆಡೆ ಈತನ ವಿರುದ್ಧ ಈ ರೀತಿಯ 20ಕ್ಕೂ ಹೆಚ್ಚು ವಂಚನೆ ಕೇಸುಗಳಿವೆ.
Bangalore DISMISSED COP Murugappa Ningappa Kumbara, CONS GOVERNMENT OFFICIALS as acb officer and loots money involving to
operate an extortion racket that used to target government officials in the guise of anti-corruption bureau officials.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm