ಬ್ರೇಕಿಂಗ್ ನ್ಯೂಸ್
30-03-21 05:21 pm Mangalore Correspondent ಕ್ರೈಂ
ಬೆಂಗಳೂರು, ಮಾ.30: ಸಿಡಿ ಲೇಡಿಯ ಪರವಾಗಿ ಹೈಕೋರ್ಟಿನಲ್ಲಿ ವಾದಿಸುತ್ತಿರುವ ವಕೀಲ ಜಗದೀಶ ಕುಮಾರ್ ಅವರನ್ನು ಕೊಲೆ ಮಾಡುವುದಾಗಿ ಮಂಗಳೂರಿನ ವ್ಯಕ್ತಿಯೊಬ್ಬ ಕರೆ ಮಾಡಿ, ಬೆದರಿಕೆ ಒಡ್ಡಿದ್ದಾನೆ.
ಈ ಬಗ್ಗೆ ವಕೀಲ ಜಗದೀಶ ಕುಮಾರ್ ತಮ್ಮ ಫೇಸ್ಬುಕ್ ಪೇಜ್ ನಲ್ಲೂ ಹೇಳಿಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೂ ಹೇಳಿಕೆ ನೀಡಿದ್ದಾರೆ. ಬೆಹ್ರೈನ್ ನಿಂದ ಕರೆ ಮಾಡಿರುವ ವ್ಯಕ್ತಿ ನಿನ್ನ ತಲೆ ಕಡಿಯುತ್ತೇನೆ, ನೀನು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತೀಯಾ ಎಂದು ಬೆದರಿಸಿದ್ದಾನೆ. ಕರೆ ಮಾಡಿ ಹೀಗೆ ಹೇಳುವ ಆಡಿಯೋವನ್ನು ಜಗದೀಶ್ ರೆಕಾರ್ಡ್ ಮಾಡಿದ್ದು, ಫೇಸ್ಬುಕ್ ನಲ್ಲಿ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಅಲ್ಲದೆ, ಯುವತಿಯ ಪರವಾಗಿ ನ್ಯಾಯ ಕೇಳುತ್ತಿರುವ ವಕೀಲನಿಗೇ ಬೆದರಿಕೆ ಹಾಕಿದರೆ, ಯುವತಿಯನ್ನು ಇವರು ಬಿಟ್ಟಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ನನಗೆ ಯಾವ ಭಯಾನೂ ಇಲ್ಲ. ಆದರೆ, ಕಳೆದ ನಾಲ್ಕು ದಿನಗಳಿಂದ ಬೇರೆ ಬೇರೆ ಕಡೆಗಳಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸಬಯಸುತ್ತೇನೆ. ಇದರಿಂದ ಇವರ ಮನಸ್ಥಿತಿ ನಮಗೆ ಅರಿವಿಗೆ ಬರುತ್ತಿದೆ ಎಂದಿದ್ದಾರೆ.
ಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿಯ ಕನ್ನಡ ಭಾಷೆ ಮಂಗಳೂರಿನ ನಿವಾಸಿಯ ರೀತಿ ಇದೆ. ಬೆಹ್ರೈನಲ್ಲಿರುವ ಮಂಗಳೂರಿನ ವ್ಯಕ್ತಿ ಇಂಟರ್ನೆಟ್ ಕರೆ ಮಾಡಿ ಮಾತನಾಡಿರುವ ಶಂಕೆಯಿದೆ. ಕರೆಯಲ್ಲಿ ಯುವಕ ತನ್ನ ಹೆಸರನ್ನು ಹೇಳಿಕೊಂಡಿಲ್ಲ.
Lawyer of sex scandal Cd lady lawyer Jagadish receives life threat call from Mangalore based man over telephonic call.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm