ಬ್ರೇಕಿಂಗ್ ನ್ಯೂಸ್
31-03-21 12:59 pm Headline Karnataka News Network ಕ್ರೈಂ
ಚೆನ್ನೈ, ಮಾ.31; 300 ಕೇಜಿ ಹೆರಾಯಿನ್ ಮತ್ತು ಎಕೆ 47 ರೈಫಲ್ಸ್ ಸೇರಿದಂತೆ ಶಸ್ತ್ರಾಸ್ತ್ರಗಳಿದ್ದ ಬೋಟ್ ಒಂದನ್ನು ಸಮುದ್ರ ಮಧ್ಯೆ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಪಡೆ ವಶಕ್ಕೆ ಪಡೆದಿದ್ದು ಆರು ಮಂದಿ ಶ್ರೀಲಂಕಾ ನಿವಾಸಿಗಳನ್ನು ಬಂಧಿಸಿದೆ.
ಕೇರಳದ ವಿಝಿಂಜಾಮ್ ಸಮೀಪದ ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದ ಶ್ರೀಲಂಕಾದ ರವಿಹನ್ಸಿ ಎನ್ನುವ ಬೋಟ್ ಒಂದನ್ನು ಕೋಸ್ಟ್ ಗಾರ್ಡ್ ಪಡೆ ಮತ್ತು ಚೆನ್ನೈನ ಎನ್ ಸಿಬಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಭಾರೀ ಪ್ರಮಾಣದ ಮಾದಕ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಶ್ರೀಲಂಕಾಗೆ ಸೇರಿದ ವೆಸಲ್ ಅನ್ನು ವಶಕ್ಕೆ ಪಡೆದು ವಿಝಿಂಜಾಮ್ ಬಂದರಿಗೆ ತರಲಾಗಿದ್ದು, ಅದರಲ್ಲಿ 300 ಕೇಜಿ ಹೆರಾಯಿನ್ ಮತ್ತು ಐದು ಎಕೆ 47 ರೈಫಲ್ ಗಳು ಹಾಗೂ 1000 ರೌಂಡ್ಸ್ 9 ಎಂಎಂ ಮದ್ದುಗುಂಡುಗಳು ಪತ್ತೆಯಾಗಿವೆ. ಅದಲ್ಲದೆ, ಮಾದಕ ದ್ರವ್ಯಗಳ ಸಾಗಣೆ ಜಾಲದ ಮಾಹಿತಿಗಳಿದ್ದ ಮಹತ್ವದ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ.
ವೆಸಲ್ ಒಳಗಿದ್ದ ನೀರಿನ ಟಾಂಕಿ ಒಳಗಡೆ ಹೆರಾಯಿನ್ ಇದ್ದ 301 ಪ್ಯಾಕೆಟ್ ಗಳನ್ನು ಬಚ್ಚಿಡಲಾಗಿತ್ತು. ಪ್ಲಾಸ್ಟಿಕ್ ಪ್ಯಾಕೆಟ್ ಮೇಲ್ಭಾಗದಲ್ಲಿ ಓಡುವ ಕುದುರೆಗಳ ಚಿತ್ರಗಳಿದ್ದ ಬ್ಯಾಗ್ ಅದಾಗಿದ್ದು, ಡ್ರಗ್ ರಾಕೆಟ್ ಸಾಗಾಟದ ವೇಳೆ ಇದೇ ರೀತಿಯ ಚಿತ್ರಗಳನ್ನು ಬಳಸುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ, ಇವನ್ನು ಇರಾನ್ ದೇಶದ ಛಬಾಹಾರ್ ಬಂದರಿನಿಂದ ತರಲಾಗಿದ್ದು, ಲಕ್ಷದ್ವೀಪದ ಬಳಿ ಬೇರೆ ವೆಸಲ್ ಒಂದರಿಂದ ಇದಕ್ಕೆ ತುಂಬಲಾಗಿತ್ತು. ಶ್ರೀಲಂಕಾಗೆ ಒಯ್ಯುತ್ತಿರುವುದಾಗಿ ಸಿಬಂದಿ ಹೇಳಿದ್ದಾರೆ. ಈ ಜಾಲದ ಹಿಂದೆ ಪಾಕಿಸ್ಥಾನ ಮೂಲದ ಡ್ರಗ್ ರಾಕೆಟ್ ಇರುವುದು ಖಚಿತವಾಗಿದ್ದು, ಎನ್ ಸಿಬಿ ಅಧಿಕಾರಿಗಳು ಆರು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Based on intelligence inputs on drug trafficking, Indian Coast Guard air and sea assets thwarted three Sri Lankan boats off the Lakshadweep region on India’s west coast on March 18. Indian Coast Guards big haul Rs 3000 cr worth drugs 5 AK 47rifles seized.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 01:13 pm
HK News Desk
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm