ಬ್ರೇಕಿಂಗ್ ನ್ಯೂಸ್
04-04-21 09:24 am Mangaluru Correspondent ಕ್ರೈಂ
ಮಂಗಳೂರು, ಎ.4: 12 ರ ಹರೆಯದ ಬಾಲಕನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಕಂಡುಬಂದಿದ್ದು, ಉಳ್ಳಾಲ ಠಾಣೆ ವ್ಯಾಪ್ತಿಯ ಕೆ.ಸಿ.ರೋಡ್ ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಕೆ.ಸಿ.ರೋಡ್ ನಿವಾಸಿ ಮೊಹಮ್ಮದ್ ಹನೀಫ್ ಎಂಬವರ ಮಗ ಆಕೀಫ್ (12) ಮೃತ ಬಾಲಕ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಆಕೀಫ್ ಪಬ್ ಜಿ ಆಡಲೆಂದು ಮನೆಯಿಂದ ಹೊರಗೆ ಹೋಗಿದ್ದ. ಆದರೆ, ಹತ್ತು ಗಂಟೆಯಾದ್ರೂ ಮನೆಗೆ ಬಂದಿಲ್ಲ ಎಂದು ಮನೆಯವರು ಹುಡುಕಾಡಿದ್ದು ಬಾಲಕ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಮತ್ತೆ ಹುಡುಕಾಟ ನಡೆಸಿದಾಗ, ಮನೆಯಿಂದ 500 ಮೀಟರ್ ದೂರವಿರುವ ಹುಡುಗ ಶಾಲೆ ಕಲಿಯುತ್ತಿದ್ದ ಫಲಾಹ್ ಸ್ಕೂಲಿನ ಮೈದಾನದ ಮೂಲೆಯಲ್ಲಿ ಶವ ಪತ್ತೆಯಾಗಿದೆ.

ಬಾಲಕನ ಮುಖಕ್ಕೆ ಪೆಟ್ಟು ಬಿದ್ದು ಜಜ್ಜಿದ ಸ್ಥಿತಿ ಕಂಡುಬಂದಿದೆ. ಯಾರೋ ತಲೆಯ ಭಾಗಕ್ಕೆ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ತೆರಳಿದ್ದು ಪರಿಶೀಲನೆ ನಡೆಸಿ ಆಘಾತ ವ್ಯಕ್ತಪಡಿಸಿದ್ದಾರೆ.
ಗೆಳೆಯರ ಜೊತೆ ಹುಡುಗ ಪಬ್ ಜಿ ಆಡುತ್ತಿದ್ದ ಎಂದು ಮನೆಯವರು ತಿಳಿಸಿದ್ದಾರೆ. ತಂದೆ, ಮೊಹಮ್ಮದ್ ಹನೀಫ್ ಸ್ಥಳೀಯ ಪ್ರದೀಪ್ ಎನ್ನುವ ಹುಡುಗನ ಜೊತೆ ಆಟವಾಡುತ್ತಿದ್ದ. ಆತನ ಬಗ್ಗೆ ಸಂಶಯ ಇರುವುದಾಗಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.
ಆಕೀಫ್ ಪಬ್ ಜಿ ಆಟ ಆಡುತ್ತಿದ್ದನೇ ಅಥವಾ ಮಾರಣಾಂತಿಕ ಬ್ಲೂ ವೇಲ್ ಚಾಲೆಂಜ್ ಆಡುತ್ತಿದ್ದನೇ ಎನ್ನುವ ಬಗ್ಗೆ ತಿಳಿದಿಲ್ಲ. ಮನೆಯವರು ಪಬ್ ಜಿ ಆಟದ ಬಗ್ಗೆ ಹೇಳಿದ್ದಾರೆ. ಬ್ಲೂ ವೇಲ್ ಚಾಲೆಂಜಿಂಗ್ ಗೇಮ್ ಗೆಳೆಯರು ಮತ್ತು ಕಮಾಂಡಿಂಗ್ ನಡುವೆ ಆಡುವ ಆಟವಾಗಿದ್ದು ಅದರಲ್ಲಿ ತೊಡಗಿಸಿದ್ದರೇ ಅನ್ನೋದು ಗೊತ್ತಾಗಿಲ್ಲ. ಬಾಲಕ ಮೈದಾನದ ಕಾಂಪೌಂಡ್ ಗೋಡೆ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆಕ್ರೋಶ, ಉದ್ವಿಗ್ನದ ಭಾವ ಮೂಡಿಸಿದೆ.
Mangaluru Missing boy found murdered near KC Road ullal fight over PUBG game suspected. Mangalore police commissioner Shashi Kumar is in the spot investigating the case.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 01:37 pm
HK News Staffer
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
Mangalore Eye, Project: ಕದ್ರಿಯ ನೂರಾರು ಕೋಟಿ ಜಾ...
20-09-26 08:59 pm
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm