ಬ್ರೇಕಿಂಗ್ ನ್ಯೂಸ್
09-04-21 11:33 am Mangalore Correspondent ಕ್ರೈಂ
ಉಳ್ಳಾಲ, ಎ.9: ಕೇರಳ ರಾಜ್ಯದ ಭಾಗ್ಯಮಿತ್ರ ತಿಂಗಳ ಬಂಪರ್ ಒಂದು ಕೋಟಿ ರೂಪಾಯಿ ಬಹುಮಾನವನ್ನು ಗಿಟ್ಟಿಸಿಕೊಂಡಿರುವುದಾಗಿ ಎಲ್ಲರನ್ನು ನಂಬಿಸಿ ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಪಡೆದ ವಾಚ್ ಮನ್ ಮೊಯ್ದಿನ್ ಕುಟ್ಟಿ ದಿಢೀರ್ ನಾಪತ್ತೆಯಾಗಿದ್ದಾನೆ.
ಮೂಲತಃ ಕೇರಳದ ಕ್ಯಾಲಿಕಟ್ ನಿವಾಸಿ ಮೊಯ್ದಿನ್ ಕುಟ್ಟಿ (65) ಕೋಟಿ ಲಾಟರಿಯ ಸುಳ್ಳು ಕತೆ ಕಟ್ಟಿ ಸಾಲದಾತರ ಹಿಡಿಶಾಪಕ್ಕೆ ಗುರಿಯಾಗಿದ್ದಾರೆ. ತೊಕ್ಕೊಟ್ಟಿನ ಸ್ಮಾರ್ಟ್ ಪ್ಲಾನೆಟ್ ಸಂಕೀರ್ಣದ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಟ್ಟಿ ಕಳೆದ ಎಪ್ರಿಲ್ 4 ರಂದು ಡ್ರಾಗೊಳ್ಳುವ ಭಾಗ್ಯಮಿತ್ರ ಲಾಟರಿಯನ್ನು 100 ರೂಪಾಯಿ ಕೊಟ್ಟು ಖರೀದಿಸಿದ್ದರು. ಎ.4 ರಂದು ಡ್ರಾ ಆದ ಭಾಗ್ಯಮಿತ್ರ ಲಾಟರಿಯ ವಿಜೇತ ನಂಬರನ್ನು( BJ 134048 ) ಆನ್ ಲೈನ್ ನಲ್ಲಿ ತಿಳಿದ ಕುಟ್ಟಿ, ಆ ನಂಬರಿನ ಪ್ರಿಂಟ್ ಔಟ್ ತೆಗೆದು ತಾನು ಖರೀದಿಸಿದ ಲಾಟರಿಗೆ ಅಂಟಿಸಿ ಪೊಟೋ ಪ್ರಿಂಟ್ ಮಾಡಿಸಿ ತನಗೆ ಕೋಟಿ ಬಹುಮಾನ ಬಂದಿರುವುದಾಗಿ ತನ್ನ ಆಪ್ತರನ್ನು ನಂಬಿಸಿದ್ದಾರೆ. ಲಾಟರಿಯ ಅಸಲಿ ಪ್ರತಿಯನ್ನು ಲಾಟರಿ ಏಜೆನ್ಸಿಗೆ ಸರೆಂಡರ್ ಮಾಡಿದ್ದು ಮೂರು ತಿಂಗಳ ಒಳಗೆ ತನ್ನ ಖಾತೆಗೆ ಹಣ ಬರುವುದಾಗಿ ಎಲ್ಲರನ್ನೂ ಕುಟ್ಟಿ ನಂಬಿಸಿದ್ದಾರೆ.
ವಾಚ್ ಮೆನ್ ಕುಟ್ಟಿ ಟಿಕೇಟ್ ಖರೀದಿಸಲೆಂದು ತಾನು ಕೆಲಸ ನಿರ್ವಹಿಸುತ್ತಿದ್ದ ಕಟ್ಟಡದಲ್ಲಿರುವ ಟೈಲರ್ ಓರ್ವರಲ್ಲಿ 500 ರೂಪಾಯಿ ಸಾಲ ಪಡೆದಿದ್ದರು. ಕುಟ್ಟಿಗೆ ಲಾಟರಿ ಹೊಡೆದಿರುವ ವಿಷಯ ತಿಳಿದು ಟೈಲರ್ ಸೇರಿ ಕಟ್ಟಡದ ವರ್ತಕರೆಲ್ಲರೂ ಸಂಭ್ರಮಿಸಿದ್ದರು.
ಸ್ಮಾರ್ಟ್ ಪ್ಲಾನೆಟ್ ಕಟ್ಟಡದಲ್ಲಿ ಕೆಲಸ ನಿರ್ವಹಿಸಿ ಅಲ್ಲೇ ತಂಗಿರುವ ಕುಟ್ಟಿ ಸ್ಥಳೀಯ ಹಲವರಲ್ಲಿ ಕೈ ಸಾಲ ಮಾಡಿದ್ದು ಅದನ್ನು ಮರೆ ಮಾಚಲು ಲಾಟರಿ ಹೊಡೆದಿರುವ ಬಗ್ಗೆ ಸುಳ್ಳು ಕಥೆ ಸೃಷ್ಟಿಸಿದ್ದಾರೆಂದು ತಿಳಿದು ಬಂದಿದೆ. ಲಾಟರಿ ಹೊಡೆದಿದನ್ನ ನಂಬಿ ಇನ್ನಷ್ಟು ಮಂದಿ ಈತನಿಗೆ ಹಣ ಸಾಲ ನೀಡಿದ್ದಾರಂತೆ. ಇಂದು ಬೆಳಗ್ಗೆ ಕಟ್ಟಡ ನಿವಾಸಿಗಳಿಗೆ ಲಾಟರಿ ವಿಷಯ ಸುಳ್ಳೆಂದು ತಿಳಿಯುತ್ತಿದ್ದಂತೆ ಕುಟ್ಟಿ ಬಳಿ ವಿಚಾರಿಸಲು ತೆರಳಿದಾಗ ಆತ ಪರಾರಿಯಾಗಿದ್ದಾನೆ. ಸಾಲ ಕೊಟ್ಟವರು, ಕೋಟಿ ಸಿಕ್ಕಿದೆಯೆಂದು ಸಂಭ್ರಮಿಸಿದವರು ಬೇಸ್ತು ಬಿದ್ದಿದ್ದಾರೆ.
Read : ತೊಕ್ಕೊಟ್ಟು ; ಸೆಕ್ಯುರಿಟಿಗೆ ಒಲಿದ ಭಾಗ್ಯಮಿತ್ರ !! ಬಡಪಾಯಿಗೆ ಒಂದು ಕೋಟಿ ಕೇರಳ ಲಾಟರಿ ಬಂಪರ್ !
Ullal a Security guard who was told that he has won the One crore Kerala lottery was fake as he edited the ticket in the cyber. He's said to be absconding.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm