ಒಳಚಡ್ಡಿಯಲ್ಲಿಟ್ಟು ಚಿನ್ನ ಸಾಗಣೆ ; 37 ಲಕ್ಷದ ಚಿನ್ನದ ಜೊತೆ ಆರೋಪಿ ಕಸ್ಟಮ್ಸ್ ವಶಕ್ಕೆ

09-04-21 12:11 pm       Mangalore Correspondent   ಕ್ರೈಂ

ಅಕ್ರಮವಾಗಿ 30.73 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಾಗಾಟ ಮಾಡಿದ್ದು, ಮಂಗಳೂರು ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಎ.9 : ದುಬೈಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕನೊಬ್ಬ ಅಕ್ರಮವಾಗಿ 30.73 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಾಗಾಟ ಮಾಡಿದ್ದು, ಮಂಗಳೂರು ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೇರಳದ ಕಾಸರಗೋಡಿನ ಆಲಂಪಾಡಿ ನಿವಾಸಿ ಇಬ್ರಾಹಿಂ ಪನಾಲಂ ಅಬ್ದುಲ್ಲ ಎಂಬಾತ ವಶಕ್ಕೆ ಪಡೆದ ಆರೋಪಿ. ಆತನ ಒಳಚಡ್ಡಿಯಲ್ಲಿ 647 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. 

ದುಬೈಯಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರು ಏರ್ ಪೋರ್ಟ್ ಗೆ ಬಂದಿಳಿದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ 30.73 ಲಕ್ಷ ರೂ. ಮೌಲ್ಯದ 647 ಗ್ರಾಮ್ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

The customs of Mangalore airport have arrested a person for smuggling gold worth 30.73 lakhs. The arrested has been identified as Ibrahim.