ಬ್ರೇಕಿಂಗ್ ನ್ಯೂಸ್
09-04-21 05:47 pm Bangalore Correspondent ಕ್ರೈಂ
ಬೆಂಗಳೂರು, ಏ 9 : ಚಾಕು, ಪೇಪರ್ ಕಟ್ಟರ್, ರೇಜರ್ ಇತರ ಹರಿತ ವಸ್ತುಗಳನ್ನು ಕಾಲಿನ ಮಣಿಗಂಟಿನ ಬಳಿ ಅಡಗಿಸಿಕೊಂಡಿದ್ದ 26 ವರ್ಷದ ಗರ್ಭಿಣಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ.
ಯುವತಿಯನ್ನು ಅಸ್ಸಾಂ ಮೂಲದ ಉಮಾದೇವಿ ಎಂದು ಗುರುತಿಸಲಾಗಿದೆ. ಬೆಳಗ್ಗೆ 7.10 ಕ್ಕೆ ಬೆಂಗಳೂರಿನಿಂದ ಗುವಾಹಟಿಗೆ ತೆರಳುವ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಲು ಸಿದ್ಧತೆ ನಡೆಸಿದ್ದಳು. ದೇವಿ ಮತ್ತು ಆಕೆಯ ನಾಲ್ಕು ಕುಟುಂಬ ಸದಸ್ಯರು ತಪಾಸಣೆಗಾಗಿ ಮುಂಜಾನೆ 5.30ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಗರ್ಭಿಣಿಯ ನಡವಳಿಕೆ ಕಂಡು ಸಿಐಎಸ್ಎಫ್ ಅಧಿಕಾರಿಗಳು ಅನುಮಾನದಿಂದ ತಪಾಸಣೆ ತೀವ್ರಗೊಳಿಸಿದಾಗ ಆಕೆಯ ಎಡಕಾಲಿನ ಪಾದದ ಬಳಿ ಹರಿತವಾದ ವಸ್ತುಗಳಾದ ಪೇಪರ್ ಕಟ್ಟರ್, ಚಾಕು ,ಸಿಂಗಲ್ ಬ್ಲೇಡ್, ರೇಜರ್, ನೇಲ್‌ಕ್ಲಿಪ್ಪರ್, ಮೆಟಲ್ ಫೈಲರ್, ಇಕ್ಕಳ ಕಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ.

ಆಕೆಯನ್ನು ವಿಚಾರಣೆ ನಡೆಸಿದಾಗ "ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದು, ನಮ್ಮ ಸಮುದಾಯದಲ್ಲಿ ಗರ್ಭಿಣಿಯರು ಹೊಟ್ಟೆಯ ಸುತ್ತಲೂ ಲೋಹದ ವಸ್ತುಗಳನ್ನು ಕಟ್ಟುವುದು ಸಂಪ್ರದಾಯ. ಹೊಟ್ಟೆಯ ಭಾಗಕ್ಕೆ ಕಟ್ಟಲು ಆತಂಕವಾಗಿ ತನ್ನ ಪಾದದ ಬಳಿ ಕಟ್ಟಿಕೊಂಡಿರುವುದಾಗಿ ತಿಳಿಸಿದ್ದಾಳೆ. ತಪಾಸಣೆ ವೇಳೆ ಅಧಿಕಾರಿಗಳು ತಕ್ಷಣ ಇಂಡಿಗೋ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಹೆಚ್ಚುವರಿ ಪರಿಶೀಲನೆಗಾಗಿ ವಿಮಾನದಲ್ಲಿ ಕುಳಿತಿದ್ದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪತಿ ಸೇರಿದಂತೆ ಆಕೆಯ ಕುಟುಂಬಸ್ಥರು ಹಾಗೂ ಅವರ ಲಗೇಜ್ ಗಳನ್ನು ವಿಮಾನದಿಂದ ಇಳಿಸಿದ್ದಾರೆ.
ಶಂಕಿತೆ ಗರ್ಭಿಣಿ ವಿಮಾನದಲ್ಲಿ ಕಾಕ್‌ಪಿಟ್‌ಗೆ ಸಮೀಪವಿರುವ ಸೀಟ್ ನಂಬರ್ 1 ಎ ಬುಕ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಪೊಲೀಸರಿಗೆ ಹಸ್ತಾಂತರಿಸಿದ್ದು ಆಕೆಯನ್ನು ಹಾಗೂ ಆಕೆಯ ಸಮುದಾಯ ಪದ್ಧತಿಯ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.
A 26-year-old pregnant woman passenger with a knife, paper cutter, razor and other sharp objects strapped to her ankle with duct tape, was arrested at the Kempegowda International Airport on Thursday.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 09:49 pm
HK News Staffer
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
Mangalore Eye, Project: ಕದ್ರಿಯ ನೂರಾರು ಕೋಟಿ ಜಾ...
20-09-26 08:59 pm
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm