ಬ್ರೇಕಿಂಗ್ ನ್ಯೂಸ್
10-04-21 06:10 pm Headline Karnataka News Network ಕ್ರೈಂ
ಬೆಂಗಳೂರು, ಎ.10: ಬೆಂಗಳೂರಿನ ಎರಡು ಕುಖ್ಯಾತ ಗ್ಯಾಂಗ್ ಸ್ಟರ್ ಗಳ ನಡುವೆ ಆಗುತ್ತಿದ್ದ ಗ್ಯಾಂಗ್ ವಾರನ್ನು ಸಿಸಿಬಿ ಪೊಲೀಸರು ಸಕಾಲಿಕ ಕಾರ್ಯಾಚರಣೆಯಿಂದ ತಪ್ಪಿಸಿದ್ದಾರೆ. ಒಂಟೆ ರೋಹಿತ ಎಂದೇ ಹೆಸರು ಗಳಿಸಿರುವ ಕಾಡುಬಿಸನಹಳ್ಳಿಯ ರೌಡಿ ರೋಹಿತ್ ಗೌಡ ಮತ್ತು ಆತನ 11 ಮಂದಿ ರೌಡಿ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆ ಠಾಣೆ ವ್ಯಾಪ್ತಿಯ ಕಾಡುಬಿಸನಹಳ್ಳಿ ಮೂಲದ ರೋಹಿತ್ ಗೌಡ ಮತ್ತು ಸೋಮ ಎಂಬಿಬ್ಬರು ಕಳೆದ ಹಲವು ವರ್ಷಗಳಿಂದ ಪ್ರತ್ಯೇಕ ಗ್ಯಾಂಗ್ ಕಟ್ಟಿಕೊಂಡಿದ್ದು, ಒಬ್ಬರನ್ನೊಬ್ಬರು ಮುಗಿಸಲು ಸಂಚು ನಡೆಸುತ್ತಿದ್ದರು. ಎರಡು ಕಡೆಯೂ ಸಾಕಷ್ಟು ಕ್ರಿಮಿನಲ್ ಗಳ ಸಾಥ್ ಇದ್ದು, ಉಗ್ರಂ ಚಿತ್ರದ ರೀತಿ ಪರಸ್ಪರ ಕತ್ತಿ ಮಸೆಯುವ ಕೆಲಸ ಕಳೆದ ಕೆಲವು ಸಮಯದಿಂದ ನಡೆಯುತ್ತಲೇ ಇದೆ.
ಈ ನಡುವೆ ಕಳೆದ ಫೆಬ್ರವರಿಯಲ್ಲಿ ಮಂಗಳೂರು ಮೂಲದ ರೌಡಿಗಳ ತಂಡ ಬೆಂಗಳೂರಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದಿದ್ದರು. ಮಂಗಳೂರಿನ ವಿಶ್ವನಾಥ ಭಂಡಾರಿ ಮತ್ತು ಬೆಳ್ತಂಗಡಿ ಮೂಲದ ಕಿರಣ್ ಎಂಬವರಿದ್ದ ನಾಲ್ವರ ತಂಡ ಅದಾಗಲೇ ಬಿಡುಗಡೆಯಾಗಿದ್ದ ದರ್ಶನ್ ನಟನೆಯ ರಾಬರ್ಟ್ ಚಿತ್ರದ ನಿರ್ಮಾಪಕರೊಬ್ಬರಿಗೆ ಸ್ಕೆಚ್ ಹಾಕಿ, ಪೊಲೀಸರಿಗೆ ಸಿಕ್ಕಿಬಿದ್ದಿತ್ತು. ಈ ನಾಲ್ವರನ್ನು ಪೊಲೀಸರು ಬೆಂಡೆತ್ತಿದಾಗ ಎರಡು ಗ್ಯಾಂಗ್ ನಡುವಿನ ದ್ವೇಷದ ಕತೆಯನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ, ಕೆಲವೇ ಸಮಯದಲ್ಲಿ ಗ್ಯಾಂಗ್ ವಾರ್ ಆಗುವ ಸಾಧ್ಯತೆಯನ್ನು ಹೇಳಿದ್ದರು. ನಾವು ರೌಡಿ ಒಂಟೆ ರೋಹಿತ್ ಕಡೆಯವರಾಗಿದ್ದು, ಸೋಮನನ್ನು ಮುಗಿಸಲು ಸುಪಾರಿ ಪಡೆದಿದ್ದ ವಿಚಾರವನ್ನೂ ಪೊಲೀಸರಲ್ಲಿ ಬಾಯಿ ಬಿಟ್ಟಿದ್ದರು.
ಒಂಟೆ ರೋಹಿತ ಮತ್ತು ಸೋಮನ ಬಗ್ಗೆ ಚೆನ್ನಾಗೇ ಗೊತ್ತಿದ್ದ ಬಾಗಲಗುಂಟೆ ಪೊಲೀಸರ ಸಹಾಯ ಪಡೆದು ಸಿಸಿಬಿ ತಂಡ ಇತ್ತೀಚೆಗೆ ಬಲೆ ಬೀಸಿತ್ತು. ಮಲ್ಲಸಂದ್ರದಿಂದ ಬೆಂಕಿ ಮುನೇಶ್ವರ ರಸ್ತೆಯಾಗಿ ರವೀಂದ್ರನಗರ ಗುಂಟೆಯತ್ತ ಸಾಗುವಲ್ಲಿ ಒಂಟೆ ರೋಹಿತನ ಗ್ಯಾಂಗ್ ಬೀಡುಬಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸೋಮ ಮತ್ತಾತನ ತಂಡ ಅಲ್ಲಿಂದ ಬರುವ ಬಗ್ಗೆ ಸುಳಿವು ಪಡೆದು ಕಾದು ಕುಳಿತಿದ್ದ ರೋಹಿತ್ ಅಂಡ್ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ರೋಹಿತ್ ಗ್ಯಾಂಗಿನಲ್ಲಿ ಕಾಡುಬಿಸನಹಳ್ಳಿ ರೋಹಿತ್, ಅಮರನಾಥ್, ಮುನಿರಾಜು, ವಿಘ್ನೇಶ್, ಕಾಂತರಾಜು, ಹರೀಶ್, ಪ್ರಶಾಂತ ಕುಮಾರ್, ಜಮೀರ್, ಚಂದನ್, ಗಂಗರಾಜು, ಮಂಜುನಾಥ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಹತ್ತು ಮಚ್ಚುಗಳು, ಒಂದು ಫಾರ್ಚೂನರ್ ಕಾರು, ಮತ್ತೊಂದು ಜೀಪ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗ್ಯಾಂಗ್ ನಡುವೆ ವೈರತ್ವ ಏನಿತ್ತು ?
ರೋಹಿತ್ ಮತ್ತು ಸೋಮನ ಕಡೆಯವರ ನಡುವೆ ಕಳೆದ ಹಲವು ವರ್ಷಗಳಿಂದ ವೈರತ್ವ ಬೆಳೆದಿತ್ತು. ವೈರತ್ವಕ್ಕೆ ಉಪ್ಪು ಸುರಿದಿದ್ದು ಎರಡು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ. 2018ರಲ್ಲಿ ರೋಹಿತನ ಅಣ್ಣ ದಿನೇಶ್ ಎಂಬಾತನನ್ನು ಸೋಮನ ಕಡೆಯವರು ಕಡಿದು ಕೊಲೆ ಮಾಡಿದ್ದರು. ಇದೇ ದ್ವೇಷದಲ್ಲಿ ರೋಹಿತ್ ಮತ್ತು ಗ್ಯಾಂಗಿನವರು ಸೇರಿ ಸೋಮನ ತಮ್ಮ ಮಂಜುನನ್ನು 2019ರಲ್ಲಿ ಕೊಲೆಗೈದಿದ್ದರು. ಆಬಳಿಕ ಎರಡೂ ಗುಂಪುಗಳ ನಡುವೆ ಭಾರೀ ಕತ್ತಿಕಾಳಗದ ವರಸೆ ನಡೆದಿತ್ತು. ಒಂದೋ ನೀನು, ಇಲ್ಲಾ ನಾನು ಎಂಬಂತೆ ಒಂಟೆ ರೋಹಿತ ಮತ್ತು ಸೋಮನ ಕಡೆಯವರು ಪರಸ್ಪರ ಹಲ್ಲು ಕಡಿಯುತ್ತಿದ್ದರು.
ಇದೇ ವೇಳೆ, ಮಂಗಳೂರು ಮೂಲದ ವಿಶ್ವನಾಥ್ ಭಂಡಾರಿ ಮತ್ತು ಕಿರಣ್ ಎಂಬಿಬ್ಬರು ರೋಹಿತನಿಗೆ ಪರಿಚಯ ಆಗಿದ್ದು, ಸೋಮನ ಕತೆ ಮುಗಿಸಲು ಸುಪಾರಿ ನೀಡಿದ್ದಾನೆ. ಸುಪಾರಿ ಪಡೆದು ಸ್ಕೆಚ್ ಹಾಕಿರುವಾಗಲೇ ನಾಲ್ವರ ತಂಡ, ಪೊಲೀಸರಿಗೆ ಸೆರೆಸಿಕ್ಕಿದ್ದು, ಎಲ್ಲವನ್ನೂ ಪೊಲೀಸರ ಮುಂದೆ ಹೇಳಿಕೊಂಡಿದ್ದರು. ಈ ಮೂಲಕ ಎರಡು ಗ್ಯಾಂಗ್ ಹೊಗೆಯಾಡುತ್ತಿದ್ದ ದ್ವೇಷ ಪೊಲೀಸರ ಕಿವಿ ಮುಟ್ಟಿತ್ತು. ಪೊಲೀಸರು ಅಲರ್ಟ್ ಆಗಿದ್ದಲ್ಲದೆ, ರೌಡಿ ತಂಡಗಳ ಹಿಂದೆ ಬಿದ್ದು ಆಗಿಯೇ ಹೋಗುತ್ತಿದ್ದ ರಕ್ತದೋಕುಳಿಯನ್ನು ಅಲ್ಲಿಂದಲ್ಲಿಗೆ ತಪ್ಪಿಸಿದ್ದಾರೆ.
12 rowdy sheeters have been arrested by CCB police in Bangalore. Also two Mangalore based rowdies Kiran and Vishwanath Bhandary also have been arrested for taking supari in killing Deadly Soma.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm