ಬ್ರೇಕಿಂಗ್ ನ್ಯೂಸ್
21-05-21 11:10 am Udupi Correspondent ಕ್ರೈಂ
Photo credits : Representative Image
ಕಾರ್ಕಳ, ಮೇ 21: ವ್ಯಕ್ತಿಯೊಬ್ಬರು ತನ್ನ ಮನೆಯ ವೆರಾಂಡಾದಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಎರಡು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾರ್ಕಳದ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರ್ಲಾಲು ಹಾದಿಯಂಗಡಿ ನಿವಾಸಿ ಆನಂದ್ ಶೇರ್ವೆಗಾರ್ (63) ಮೃತ ವ್ಯಕ್ತಿಯಾಗಿದ್ದು, ಮೇ 19ರಂದು ರಾತ್ರಿ ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆನಂದ್ ಶೇರ್ವೆಗಾರ್ ತನ್ನ ಮಕ್ಕಳು ಮತ್ತು ಪತ್ನಿಯಿಂದ ಬೇರೆಯಾಗಿದ್ದು, ತನಗೆ ಸೇರಿದಗದ ನಾಲ್ಕು ಎಕ್ರೆ ಜಾಗವನ್ನು ಬೆಂಗಳೂರಿನಲ್ಲಿರುವ ಗಣೇಶ್ ರಾವ್ ಮತ್ತು ಮೂವರಿಗೆ ಮಾರಾಟ ಮಾಡಿದ್ದಾರೆ.
ಹಾಗಿದ್ದರೂ, ಜಾಗ ಖರೀದಿಸಿದ ವ್ಯಕ್ತಿಗಳ ಅನುಮತಿ ಪಡೆದು ಅದೇ ಜಾಗದ ಮೂಲೆಯಲ್ಲಿ ಅವರ ಸಂಬಂಧಿಕರ ಮನೆಯ ಪಕ್ಕದಲ್ಲಿ ಸಣ್ಣ ಮನೆ ಮಾಡಿಕೊಂಡು ಒಬ್ಬಂಟಿಯಾಗಿ ನೆಲೆಸಿದ್ದರು. ಒಬ್ಬಂಟಿಯಾಗಿದ್ದ ಆನಂದ್ ಅವರಿಗೆ ದೀನಸಿ ಸಾಮಗ್ರಿ ತಂದುಕೊಡುವುದು ಮತ್ತು ಇತರ ಕೆಲಸಗಳನ್ನು ಮಾಡಿಕೊಡುವುದಕ್ಕಾಗಿ ಅವರ ಅಕ್ಕನ ಮಗ ಹರೀಶ್ ಎಂಬಾತ ಬರುತ್ತಿದ್ದ. ಕೆಲವೊಮ್ಮೆ ಇಬ್ಬರೂ ಮನೆಯಲ್ಲಿ ಕುಳಿತು ಕುಡಿಯುವ ಚಟವನ್ನೂ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.
ಮೊನ್ನೆ ರಾತ್ರಿಯೂ ಹರೀಶ್ ಮನೆಗೆ ಬಂದಿದ್ದು, ಸಂಜೆ ಹೊತ್ತಿಗೆ ಕೆಲಸ ಮುಗಿಸಿ ತೆರಳಿದ್ದ. ರಾತ್ರಿ ವೇಳೆಗೆ ಮತ್ತೆ ಬಂದಿದ್ದು, ಈ ಸಂದರ್ಭದಲ್ಲಿ ಏನೋ ಜಗಳ ಆಗಿರಬೇಕೆಂದು ಸ್ಥಳೀಯರು ಸಂಶಯಿಸಿದ್ದಾರೆ. ಇದರ ಪರಿಣಾಮ ಕೊಲೆ ಆಗಿದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
The mortal remains of Shirlalu Hadiangadi Anand Shervegar (63) were found on the verandah of the house, where he used to reside alone, on the late-night of May 19. It is suspected that he is murdered.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 02:51 pm
HK News Desk
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm