ಬ್ರೇಕಿಂಗ್ ನ್ಯೂಸ್
02-06-21 02:58 pm Mangalore Correspondent ಕ್ರೈಂ
ಮಂಗಳೂರು, ಜೂನ್ 2: ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಬಗ್ಗೆ ಅವಹೇಳನಕಾರಿ ಸಂದೇಶ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಸುಳ್ಯ ತಾಲೂಕಿನ ದುಗ್ಗಲಡ್ಕ ನಿವಾಸಿ ಭವಾನಿಶಂಕರ್(32), ಬಜಾಲ್ ನಿವಾಸಿ ನೌಶಾದ್ (27), ಕಾವೂರು ನಿವಾಸಿ ರವಿ ಅಲಿಯಾಸ್ ಟಿಕ್ಕಿ ರವಿ(38), ಮೂಡುಬಿದ್ರೆ ಧರೆಗುಡ್ಡೆ ನಿವಾಸಿ ಜಯ ಕುಮಾರ್ (33) ಬಂಧಿತರು. ಶರಣ್ ಪಂಪ್ವೆಲ್, ದುರ್ಗಾವಾಹಿನಿ ಮಹಿಳಾ ಸಂಘಟನೆಯ ಯುವತಿಯರನ್ನು ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದಾರೆಂದು ಬಿಂಬಿಸಿ ವಾಟ್ಸಪ್ ಮೆಸೇಜ್ ಹರಿದಾಡಿತ್ತು. ಶರಣ್ ಪಂಪ್ವೆಲ್ ಜೊತೆಗೆ ಯುವತಿಯೊಬ್ಬಳು ಚಾಟ್ ಮಾಡುತ್ತಿರುವ ರೀತಿಯ ವಾಟ್ಸಪ್ ಸ್ಕ್ರೀನ್ ಶಾಟ್ ಕೂಡ ಹರಿದಾಡಿದ್ದು ಅದನ್ನು ಭಾರೀ ವೈರಲ್ ಮಾಡಲಾಗಿತ್ತು.
ಈ ಬಗ್ಗೆ ದುರ್ಗಾವಾಹಿನಿ ಮಹಿಳಾ ಸಂಘಟನೆಯ ಸದಸ್ಯರು ಮಂಗಳೂರು ಪೂರ್ವ ಠಾಣೆಗೆ ದೂರು ನೀಡಿದ್ದರು. ಈ ಮೆಸೇಜನ್ನು ಅತಿ ಹೆಚ್ಚು ಗ್ರೂಪುಗಳಿಗೆ ಫಾರ್ವರ್ಡ್ ಮಾಡಿ, ಶರಣ್ ಪಂಪ್ವೆಲ್ ಹೆಸರಿಗೆ ಕಳಂಕ ತರುವ ರೀತಿ ಬಿಂಬಿಸಿದ ಆರೋಪದಲ್ಲಿ ನಾಲ್ವರು ಯುವಕರನ್ನು ಬಂಧಿಸಲಾಗಿದೆ. ಆದರೆ, ಈ ಸ್ಕ್ರೀನ್ ಶಾಟ್ ಮೆಸೇಜನ್ನು ಯಾರು ಕ್ರಿಯೇಟ್ ಮಾಡಿದ್ದರು ಮತ್ತು ಅದು ಎಷ್ಟು ಸಾಚಾತನದ್ದು ಎನ್ನುವ ಬಗ್ಗೆ ತಾಂತ್ರಿಕ ಪರಿಣತರು ನಿರ್ಧರಿಸಲಿದ್ದಾರೆ ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಐದಾರು ದಿನಗಳ ಹಿಂದೆ ಶರಣ್ ಪಂಪ್ವೆಲ್ ಹೆಸರಲ್ಲಿದ್ದ ವಾಟ್ಸಪ್ ಮೆಸೇಜ್ ಭಾರೀ ವೈರಲ್ ಆಗಿದ್ದಲ್ಲದೆ, ಅದನ್ನು ಹಿಂದು ಸಂಘಟನೆಗಳ ವಿರೋಧಿಗಳು ಸೇರಿ ವೈರಲ್ ಮಾಡಿದ್ದರು ಅನ್ನೋ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸ್ವತಃ ಶರಣ್ ಬಳಿ ಕೇಳಿದಾಗ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಇದನ್ನು ಯಾರು ಮಾಡುತ್ತಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಆಗ್ರಹ ಮಾಡಿದ್ದೇವೆ ಎಂದು ತಿಳಿಸಿದ್ದರು. ಬಂಧಿತ ಆರೋಪಿಗಳು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾಗುತ್ತಿದ್ದು, ಕಾಂಗ್ರೆಸ್ ಮುಖಂಡರೇ ಬೇಲ್ ಕೊಡಿಸಿದ್ದಾರೆಂದು ಹೇಳಲಾಗುತ್ತಿದೆ.
Mangalore Police have arrested four people for allegedly posting derogatory messages against Durga Vahini and Vishwa Hindu Parishad (VHP) leader Sharan Pumpwell on social media. Durga Vahini is the women's wing of the VHP. The four were taken into custody on Tuesday, June 1.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am