ಬ್ರೇಕಿಂಗ್ ನ್ಯೂಸ್
04-06-21 09:44 pm Mangaluru Correspondent ಕ್ರೈಂ
ಉಳ್ಳಾಲ, ಜೂ.4: ಅಪಘಾತದ ಕಾರಣವನ್ನೇ ಮುಂದಿಟ್ಟು ಯುವಕರ ತಂಡವೊಂದು ಬೈಕ್ ಸವಾರ ಯುವಕನ ಮೇಲೆ ಮಾರಣಾಂತಿಕ ಹಲ್ಲೆಗೈದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಉಳ್ಳಾಲ ಧರ್ಮನಗರ ನಿವಾಸಿ ದಿವಾಕರ್ (34)ಹಲ್ಲೆಗೊಳಗಾದ ಯುವಕ. ದಿವಾಕರ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು ಗುರುವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಉಳ್ಳಾಲದ ಅಬ್ಬಕ್ಕ ಸರ್ಕಲ್ ನ ಎಟಿಎಂ ಸೆಂಟರ್ ಬಳಿ ತನ್ನ ಬೈಕನ್ನು ಧರ್ಮನಗರದ ಕಡೆಗೆ ತಿರುಗಿಸುತ್ತಿದ್ದ ವೇಳೆ ಹಿಂದಿನಿಂದ ಸ್ಕೂಟಿ ಚಲಾಯಿಸಿಕೊಂಡು ಬಂದ ಮುಸ್ಲಿಂ ಯುವತಿಯೊಬ್ಬರು ದಿವಾಕರ್ ಅವರ ಬೈಕಿಗೆ ಡಿಕ್ಕಿಯಾಗಿದ್ದರು ಎನ್ನಲಾಗಿದೆ. ಈ ವೇಳೆ ಯುವತಿ ಮತ್ತು ದಿವಾಕರ್ ಅವರ ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ದಿವಾಕರ್ ಪೊಲೀಸ್ ದೂರು ನೀಡುವುದಾಗಿ ಹೇಳಿದ್ದು ಯುವತಿ ತನ್ನ ಸಹೋದರ ಮಾತನಾಡುತ್ತಾನೆಂದು ಹೇಳಿ ನಂಬರ್ ಪಡೆದು ತೆರಳಿದ್ದರು. ನಿನ್ನೆ ರಾತ್ರಿ ದಿವಾಕರ್ ಅವರಿಗೆ ಯುವತಿಯ ಸೋದರನೆಂದು ಹೇಳಿಕೊಂಡ ವ್ಯಕ್ತಿ ಕರೆ ಮಾಡಿದ್ದು ಮಾತಾನಾಡಲು ಸಿಗುವಂತೆ ಹೇಳಿದ್ದಾನೆ. ಇಂದು ಸಂಜೆ 6 ಗಂಟೆಗೆ ಕರೆ ಮಾಡಿದ ಅದೇ ವ್ಯಕ್ತಿ ಧರ್ಮನಗರದ ರಝಾಕ್ ಎಂಬವರ ಅಂಗಡಿ ಮುಂಭಾಗ ಕರೆಸಿಕೊಂಡಿದ್ದು ಸ್ಕೂಟಿ ಜಖಂಗೊಂಡಿದ್ದರ ಖರ್ಚು 4,500 ರೂ. ನೀಡುವಂತೆ ಕೇಳಿದ್ದಾನೆ. ದಿವಾಕರ್ ತನ್ನ ಬೈಕ್ ಕೂಡ ಜಖಂಗೊಂಡಿದ್ದು ಅದರ ಖರ್ಚನ್ನು ಕೇಳಿದ್ದು ಪೊಲೀಸ್ ದೂರು ನೀಡೋಣ, ಅಲ್ಲೇ ತೀರ್ಪು ಆಗಲಿ ಎಂದು ಹೇಳಿದ್ದಾರೆ. ಅಷ್ಟಕ್ಕೇ ಕ್ರುದ್ಧನಾದ ಯುವತಿಯ ಸಹೋದರ ಮತ್ತು ಆತನ ಜೊತೆಯಲ್ಲಿದ್ದ ಇಬ್ಬರು ಯುವಕರು, ದಿವಾಕರ್ ಮೇಲೆ ಕೈಮಾಡಿದ್ದು ಕೈ ಮತ್ತು ತಲೆಗೆ ಕಲ್ಲಿನಿಂದ ಹಲ್ಲೆಗೈದಿದ್ದಾರೆ.
ಅಪಘಾತವೆಸಗಿದ ಯುವತಿಯ ಸ್ಕೂಟರಿನ ಫೋಟೊವನ್ನು ದಿವಾಕರ್ ಕ್ಲಿಕ್ಕಿಸಿದ್ದು ವಾಹನದ ವಿಮೆ ಅವಧಿ ಮುಗಿದಿರುವುದಾಗಿ ಹೇಳಲಾಗುತ್ತಿದೆ. ಗಾಯಾಳು ದಿವಾಕರ್ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Mangalore Youth assaulted by a gang after an accident at Ullal. The Youth has been admitted to private hospital in Thokottu.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm