ಬ್ರೇಕಿಂಗ್ ನ್ಯೂಸ್
11-06-21 02:57 pm Mangalore Correspondent ಕ್ರೈಂ
ಮಂಗಳೂರು, ಜೂನ್ 11: ಭಾರೀ ಪ್ರಮಾಣದ ನಿಷೇಧಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಪೊಲೀಸರು ಕೇರಳ ಮೂಲದ ಖದೀಮನನ್ನು ಬಂಧಿಸಿದ್ದಾರೆ.
ಕೇರಳದ ಕ್ಯಾಲಿಕಟ್ ಜಿಲ್ಲೆಯ ಮೊಹಮ್ಮದ್ ಅಜಿನಾಸ್ (25) ಬಂಧಿತ ವ್ಯಕ್ತಿ. ಈತನಲ್ಲಿದ್ದ 15 ಗ್ರಾಮ್ 15 ಮಿಲೀ ಗ್ರಾಂ ತೂಕದ 840 ಎಲ್ ಎಸ್ ಡಿ ಡ್ರಗ್ಸನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕದ್ರಿ ಮೈದಾನದ ಬಳಿ ಗ್ರಾಹಕರಿಗೆ ಕಾದಿರುತ್ತಿದ್ದ ಸಮಯದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಎಲ್ ಎಸ್ ಡಿ ಸ್ಟಾಂಪ್ ಅತ್ಯಂತ ಬೆಲೆಬಾಳುವಂಥದ್ದು. ಒಂದು ಸ್ಟ್ರಿಪ್ ಗೆ ಸಾಮಾನ್ಯವಾಗಿ 2ರಿಂದ ಆರು ಸಾವಿರ ರೂ. ಬೆಲೆಯಿದ್ದು ಶ್ರೀಮಂತರು ಮಾತ್ರ ಇದನ್ನು ಖರೀದಿ ಮಾಡುತ್ತಾರೆ. ಮಂಗಳೂರಿನಲ್ಲಿ ವಿದ್ಯಾರ್ಥಿಗಳು ಮತ್ತು ಹೈಎಂಡ್ ಪಾರ್ಟಿ ನಡೆಸುವ ಮಂದಿಯೇ ಇದರ ಗ್ರಾಹಕರು. 840 ಸ್ಟ್ರಿಪ್ ದರ 16.80 ಲಕ್ಷ ಆಗಿದ್ದು, ಈತನ ಹಿಂದೆ ಯಾರೆಲ್ಲ ಇದ್ದಾರೆ. ಈತನ ಹಿಂದೆ ಬೇರೆ ಯಾರು ಪೆಡ್ಲರ್ ಗಳಿದ್ದಾರೆ ಎನ್ನೋದನ್ನು ಪತ್ತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕದ್ರಿ ಠಾಣೆಗೆ ಹಸ್ತಾಂತರ ಮಾಡಿದ್ದಾರೆ. ಅಜಿನಾಸ್ ಜೊತೆಗಿದ್ದ ಮೋಟಾರ್ ಸೈಕಲ್ ಮತ್ತು ಎರಡು ಮೊಬೈಲ್ ಫೋನನ್ನು ವಶಕ್ಕೆ ಪಡೆದಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಎಲ್ ಎಸ್ ಡಿ ಡ್ರಗ್ಸ್ ಪತ್ತೆಯಾಗಿದೆ. ಮಂಗಳೂರಿನಲ್ಲಿ ಡ್ರಗ್ಸ್ ಮಾರಾಟದ ಪತ್ತೆಗಾಗಿ ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಇದೇ ತಂಡ ಕಾರ್ಯಾಚರಣೆ ನಡೆಸಿದೆ.
ಮಹತ್ವದ ಕಾರ್ಯಾಚರಣೆ ನಡೆಸಿದ ಹರಿರಾಮ್ ಶಂಕರ್ ನೇತೃತ್ವದ ತಂಡಕ್ಕೆ ಅಭಿನಂದಿಸಿ ಕಮಿಷನರ್ ಶಶಿಕುಮಾರ್, ತಂಡಕ್ಕೆ ಬಹುಮಾನ ರೂಪದಲ್ಲಿ ಹತ್ತು ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ.
Kadri police arrested one person and seized 840 LSD strips worth Rs 16,80,000. The accused arrested is identified as Mohammed Ajinas (25) from Calicut, Kerala. LSD is a psychotropic drug. One strip of the same cost from Rs 2,000 to Rs 6,000.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm