ಬ್ರೇಕಿಂಗ್ ನ್ಯೂಸ್
17-06-21 09:38 pm Mangaluru Correspondent ಕ್ರೈಂ
ಮಂಗಳೂರು, ಜೂನ್ 17: ನಗರದ ಕೊಡಿಯಾಲಬೈಲ್ ನಿವಾಸಿ ಮಹಿಳೆಯೊಬ್ಬರು ಭದ್ರಾವತಿಗೆ ತೆರಳಿ ವಾಹನದಲ್ಲಿ ಹಿಂದಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಚಿನ್ನಾಭರಣ ಕಳೆದುಕೊಂಡಿದ್ದರು. ಚಿನ್ನ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಮಂಗಳೂರಿನ ಕದ್ರಿ ಪೊಲೀಸರು ಭಾರೀ ಸಾಹಸದಿಂದ ಬಂಧಿಸಿದ್ದಾರೆ.
ಮೌರಿಷ್ಕಾ ಪಾರ್ಕ್ ನಿವಾಸಿಯಾಗಿರುವ ಮಹಿಳೆ ವಸಂತಾ ಎಂಬವರು ಕಳೆದ ಮಾರ್ಚ್ 10ರಂದು ಭದ್ರಾವತಿಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಚಿನ್ನ ಕಳಕೊಂಡಿದ್ದರು. ಚಿನ್ನವನ್ನು ಕಳ್ಳನೊಬ್ಬ ಎಗರಿಸಿದ್ದ ಬಗ್ಗೆ ಮಹಿಳೆ ಕದ್ರಿ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನುಹತ್ತಿದ ಕದ್ರಿ ಠಾಣೆಯ ಅಪರಾಧ ವಿಭಾಗದ ಪೊಲೀಸರು, ವಾಹನದ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದಾರೆ.
ಮಹಿಳೆ ಮಂಗಳೂರಿಗೆ ಬೇಗ ಮುಟ್ಟುವುದೆಂದು ಶಿವಮೊಗ್ಗದಿಂದ ಕ್ರೂಸ್ ವಾಹನ ಒಂದರಲ್ಲಿ ಬಂದಿದ್ದರು. ಅದರಲ್ಲಿ ಬೇರೆ ಪ್ರಯಾಣಿಕರು ಕೂಡ ಇದ್ದು, ಮಹಿಳೆಯ ಪರ್ಸ್ ನಲ್ಲಿದ್ದ ಚಿನ್ನವನ್ನು ಒಬ್ಬಾತ ಎಗರಿಸಿದ್ದ. ಇದನ್ನು ತುಂಬ ಪ್ರಯಾಸದಿಂದ ಪೊಲೀಸರು ಪತ್ತೆಹಚ್ಚಿದ್ದು, ಮೂರು ತಿಂಗಳ ಬಳಿಕ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಭದ್ರಾವತಿ ಮೂಲದ ಪಿ.ಜ್ಞಾನರತ್ನಂ(45) ಎಂದು ಗುರುತಿಸಲಾಗಿದೆ. ಆತ 2.5 ಲಕ್ಷ ಮೌಲ್ಯದ 53 ಗ್ರಾಮ್ ಚಿನ್ನವನ್ನು ದಾಂಡೇಲಿ ಮಣಪ್ಪುರಂ ಫೈನಾನ್ಸ್ , ಹುಬ್ಬಳ್ಳಿಯ ಮುತ್ತೂಟ್ ಫೈನಾನ್ಸ್ ಮತ್ತು ಭದ್ರಾವತಿಯ ಐಐಎಫ್ಎಲ್ ಫೈನಾನ್ಸ್ ನಲ್ಲಿ ಅಡವಿರಿಸಿ ಹಣ ಪಡೆದಿದ್ದ. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಪತ್ತೆ ಕಾರ್ಯದಲ್ಲಿ ಕದ್ರಿ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಪಿಎಸ್ಐ ಜಗನ್ನಾಥ್ ಕೆ., ಎಎಸ್ಐ ಸಂತೋಷ್ ಪಡೀಲ್, ಸಿಬಂದಿಗಳಾದ ಉಮೇಶ್ ಕೊಟ್ಟಾರಿ, ಗಿರೀಶ್ ಜೋಗಿ, ರಾಘವೇಂದ್ರ ಮತ್ತು ನಾಗರಾಜ ಭಾಗವಹಿಸಿದ್ದರು.
Mangalore Kadri Police nab accused in Gold heist recover 53 grams missing gold. The Crime Team of Kadri Station has succeeded in arresting the accused at Dandeli. The accused had fleed with a woman's gold two months ago while the woman was arriving at Mangalore from Shivamgga in a Cruise passenger van.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm