ಬ್ರೇಕಿಂಗ್ ನ್ಯೂಸ್
22-06-21 02:53 pm Headline Karnataka News Network ಕ್ರೈಂ
ಬೆಂಗಳೂರು, ಜೂನ್ 22: ಟ್ರಕ್ ನಲ್ಲಿ ತುಂಬಿಕೊಂಡು ಬರುತ್ತಿದ್ದ ಭಾರೀ ಪ್ರಮಾಣದ ಗಾಂಜಾವನ್ನು ಬೆಂಗಳೂರಿನ ಎನ್ ಸಿಬಿ ಅಧಿಕಾರಿಗಳು ಪತ್ತೆಹಚ್ಚಿದ್ದು ನಾಲ್ವರನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಹೈದರಾಬಾದ್ ನಿಂದ ಬೆಂಗಳೂರಿಗೆ ತರಲಾಗುತ್ತಿದ್ದ ಎರಡು ಸಾವಿರ ಕೇಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೇರು ಬೀಜ ಸಾಗಿಸುತ್ತಿದ್ದ ಲಾರಿಯಲ್ಲಿ ಬಾಕ್ಸ್ ಗಳ ಎಡೆಯಲ್ಲಿ ಗಾಂಜಾವನ್ನು ತುಂಬಿಸಲಾಗಿತ್ತು. ಬೆಂಗಳೂರು ಎನ್ ಸಿಬಿ ವಲಯ ನಿರ್ದೇಶಕ ಅಮಿತ್ ಘವಾಟೆ ಈ ಬಗ್ಗೆ ಹೇಳಿಕೆ ನೀಡಿದ್ದು, 15 ಕೋಟಿ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾಗಿ ಮಾಹಿತಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ಭಾರೀ ಪ್ರಮಾಣದಲ್ಲಿ ಗಾಂಜಾ (ಮರಿಜುವಾನಾ) ಸಂಗ್ರಹವನ್ನು ಪತ್ತೆ ಮಾಡಲಾಗಿದೆ. ಗೇರು ಬೀಜಗಳ ಚೀಲಗಳ ಮಧ್ಯೆ ಎರಡು ಕೇಜಿಯಷ್ಟು ಗಾಂಜಾವನ್ನು ಪ್ಲಾಸ್ಟಿಕ್ ಪ್ಯಾಕ್ ಮಾಡಿ ತುಂಬಿಸಲಾಗಿತ್ತು. ಲಾರಿಯಲ್ಲಿ ಪೂರ್ತಿ ಪರಿಶೀಲನೆ ನಡೆಸಿದಾಗ, ಈ ರೀತಿಯ 1080 ಪ್ಲಾಸ್ಟಿಕ್ ಚೀಲಗಳಲ್ಲಿ ಗಾಂಜಾ ಅಡಗಿಸಿಟ್ಟಿರುವುದು ಪತ್ತೆಯಾಗಿದೆ ಎಂದು ಘವಾಟೆ ತಿಳಿಸಿದ್ದಾರೆ.

ಭಾರೀ ಗಾತ್ರದ ಟ್ರಕ್ಕಿನಲ್ಲಿ ಗಾಂಜಾ ತುಂಬಿಸಿಕೊಂಡು ಪುಣೆ, ಮುಂಬೈಗೆ ಸಾಗಿಸುವ ದಂಧೆ ಇದೆ. ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಮತ್ತು ಹೈದರಾಬಾದಿನ ಎನ್ ಸಿಬಿ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಹೈದರಾಬಾದಿನ ಪೆಡ್ಡಾ ಅಂಬರಪೇಟ್ ಟೋಲ್ ಪ್ಲಾಜಾದಲ್ಲಿ ಅಧಿಕಾರಿಗಳು ಟ್ರಕ್ಕನ್ನು ಅಡ್ಡಹಾಕಿ ಪರಿಶೀಲಿಸಿದಾಗ ಗಾಂಜಾ ಸಾಗಿಸುತ್ತಿರುವುದು ಪತ್ತೆಯಾಗಿದೆ. ಬಂಧಿತರನ್ನು ಮಹಾರಾಷ್ಟ್ರದ ಉಸ್ಮನಾಬಾದ್ ಜಿಲ್ಲೆಯ ಕೆ.ಕಾಳೆ, ಎಸ್. ಕಾಳೆ, ಸಿ.ಕಾಳೆ ಮತ್ತು ಬಿ.ಧೋವಲ್ಕರ್ ಎಂದು ಗುರುತಿಸಿದ್ದಾಗಿ ಅಮಿತ್ ಘವಾಟೆ ತಿಳಿಸಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶದಲ್ಲಿ ಗಾಂಜಾ ಬೆಳೆ
ಆಂಧ್ರಪ್ರದೇಶ ಮತ್ತು ಒಡಿಶಾ ಗಡಿಭಾಗದ ಮಾವೋವಾದಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಇದೇ ಭಾಗದಿಂದ ಇಡೀ ದೇಶಾದ್ಯಂತ ಗಾಂಜಾ ಪೂರೈಕೆಯಾಗುತ್ತಿದೆ. ರಾಜಧಾನಿ ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳಿಗೆ ಅಕ್ರಮವಾಗಿ ಸರಬರಾಜು ಆಗುತ್ತದೆ. ಇದೇ ಗಾಂಜಾ ಶ್ರೀಲಂಕಾಕ್ಕೂ ರವಾನೆ
Bangalore Two thousand kilos of Ganja found in Truck. The drugs were packed in around 1080 gunny bags.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
27-09-26 11:31 pm
HK News Desk
ವಿದ್ಯಾರ್ಥಿ ಸಂಘದ ಪದಗ್ರಹಣ ; ಮೊದಲ ಮಹಡಿಯ ಕಾಂಕ್ರೀಟ...
27-09-26 10:59 am
ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪದಗ್ರಹಣ ; ವಿದ್ಯಾರ್...
26-09-26 08:05 pm
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
27-09-26 08:06 pm
HK News Staffer
Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ...
27-09-26 06:10 pm
ಶಾರ್ಜಾದಲ್ಲಿ ಹತ್ಯೆಯಾದ ಕುಂದಾಪುರದ ವ್ಯಕ್ತಿಯ ಶವ ಹು...
25-09-26 04:53 pm
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am