ಬ್ರೇಕಿಂಗ್ ನ್ಯೂಸ್
22-06-21 09:22 pm Giridhar Shetty, Mangaluru ಕ್ರೈಂ
ಮಂಗಳೂರು, ಜೂನ್ 22: ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಕಾಸರಗೋಡಿನ ಉಪ್ಪಳ ಮೂಲದ ರಮೀಜ್ ಸಣ್ಣ ವಯಸ್ಸಿನಲ್ಲೇ ಡ್ರಗ್ಸ್ ಲೋಕದಲ್ಲಿ ಭಯಾನಕ ರೀತಿಯಲ್ಲಿ ಪಳಗಿದ್ದ ಅನ್ನೋ ವಿಚಾರ ಬಯಲಾಗಿದೆ. ಬೆಂಗಳೂರಿನಲ್ಲಿ ಕುಳಿತುಕೊಂಡೇ ಕೇರಳದ ಹದಿನಾಲ್ಕು ಜಿಲ್ಲೆಗಳಿಗೂ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಅಷ್ಟೇ ಅಲ್ಲಾ ಒಂದು ಕಾಲದಲ್ಲಿ ಡ್ರಗ್ಸ್ ಕಿಂಗ್ ಪಿನ್ ಆಗಿದ್ದ ಕೊಲಂಬಿಯಾ ಮೂಲದ ಪಾಬ್ಲೋ ಎಸ್ಕೋಬಾರ್ ರೀತಿಯಲ್ಲಿ ಕೇರಳದ ಪಾಲಿಗೆ ಡ್ರಗ್ಸ್ ಕಿಂಗ್ ಆಗಬೇಕೆಂದು ಕನಸು ಕಂಡಿದ್ನಾ ಅನ್ನುವ ಅನುಮಾನ ಹುಟ್ಕೊಂಡಿದೆ.
ರಮೀಜ್ ಪಾಲಿಗೆ ಇನ್ನೂ 24ರ ವಯಸ್ಸು. ಕಾಲೇಜು ಮುಗಿಸಿ ಎರಡು ವರ್ಷದಲ್ಲೇ ಗಾಂಜಾ ಪೆಡ್ಲರ್ ಆಗಿ ಡ್ರಗ್ಸ್ ಲೋಕಕ್ಕೆ ಕಾಲಿಟ್ಟಿದ್ದ ರಮೀಜ್, ಅಲ್ಪ ಸಮಯದಲ್ಲೇ ಡ್ರಗ್ ಪೂರೈಕೆದಾರ ನೈಜೀರಿಯನ್ ಪ್ರಜೆಗಳ ನಂಟು ಸಾಧಿಸಿದ್ದ. ನೈಜೀರಿಯನ್ ಪ್ರಜೆಗಳಿಂದಲೇ ಕೊಕೇನ್ ಮತ್ತು ಎಂಡಿಎಂಎ ಡ್ರಗ್ಸ್ ಕರ್ನಾಟಕ, ಕೇರಳಕ್ಕೆ ಪೂರೈಕೆ ಆಗ್ತಿರೋದು. ಹೆಚ್ಚಾಗಿ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಸೋಗಿನಲ್ಲಿ ಇರುವ ನೈಜೇರಿಯನ್ ಪ್ರಜೆಗಳು ಕಳ್ಳದಾರಿಯಲ್ಲಿ ಡ್ರಗ್ ತರಿಸಿಕೊಂಡು ಅದನ್ನು ಸದ್ದಿಲ್ಲದೇ ಸರಬರಾಜು ಮಾಡುತ್ತಾರೆ.
ಇತ್ತೀಚೆಗೆ ಕೋಣಾಜೆಯ ಮಂಗಳೂರು ವಿವಿ ಬಳಿ ಎರಡು ಕಾರುಗಳಲ್ಲಿ ಕಾಸರಗೋಡಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದರು. 10 ಲಕ್ಷ ಮೌಲ್ಯದ 170 ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು ಅದರ ಹಿಂದಿನ ಸೂತ್ರಧಾರಿಗಳ ಬಂಧನಕ್ಕೆ ತಂತ್ರ ಹೆಣೆದಿದ್ದರು. ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಉಪ್ಪಳ ಮೂಲದ ರಮೀಜ್ ಮತ್ತು ನೈಜೀರಿಯನ್ ಮೂಲದ ಸ್ಟಾನ್ಲಿ ಚಿಮಾ ಎನ್ನುವ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಮಂಗಳೂರಿಗೆ ಕರೆತಂದಿದ್ದಾರೆ.
ಪೊಲೀಸರ ವಿಚಾರಣೆ ವೇಳೆ, ರಮೀಜ್ ತಾನೇ ಕೇರಳದ ಹದಿನಾಲ್ಕು ಜಿಲ್ಲೆಗಳಿಗೂ ಎಂಡಿಎಂಎ ಡ್ರಗ್ ಪೂರೈಕೆ ಮಾಡುತ್ತಿದ್ದೆ ಎಂದು ಮಾಹಿತಿ ನೀಡಿದ್ದಾನೆ. ಈತ ಸೇರಿ ಇತರ ಮೂವರಿಗೆ ಮಾತ್ರ ಬೆಂಗಳೂರಿನಲ್ಲಿ ನೈಜೀರಿಯನ್ ಪ್ರಜೆಗಳು ಡ್ರಗ್ ಪೂರೈಕೆ ಮಾಡುತ್ತಿದ್ದರು. ಯಾಕಂದ್ರೆ, ಅಷ್ಟು ವಿಶ್ವಾಸ ಇಲ್ಲದೇ ಇದ್ದರೆ ಡ್ರಗ್ಸ್ ಕೊಡುವುದೇ ಇಲ್ಲ ನೈಜೀರಿಯನ್ನರು. ಸತತ ಒಡನಾಟ, ಸರಿಯಾದ ಪೇಮೆಂಟ್ ಮಾಡಿಕೊಂಡಿದ್ದರೆ ಮಾತ್ರ ಅತ್ತ ಕಡೆಯಿಂದ ಸಪ್ಲೈ ಕೂಡ ಇರತ್ತೆ.. ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರಮೀಜ್ ಮತ್ತು ಸ್ಟಾನ್ಲಿಯನ್ನು ಪೊಲೀಸರು ಮತ್ತೆ ಕಸ್ಟಡಿಗೆ ಪಡೆಯಲಿದ್ದಾರೆ. ಇನ್ನಷ್ಟು ವಿಚಾರಣೆಗೆ ಒಳಪಡಿಸಿದರೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇರಲಿದೆ.
ಬೆಂಗಳೂರಿನಲ್ಲಿ ನೈಜೀರಿಯನ್ನರಿಗೆ ಅವರದೇ ಆದ ನೆಟ್ವರ್ಕ್ ಇದೆ. ಅವರಲ್ಲಿ ಡ್ರಗ್ ಪೂರೈಕೆದಾರರು ಯಾರು ಎನ್ನುವುದನ್ನು ಪತ್ತೆ ಮಾಡುವುದೂ ಸುಲಭ ಇಲ್ಲ. ಹೆಚ್ಚಿನವರ ಮೂತಿ, ಬಣ್ಣ, ಗಾತ್ರ, ವರ್ತನೆ ಒಂದೇ ರೀತಿ ಇರುವುದರಿಂದ ಅವರಲ್ಲಿ ಯಾರು ಡ್ರಗ್ಗಿಸ್ಟ್, ಯಾರು ಪೆಡ್ಲರ್, ಯಾರು ಸಾಚಾಗಳು ಅನ್ನೋದನ್ನು ಪತ್ತೆ ಮಾಡುವುದೂ ಅಷ್ಟೇ ಕಷ್ಟದ ಕೆಲಸ. ಹಾಗಿದ್ದರೂ, ಪೊಲೀಸರು ಪೆಡ್ಲರ್ ಗಳ ಮೂಲಕವೇ ಅವರನ್ನು ಗುರುತಿಸುವ ಕೆಲಸ ಮಾಡಿದರೆ, ಈ ಕೆಲಸ ಅಷ್ಟೇ ಸಲೀಸು ಬಿಡಿ. ಪ್ರಮುಖವಾಗಿ ಕೊಕೇನ್ ಮತ್ತು ಎಂಡಿಎಂಎ ಡ್ರಗ್ಸ್ ಅನ್ನು ಪೂರೈಕೆ ಮಾಡುವ ನೈಜೀರಿಯನ್ನರು, ಅದನ್ನು ವಿಮಾನದ ಮೂಲಕ ಕೊರಿಯರ್, ಕಸ್ಟಮ್ ಅಥವಾ ದೇಹದಲ್ಲಿ ಅಡಗಿಸಿಟ್ಟುಕೊಂಡು ಡ್ರಗ್ಸ್ ತರಿಸಿಕೊಳ್ಳುತ್ತಾರೆ.
ಉಪ್ಪಳದಿಂದಲೇ ಇಡೀ ರಾಜ್ಯಕ್ಕೆ ನೆಟ್ವರ್ಕ್
ಅಂದಹಾಗೆ, ಕೇರಳದ ಡ್ರಗ್ ಜಾಲಕ್ಕೆ ಕಾಸರಗೋಡಿನ ಉಪ್ಪಳವೇ ಸೆಂಟರ್ ಪಾಯಿಂಟ್. ಉಪ್ಪಳ ಕೇಂದ್ರಿತವಾಗಿ ಇಡೀ ಕೇರಳದ ಅಷ್ಟೂ ಜಿಲ್ಲೆಗಳಿಗೆ ಮತ್ತು ಕರ್ನಾಟಕ ಕರಾವಳಿಗೂ ಗಾಂಜಾ ಇನ್ನಿತರ ಎಲ್ಲ ರೀತಿಯ ಡ್ರಗ್ಸ್, ಮಾದಕ ದ್ರವ್ಯಗಳು ಪೂರೈಕೆಯಾಗುತ್ತಿವೆ ಅನ್ನೋ ಮಾಹಿತಿಯೂ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದಕ್ಕೆ ಪೂರಕವಾಗಿ ಒಂದೇ ವಾರದಲ್ಲಿ ಮಂಗಳೂರು ಮತ್ತು ಕಾಸರಗೋಡಿನಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ಮತ್ತು ಗಾಂಜಾ ವಶಕ್ಕೆ ಪಡೆಯಲಾಗಿತ್ತು. ಕೊಣಾಜೆಯಲ್ಲಿ 210 ಕೇಜಿ ಗಾಂಜಾ, ಮಂಗಳೂರಿನಲ್ಲಿ 230 ಗ್ರಾಮ್ ಎಂಡಿಎಂಎ ವಶಕ್ಕೆ ಪಡೆದು ವಿಚಾರಿಸಿದಾಗ, ಅದು ಕಾಸರಗೋಡಿಗೆ ಪೂರೈಕೆ ಆಗುತ್ತಿದ್ದುದು ಬಯಲಾಗಿತ್ತು. ಅದೇ ಸಂದರ್ಭದಲ್ಲಿ ಉಪ್ಪಳದಲ್ಲಿ ಪೊಲೀಸರು 250 ಕೇಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದರು.
ಡ್ರಗ್ಸ್ ಕಿಂಗ್ ಪಿನ್ ಆಗಿದ್ದ ರಮೀಜ್
ಕೇರಳಕ್ಕೆ ಕನಿಷ್ಠ ಒಂದು ವಾರದಲ್ಲೇ 500 ಗ್ರಾಮ್ ಎಂಡಿಎಂಎ ಡ್ರಗ್ಸ್ ಬೇಡಿಕೆಯಿತ್ತು ಅನ್ನೋ ಮಾಹಿತಿಗಳಿವೆ. ಅಷ್ಟನ್ನೂ ರಮೀಜ್ ನೈಜೀರಿಯನ್ ಪ್ರಜೆಗಳ ಮೂಲಕ ಕೇರಳಕ್ಕೆ ಪೂರೈಕೆ ಮಾಡುತ್ತಿದ್ದ ಎನ್ನಲಾಗುತ್ತಿದೆ. ಎಂಡಿಎಂಎ ಡ್ರಗ್ಸ್ ಶ್ರೀಮಂತರು ಮಾತ್ರ ಬಳಸುವ ಡ್ರಗ್ಸ್. ಯಾಕಂದ್ರೆ, ಒಂದು ಗ್ರಾಮ್ ಡ್ರಗ್ಗಿಗೆ ಮಾರುಕಟ್ಟೆಯಲ್ಲಿ 5ರಿಂದ ಆರು ಸಾವಿರ ರೂಪಾಯಿ ಮೌಲ್ಯ ಇದೆ. ಹೀಗಾಗಿ 500 ಗ್ರಾಮ್ ಡ್ರಗ್ಸನ್ನು ವಾರ ಒಂದರಲ್ಲೇ ಪೂರೈಕೆ ಮಾಡುತ್ತಿದ್ದುದೇ ಆಗಿದ್ದರೆ, 6 ಸಾವಿರದಂತೆ ನೋಡಿದ್ರೂ ಬರೋಬ್ಬರಿ 30 ಲಕ್ಷದ ವಹಿವಾಟು. ಇದೇ ಕಾರಣಕ್ಕೆ ರಮೀಜ್, ಪಾಬ್ಲೋ ಎಸ್ಕೋಬಾರ್ ರೀತಿ ಡಾನ್ ಆಗಲು ಹೊರಟಿದ್ದನೇ ಅನ್ನುವ ಅನುಮಾನ ಹುಟ್ಟಿಕೊಂಡಿದ್ದು.
ಪಾಬ್ಲೋ ಎಸ್ಕೋಬಾರ್ ಯಾರು ಗೊತ್ತಾ ?
ಕೊಲಂಬಿಯಾ ಮೂಲದ ಪಾಬ್ಲೋ ಎಸ್ಕೋಬಾರ್ 1970-80ರ ದಶಕದಲ್ಲೇ ಡ್ರಗ್ಸ್ ಕಿಂಗ್ ಪಿನ್ ಆಗಿದ್ದ ಮನುಷ್ಯ. ಅಮೆರಿಕ, ಯುರೋಪ್ ರಾಷ್ಟ್ರಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಪಾಬ್ಲೋ ಇಡೀ ಜಗತ್ತಿನಲ್ಲೇ ಸಿರಿವಂತ ಡ್ರಗ್ಗರ್ ಆಗಿದ್ದ. ಕೇವಲ 44 ವರ್ಷ ಬದುಕಿದ್ದ ಪಾಬ್ಲೋ 1993ರಲ್ಲಿ ಗುಂಡೇಟು ಬಿದ್ದು ಸತ್ತಾಗ ಆತನ ಆಸ್ತಿಯ ಮೌಲ್ಯ 30 ಬಿಲಿಯನ್ ಡಾಲರ್ ನಷ್ಟಿತ್ತು. ಸಣ್ಣ ಪ್ರಾಯದಲ್ಲೇ ಡ್ರಗ್ಸ್ ರಾಜನಾಗಿ ಬೆಳೆದಿದ್ದ ಪಾಬ್ಲೋ ಕತೆಯೇ ಬೆರಗು ಹುಟ್ಟಿಸುವಂಥದ್ದು.
King Pin of Drug Supply in Uppala, Kerala has been arrested by Mangalore Police. The accused Ramiz was following Pablo Escobar who was the founder and sole leader of the Medellín Cartel. Dubbed "The King of Cocaine. A detailed crime report by Headline Karnataka.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm