ಬ್ರೇಕಿಂಗ್ ನ್ಯೂಸ್
07-03-26 08:05 pm HK News Staffer ಕರ್ನಾಟಕ
ಕಾಸರಗೋಡು, ಮಾರ್ಚ್ 7 : “ಕೈ ಸರಿ ಇಲ್ಲದಿದ್ದರೆ ಏನಂತೆ, ಗುರಿ ತಲುಪುವ ಛಲವೊಂದಿದ್ದರೆ ಸಾಕು” ಎಂಬ ಮಾತು ಈಕೆಯ ಪಾಲಿಗೆ ಅಕ್ಷರಶಃ ನಿಜವಾಗಿದೆ. ಹುಟ್ಟಿನಿಂದಲೇ ಮುಂಗೈ ಮೊಂಡಾಗಿದ್ದು ಅಂಗವಿಕಲೆಯಾಗಿದ್ದ ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ಕಾಜಲ್ ರಾಜು ಯುಪಿಎಸ್ಸಿ ಪರೀಕ್ಷೆಯಲ್ಲಿ 167ನೇ ರ್ಯಾಂಕ್ ಪಡೆದು ದೇಶದ ಗಮನ ಸೆಳೆದಿದ್ದಾರೆ.
ಫೋಕೊಮೆಲಿಯಾ ಸಿಂಡ್ರೋಮ್ ಎಂಬ ಅಪರೂಪದ ದೈಹಿಕ ಸವಾಲನ್ನು ಮೆಟ್ಟಿ ನಿಂತಿರುವ ಕಾಜಲ್ ಅವರು, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 167ನೇ ರ‍್ಯಾಂಕ್ ಗಳಿಸಿ ಆಡಳಿತ ಸೇವೆ(ಐಎಎಸ್) ಸೇರುವ ದಾರಿಯನ್ನು ಸುಗಮಗೊಳಿಸಿದ್ದಾರೆ.
ಕಾಜಲ್ ರಾಜು ಅವರು ಕಾಸರಗೋಡು ಜಿಲ್ಲೆಯ ನೀಲೇಶ್ವರ ಸಮೀಪದ ಪಲ್ಲಿಕ್ಕರದವರು. ಅವರ ತಾಯಿ ಶೀಬಾ ಎಂ. ಡಿವೈನ್ ಪ್ರಾವಿಡೆನ್ಸ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಂದೆ ರಾಜು ಪಿ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಪ್ರಸ್ತುತ ರಬ್ಬರ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
2022ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾದಾಗ, “ಒಂದು ವೇಳೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ನಿಮಗೆ ಎಷ್ಟು ಕಷ್ಟವಾಗಬಹುದು?” ಎಂದು ಸಮಿತಿ ಸದಸ್ಯರು ಪ್ರಶ್ನಿಸಿದ್ದರು. ಆಗ ಬಲ ಮುಂಗೈ ಇಲ್ಲದಿದ್ದರೂ ಯಾವುದೇ ಹಿಂಜರಿಕೆಯಿಲ್ಲದೆ ಕಾಜಲ್ ನೀಡಿದ ಉತ್ತರ ಸ್ಪಷ್ಟವಾಗಿತ್ತು, “ನಾನು ಮತ್ತೆ ಪ್ರಯತ್ನಿಸುತ್ತೇನೆ.” ಇದೇ ಆತ್ಮವಿಶ್ವಾಸ ಅವರ ಯಶಸ್ಸಿನ ಬೆನ್ನೆಲುಬಾಗಿದೆ.
ಆ ವರ್ಷ ಅವರು 910ನೇ ರ್ಯಾಂಕ್ ಪಡೆದು ಭಾರತೀಯ ರೈಲ್ವೆ ನಿರ್ವಹಣಾ ಸೇವೆಗೆ ಆಯ್ಕೆಯಾಗಿದ್ದರು. ಆದರೆ ಬಾಲ್ಯದಿಂದಲೇ ಕಂಡಿದ್ದ ‘ಜಿಲ್ಲಾಧಿಕಾರಿ’ ಆಗುವ ಕನಸನ್ನು ಸಾಧಿಸುವ ಗುರಿಯಿಂದ ಮತ್ತೆ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧರಾದರು. 2023ರಲ್ಲಿ ಪರೀಕ್ಷೆ ಬರೆದಾಗ 956 ರ್ಯಾಂಕ್ ಬಂದಿತ್ತು. 2024ರಲ್ಲಿ ಪ್ರಿಲಿಮಿನರಿ ಪರೀಕ್ಷೆಯಲ್ಲೇ ಫೇಲಾಗಿದ್ದರು. 2025ರಲ್ಲಿ ಸತತ ನಾಲ್ಕನೇ ಬಾರಿಗೆ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ.
167ನೇ ರ‍್ಯಾಂಕ್ ಬಂದ ಸುದ್ದಿ ಬಂದಾಗ ಕಾಜಲ್ ಜಮ್ಮುವಿನಲ್ಲಿದ್ದರು. ರೈಲ್ವೇ ಇಲಾಖೆಯ ತರಬೇತಿ ಭಾಗವಾಗಿ ಮಿಲಿಟರಿ ಪ್ರದೇಶಗಳಿಗೆ ಭೇಟಿ ನೀಡಲು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಸ್ನೇಹಿತೆಯೊಬ್ಬರ ವಾಟ್ಸಾಪ್ ಸಂದೇಶದ ಮೂಲಕ ಫಲಿತಾಂಶ ತಿಳಿದುಕೊಂಡರು. ಆ ಕ್ಷಣದಲ್ಲಿ ಅವರ ಸಂತೋಷಕ್ಕೆ ಮಿತಿ ಇರಲಿಲ್ಲ. ಪ್ರತಿ ವರ್ಷವೂ ಸಾಕಷ್ಟು ತಯಾರಿ ಮಾಡುತ್ತಿದ್ದೆ. ಈ ಬಾರಿ ಹಿಂದಿಗಿಂತ ಹೆಚ್ಚು ತಯಾರಿ ನಡೆಸಿದ್ದೆ. ಬೆಳಗ್ಗೆ 5 ಗಂಟೆಯಿಂದ ತೊಡಗಿ ತರಬೇತಿ, ಕ್ಲಾಸ್ ಅಂತ ರಾತ್ರಿಯ ವರೆಗೂ ತಯಾರಿ ನಡೆಸುತ್ತಿದ್ದರು ಎಂದು ಹೇಳುತ್ತಾರೆ.
ಕಾಜಲ್ ಅವರ ಸಾಧನೆ ಕೇವಲ ಯುಪಿಎಸ್‌ಸಿ ಪರೀಕ್ಷೆಗೆ ಮಾತ್ರ ಸೀಮಿತವಲ್ಲ. 10ನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಗ್ರೇಡ್ ಪಡೆದಿದ್ದ ಅವರು, ಪ್ಲಸ್ ಟು ಪರೀಕ್ಷೆಯಲ್ಲಿ ಶೇ.99 ಅಂಕ ಗಳಿಸಿದ್ದರು. ಶಿಕ್ಷಣದ ಜೊತೆಗೆ ಶಾಸ್ತ್ರೀಯ ಸಂಗೀತ ಹಾಗೂ ಚಿತ್ರಕಲೆಯಲ್ಲಿಯೂ ಪರಿಣತರಾಗಿದ್ದರು. ಕಾಜಲ್ ಕೊನೆಗೂ ತನ್ನ ಅಧಿಕಾರಿ ಆಗೋ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಮುಂದೆ ಆಡಳಿತ ಸೇವೆಯ ಬಗ್ಗೆ ಲಕ್ನೋದಲ್ಲಿ ತರಬೇತಿ ಪಡೆಯಲಿದ್ದಾರೆ. ದೈಹಿಕ ಸವಾಲುಗಳನ್ನು ಮೀರಿ ಅಸಾಧ್ಯವೆನಿಸಿದ ಗುರಿಯನ್ನು ಸಾಧಿಸಿದ ಕಾಜಲ್ ಅವರ ಈ ಯಶೋಗಾಥೆ ಸಾವಿರಾರು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಪ್ರೇರಣೆಯಾಗಲಿದೆ.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm