ಬ್ರೇಕಿಂಗ್ ನ್ಯೂಸ್
25-06-21 02:43 pm Headline Karnataka News Network ಕ್ರೈಂ
ಬೆಂಗಳೂರು, ಜೂನ್ 25: ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಘಟನೆ ನಡೆದ 24 ಗಂಟೆಯೊಳಗೆ ಪ್ರಮುಖ ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಕೊಲೆ ಸಂಚಿನಲ್ಲಿ ಪಾಲ್ಗೊಂಡಿದ್ದ ನಾಲ್ವರನ್ನು ನಿನ್ನೆಯೇ ವಶಕ್ಕೆ ಪಡೆಯಲಾಗಿತ್ತು. ತಪ್ಪಿಸಿಕೊಂಡಿದ್ದ ಇನ್ನಿಬ್ಬರನ್ನೂ ಪೊಲೀಸರು ಸೆರೆ ಹಿಡಿದಿದ್ದಾರೆ.
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಜೊತೆಗಿದ್ದ ನಾಲ್ವರು ಭಾಗಿಯಾಗಿದ್ದರು ಎನ್ನುವ ಮಾಹಿತಿ ಇತ್ತು. ಅದರಂತೆ, ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಪೀಟರ್, ಸೂರ್ಯ, ಸ್ಟೀಫನ್ ಮತ್ತು ಇನ್ನೂ 3 ಮಂದಿಯನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಮನಹಳ್ಳಿ ಶನಿ ಮಹಾತ್ಮ ದೇಗುಲ ಬಳಿ ಅಡಗಿಕೊಂಡಿದ್ದ ಮೂವರನ್ನು ಶರಣಾಗಲು ಪೊಲೀಸರು ಸೂಚಿಸಿದ್ದರು. ಆದರೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಆರೋಪಿಗಳ ಕಾಲಿಗೆ ಇನ್ಸ್ ಪೆಕ್ಟರ್ ಶಿವಸ್ವಾಮಿ ಗುಂಡು ಹಾರಿಸಿ, ನಂತರ ಬಂಧಿಸಿದ್ದಾರೆ.
ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರೇಖಾ ಸಂಬಂಧಿ ಸಂಜಯ್ ನೀಡಿದ ದೂರಿನ ಮೇರೆಗೆ ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಸೂರ್ಯ ಎ1 ಆರೋಪಿ ಆಗಿದ್ದು, ಪೀಟರ್ ಎ2 ಎಂದು ಕಾಟನ್ ಪೇಟೆ ಪೊಲೀಸರು ಎಫ್ಐಆರ್ ನಲ್ಲಿ ಗುರುತಿಸಿದ್ದಾರೆ.
ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ಅಗಿದ್ದ ರೇಖಾ ಕದಿರೇಶ್ ಫ್ಲವರ್ ಗಾರ್ಡನ್‌ನಲ್ಲಿ ವಾಸವಾಗಿದ್ದರು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಡವರಿಗೆ ಅನ್ನದಾನ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಛಲವಾದಿ ಪಾಳ್ಯದಲ್ಲಿರುವ ಕಚೇರಿಗೆ ರೇಖಾ ಬಂದಿದ್ದು ಅನಾಥರಿಗೆ ಉಪಾಹಾರ ನೀಡಿದ್ದರು. ಸ್ವಲ್ಪ ಹೊತ್ತಿನಲ್ಲಿ ಆಗಂತಕರು ಕಚೇರಿಯಿಂದ ಹೊರಗೆ ಕರೆಸಿಕೊಂಡಿದ್ದರು. ಇದಕ್ಕೂ ಮುನ್ನ ಕಚೇರಿಯ ಎರಡು ಸಿಸಿಟಿವಿ ಕ್ಯಾಮರಾಗಳನ್ನು ಮೇಲಕ್ಕೆ ತಿರುಗಿಸಲಾಗಿತ್ತು. ಹೊರಗೆ ಬಂದು ಮಾತನಾಡಿಕೊಂಡಿದ್ದ ರೇಖಾ ಕದಿರೇಶ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಗಾಯಗೊಂಡ ರೇಖಾ ಅವರನ್ನು ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪೀಟರ್ ಮತ್ತು ಸೂರ್ಯ, ರೇಖಾ ಕದಿರೇಶ್ ಜೊತೆಗೇ ಗುರುತಿಸಿಕೊಂಡಿದ್ದಲ್ಲದೆ, ಎರಡು ವರ್ಷಗಳಿಂದ ರೇಖಾಗೆ ಬಾಡಿಗಾರ್ಡ್ ರೀತಿ ಓಡಾಡಿಕೊಂಡಿದ್ದರು. ಆದರೆ, ಸಡನ್ನಾಗಿ ಇವರು ತಿರುಗಿಬಿದ್ದಿದ್ದು ಏಕೆ ಎನ್ನುವ ಬಗ್ಗೆ ಭಾರೀ ಕುತೂಹಲ ಎದ್ದಿದೆ.
ರಾಜಕೀಯವಾಗಿ ಪ್ರಬಲವಾಗಿದ್ದ 45 ವರ್ಷದ ರೇಖಾ ಕದಿರೇಶ್ ಸ್ಥಳೀಯವಾಗಿ ಚಿರಪರಿಚಿತ ಮತ್ತು ಜನಪ್ರಿಯ ನಾಯಕಿಯಾಗಿ ಬೆಳೆದಿದ್ದರು. ಹಾಗಾಗಿ ಮುಂದಿನ ಬಾರಿಯೂ ಅವರನ್ನೇ ಬಿಜೆಪಿಯಿಂದ ಕಣಕ್ಕಿಳಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಿತ್ತು. ಇದಕ್ಕೆ ಪೂರಕವಾಗಿ ಬೆಂಗಳೂರು ನಗರ ಸಮಿತಿ ಅಧ್ಯಕ್ಷ ಎನ್.ಆರ್ ರಮೇಶ್ ಕೂಡ ಹೇಳಿಕೆ ನೀಡಿದ್ದು, ಜನಾನುರಾಗಿ ಆಗಿದ್ದ ರೇಖಾ ಬಗ್ಗೆ ಪಕ್ಷದಲ್ಲಿ ಉತ್ತಮ ಅಭಿಪ್ರಾಯಗಳಿದ್ದವು ಎಂದಿದ್ದಾರೆ. ಮೂಲದ ಪ್ರಕಾರ, ರೇಖಾ ಕದಿರೇಶ್ ರಾಜಕೀಯವಾಗಿ ಬೆಳೆಯುವುದು ಕದಿರೇಶ್ ಕುಟುಂಬಸ್ಥರಿಗೇ ಇಷ್ಟವಿರಲಿಲ್ಲ. ಕದಿರೇಶ್ ಎರಡನೇ ಪತ್ನಿಯಾಗಿದ್ದ ರೇಖಾ ಬಗ್ಗೆ ಮೊದಲ ಪತ್ನಿಯ ಮಕ್ಕಳಿಗೆ ಮತ್ತು ಕದಿರೇಶ್ ಸೋದರಿಯರಿಗೆ ಮನಸ್ತಾಪ ಇತ್ತು.
ಪೀಟರ್ ಹತ್ತಿರದ ಸಂಬಂಧಿಕನಾಗಿದ್ದು, ಜೊತೆಗಿದ್ದವರೇ ಸೇರಿಕೊಂಡು ರೇಖಾಳನ್ನು ಮುಗಿಸಿದ್ದಾರೆ ಎನ್ನೋ ಮಾತು ಕೇಳಿಬರುತ್ತಿದೆ. ಕದಿರೇಶ್ ನನ್ನು ಕೊಲೆಗೈದ ಬಳಿಕ ಆತನ ಕೊಲೆಗೆ ಕಾರಣವಾಗಿದ್ದ ಶೋಭನ್ ಎಂಬಾತನನ್ನು ಕೊಲೆಗೈದಿದ್ದ ಪೀಟರ್ ಒಂದು ವರ್ಷ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗೆ ಬಂದು ರೇಖಾ ಜೊತೆಗೇ ಓಡಾಡಿಕೊಂಡಿದ್ದ. ತನ್ನ ತಾಯಿ ಪ್ರಾಣಕ್ಕೆ ಸಂಚಕಾರ ಇತ್ತು ಎನ್ನುವ ಬಗ್ಗೆ ಆಕೆಯ ಮಕ್ಕಳು ಕೂಡ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಕಾಲೇಜು ಓದುತ್ತಿದ್ದ ಇಬ್ಬರು ಮಕ್ಕಳು ತಂದೆಯ ಸಾವಿನ ಬಳಿಕ ಬಿಟಿಎಂ ಲೇಔಟ್ ನಲ್ಲಿ ವಾಸವಿದ್ದರು. ಆದರೆ, ಛಲವಾದಿಪಾಳ್ಯದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದ ರೇಖಾ ಅದನ್ನು ಬಿಟ್ಟು ಬಂದಿರಲಿಲ್ಲ.
BJP Former corporator Rekha Kadiresh murder in Bengalury, Police arrest criminals including her Bodygaurds Peter and Surya in just 24 hours. Two-time former BBMP councillor from BJP, Rekha Kadiresh, who had represented Chalavadipalya ward, was hacked to death outside her office in Flower Garden area under Cottonpet police limits on Thursday morning.
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm