ಬ್ರೇಕಿಂಗ್ ನ್ಯೂಸ್
30-06-21 04:15 pm Headline Karnataka News Network ಕ್ರೈಂ
Photo credits : ANI @ ANI
ಭುವನೇಶ್ವರ್, ಜೂನ್ 30: ಪೋರ್ಜರಿ ದಾಖಲೆಗಳನ್ನು ಬಳಸ್ಕೊಂಡು ಲಕ್ಷಾಂತರ ಸಿಮ್ ಕಾರ್ಡ್ ಏಕ್ಟಿವೇಟ್ ಮಾಡಿ ಕ್ರಿಮಿನಲ್ ಚಟುವಟಿಕೆಗೆ ಪೂರೈಕೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು ಖಾಸಗಿ ಟೆಲಿಕಾಂ ಕಂಪನಿಯ ಏಳು ಮಂದಿಯನ್ನು ಬಂಧಿಸಿದ್ದಾರೆ.
ಜಾಲಕ್ಕೆ ಸಂಬಂಧಿಸಿ 16,147 ಏಕ್ಟಿವ್ ಸಿಮ್ ಕಾರ್ಡ್ ಹಾಗೂ 110 ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಮಹೇಶ್ವರ್ ಬಾರಿಕ್(38), ರಜನಿಜಾಂತ ಪಾಣಿಗ್ರಹಿ(30), ಸುಬ್ರತ್ ಕುಮಾರ್ ಪಾಣಿಗ್ರಹಿ(24), ಸುಕಾಂತ ಕುಮಾರ್ ದಾಸ್ (30), ಸ್ರೀನಿಬಾಶ್ ಘಡಾಯಿ(21), ರಾಜೇಶ್ ಕುಮಾರ್ ಸೇಥಿ (29), ಮಂಗಲಮಾಯ ಮಿಶ್ರಾ (27) ಎಂದು ಗುರುತಿಸಲಾಗಿದೆ.


ಸಿಮ್ ಪಡೆಯಲು ಬರುವ ಅಸಲಿ ಗ್ರಾಹಕರದ್ದೇ ಐಡಿ ದಾಖಲೆ ಪ್ರತಿಗಳನ್ನು ಮತ್ತು ಫೋಟೊಗಳನ್ನು ಪೋರ್ಜರಿ ಮಾಡಿ ನಕಲಿಯಾಗಿ ಸಿಮ್ ಕಾರ್ಡ್ ತಯಾರಿಸುತ್ತಿದ್ದರು. ಲಕ್ಷಾಂತರ ಸಿಮ್ ಕಾರ್ಡ್ ಗಳನ್ನು ನಕಲಿ ಜಾಲದಲ್ಲಿ ಏಕ್ಟಿವೇಟ್ ಮಾಡಿ, ಅವುಗಳನ್ನು ವ್ಯವಸ್ಥಿತವಾಗಿ ಒಡಿಶಾ ಹೊರಭಾಗಕ್ಕೆ ಮಾರಾಟ ಮಾಡಲಾಗುತ್ತಿತ್ತು.
ಒಡಿಶಾ ಹೊರಭಾಗಕ್ಕೆ ಯಾವುದೇ ವಿಳಾಸ ದಾಖಲೆ ಪಡೆಯದೆ ಸಿಮ್ ಗಳನ್ನು ಮಾರಾಟ ಮಾಡುತ್ತಿದ್ದರು. ಹೀಗಾಗಿ ಸಿಮ್ ಪಡೆದವರನ್ನು ಟ್ರೇಸ್ ಮಾಡುವುದು ಸಾಧ್ಯವಿಲ್ಲ. ನಕಲಿ ಸಿಮ್ ಬಳಸಿಕೊಂಡು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.
ಈ ಗ್ಯಾಂಗ್ ಎರಡು ಲಕ್ಷಕ್ಕೂ ಹೆಚ್ಚು ನಕಲಿ ಸಿಮ್ ಗಳನ್ನು ಮಾರಾಟ ಮಾಡಿರುವ ಅಂದಾಜಿದೆ. ದೇಶದ ಭದ್ರತೆಗೆ ಇದೊಂದು ಅಪಾಯಕಾರಿ ಆಗಬಲ್ಲ ನಡೆಯಾಗಿದ್ದು ನಕಲಿ ಸಿಮ್ ಬಳಸಿ ಭದ್ರತೆಗೆ ಸವಾಲಾಗುವ ರೀತಿಯ ಅಪರಾಧ ಕೃತ್ಯಗಳನ್ನು ಎಸಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Commissioner of Police, Bhubaneswar-Cuttack, S K Priyadarsi said the pre-activated SIMs were sold outside the state.
02-01-26 04:13 pm
HK News Desk
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ಸವಾರಿ ; 70ರ...
01-01-26 03:05 pm
01-01-26 09:34 pm
HK News Desk
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
02-01-26 02:02 pm
Mangalore Correspondent
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm