ಬ್ರೇಕಿಂಗ್ ನ್ಯೂಸ್
01-07-21 12:55 pm Headline Karnataka News Network ಕ್ರೈಂ
ಚಿಕ್ಕಮಗಳೂರು, ಜುಲೈ 01: ಮೂರೇ ಮೂರು ತಿಂಗಳ ಹಿಂದೆ ಹಸೆಮಣೆ ಏರಿದ್ದವಳು ಇಂದು ಶವವಾಗಿ ಪತ್ತೆಯಾಗಿದ್ದಾಳೆ.
ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ತಮ್ಮ ಮಗಳಿಗೆ ಮದುವೆ ಮಾಡಿಸಿದ್ರು ಅದು ಪ್ರಯೋಜನವಾಗಿಲ್ಲ, ಯಾಕಂದರೆ ತನ್ನ ಗಂಡ ಇನ್ನೊಬ್ಬಳ ಒಟ್ಟಿಗೆ ಸಂಬಂಧ ಬೆಳೆಸಿಕೊಂಡಿದ್ದ. ಅದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿ ಸ್ಮಶಾನ ಸೇರಿದ್ದಾಳೆ.
ಕಟ್ಟಿಕೊಂಡ ಗಂಡನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದೇ ಆಕೆಗೆ ಜೀವಕ್ಕೆ ಮುಳುವಾಗಿದೆ. ಮನೆ ಮುಂದಿನ ನೀರಿನ ತೊಟ್ಟಿಯೇ ಜೀವಕ್ಕೆ ಉರುಳಾಗಿದೆ. ಮಗಳಿಗೆ ಯಾವುದಕ್ಕೂ ಕೊರತೆಯಾಗಬಾರದೆಂದು ಮನೆ ಮಾರಿ ಮದುವೆ ಮಾಡಿಕೊಟ್ಟಿದ್ದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಾಸನ ಜಿಲ್ಲೆ ಬೇಲೂರಿನ ಸೀಮ್ರಾನಾ ಬಾನು ಮೂರು ತಿಂಗಳ ಹಿಂದಷ್ಟೆ ಚಿಕ್ಕಮಗಳೂರಿನ ಫೈರೋಜ್ ಎಂಬುವವನ ಜೊತೆ ವಿವಾಹವಾಗಿದ್ದರು. 3 ತಿಂಗಳು ಕಳೆಯುವಷ್ಟರಲ್ಲಿ ಹೆಣವಾಗಿದ್ದಾಳೆ. ಗಂಡನ ಮನೆಯ ನೀರಿನ ಸಂಪ್‍ನಲ್ಲಿ ಸಿಮ್ರಾನ್ ಮೃತದೇಹ ಸಿಕ್ಕಿದೆ.
ಬೆಳಗ್ಗೆಯಿಂದ ಸಿಮ್ರಾನ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಗಂಡನ ಮನೆಯವರು ಮನೆಯಲ್ಲಿ ಇಲ್ಲ, ಬುರ್ಖಾನೂ ಇಲ್ಲ ಎಂದು ಹೇಳಿದ್ದಾರೆ. ಎಲ್ಲಾ ಕಡೆ ವಿಚಾರಿಸಿ ಅನುಮಾನಗೊಂಡು ಸಿಮ್ರಾನ್ ಗಂಡನ ಮನೆ ಬಳಿ ಹುಡುಕುತ್ತಿದ್ದಾಗ ಸಂಪ್ ಒಳಗೆ ಮೃತದೇಹ ಇರುವುದು ಪತ್ತೆಯಾಗಿದೆ.
ಆಕೆಯ ಶವವನ್ನು ನೋಡಿದ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ಬಳಿಯೇ ಆಕೆಯ ಶವ ಸಿಗುತ್ತಿದ್ದಂತೆ ಸಿಮ್ರಾನ್ ಪತಿ ಫೈರೋಜ್ ಹಾಗೂ ಅವರ ಮನೆಯವರು ಪೇಚಿಗೆ ಸಿಲುಕಿದ್ದಾರೆ. ಸಂಪ್ ಒಳಗೆ ಗೃಹಿಣಿಯ ಮೃತದೇಹ ಸಿಕ್ಕುತ್ತಿದ್ದಂತೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಫೈರೋಜ್ ಹಾಗೂ ಆತನ ತಾಯಿ, ತಂದೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಅಸಲಿ ಬುದ್ಧಿ ತೋರಿಸಿದ್ದ ಫೈರೋಜ್. ಕೊಟ್ಟಿರೋ ದುಡ್ಡು, ಚಿನ್ನ ಸಾಕಾಗಿಲ್ಲ ಇನ್ನೂ ಬೇಕು ಅಂತ ಪೀಡಿಸುತ್ತಿದ್ದನಂತೆ. ಅಲ್ಲದೇ ಬೇರೆ ಹುಡುಗಿಯರ ಜೊತೆ ಸಂಬಂಧ ಕೂಡ ಇಟ್ಟುಕೊಂಡಿದ್ದ.
ಇದನ್ನ ಪ್ರಶ್ನೆ ಮಾಡಿದ್ದ ಪತ್ನಿ ಜೊತೆ ಗಲಾಟೆ ಮಾಡಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಇತ್ತೀಚಿಗೆ ಮನೆಗೆ ಬರೋದು ತಡವಾಗುತ್ತಿದ್ದಿದ್ದನ್ನು ಪ್ರಶ್ನೆ ಮಾಡಿದ್ದ ಪತ್ನಿ ಸಿಮ್ರಾನ್‌ಳನ್ನ ಪತಿ ಫೈರೋಜ್, ಅತ್ತೆ, ಮಾವ, ನಾದಿನಿ ಎಲ್ಲಾ ಸೇರಿ ಕೊಲೆ ಮಾಡಿದ್ದಾರೆ ಅಂತಾ ಮೃತ ಸಿಮ್ರಾನ್ ಸಂಬಂಧಿಕರು ಆರೋಪಿಸಿದ್ದಾರೆ.
ಒಟ್ಟಾರೆ, ಇದ್ದ ಮನೆಯನ್ನು ಮಾರಿ ಮಗಳ ಮದುವೆ ಮಾಡಿದ್ದ ಪೋಷಕರು ಈಗ ಕಣ್ಣೀರು ಹಾಕುತ್ತಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡು 22ನೇ ವರ್ಷಕ್ಕೆ ಸಿಮ್ರಾನ್ ಕಾಲಿಟ್ಟಿದ್ದಳು. ನಗು ನಗುತ್ತಾ ಗಂಡನ ಮನೆಯಲ್ಲಿ ಇರಬೇಕಾದ ಗೃಹಿಣಿ ಸಾವನ್ನಪ್ಪಿದ್ದಾಳೆ.
Chikmagalur's Wife found dead in water Sump after questioning her Husband's illicit affair. The couple had married just there months ago. The deceased has been identified as Simran Banu.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm