ಬ್ರೇಕಿಂಗ್ ನ್ಯೂಸ್
02-07-21 03:01 pm Mangalore Correspondent ಕ್ರೈಂ
ಉಳ್ಳಾಲ, ಜು.2: ಇಲ್ಲಿನ ಮುಕ್ಕಚ್ಚೇರಿಯಲ್ಲಿ ರಸ್ತೆ ಬದಿ ನಿಂತಿದ್ದ ಆಂಬುಲೆನ್ಸ್ ಟಿಟಿ ವಾಹನದ ಗಾಜನ್ನು ಒಡೆದ ಕಿಡಿಗೇಡಿಗಳು ಸೈರನ್ ಆಂಪ್ ಮತ್ತು ಆಡಿಯೋ ಸ್ಟಿರಿಯೋವನ್ನು ದೋಚಿದ ಘಟನೆ ನಡೆದಿದೆ.
ಗಂಗಾಧರ್ ಎಂಬವರಿಗೆ ಸೇರಿದ ಶ್ರೀ ಗಣೇಶ್ ಹೆಸರಿನ ಆಂಬುಲೆನ್ಸಿನ ಗಾಜನ್ನ ಕಿಡಿಗೇಡಿಗಳು ಪುಡಿಗೈದಿದ್ದಾರೆ. ಆಂಬುಲೆನ್ಸ್ ಚಾಲಕ ಮುಕ್ಕಚ್ಚೇರಿ ನಿವಾಸಿಯಾಗಿದ್ದು ನಿನ್ನೆ ರಾತ್ರಿ ರಸ್ತೆ ಬದಿಯಲ್ಲಿ ಟಿ.ಟಿ ವಾಹನವನ್ನ ನಿಲ್ಲಿಸಿದ್ದರು. ಇಂದು ಬೆಳಗ್ಗೆ ಕರ್ತವ್ಯಕ್ಕೆ ತೆರಳಲು ಚಾಲಕ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಕಿಡಿಗೇಡಿಗಳು ಆಂಬುಲೆನ್ಸ್ ನ ಗ್ಲಾಸ್ ಒಡೆದು ಒಳನುಗ್ಗಿ ಸೈರನ್ ಆಗುವ ಬೆಲೆ ಬಾಳುವ ಆಂಪ್ಲಿಫಯರ್ ಮತ್ತು ಆಡಿಯೋ ಸ್ಟಿರಿಯೋವನ್ನ ದೋಚಿದ್ದಾರೆ.
ಅಲ್ಲದೆ ಒಳಗಿದ್ದ ಕೆಲ ಸರ್ಜಿಕಲ್ ಪರಿಕರಗಳನ್ನ ರಸ್ತೆಗೆಸೆದು ವಿಕೃತಿ ಮೆರೆದಿದ್ದಾರೆ. ಗಂಗಾಧರ್ ಅವರು ತನ್ನ ಆಂಬುಲೆನ್ಸ್ ಗಳ ಮುಖೇನ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಇಂತಹ ವ್ಯಕ್ತಿಯ ವಾಹನವನ್ನೇ ಪುಡಿಗಟ್ಟಿದ ಕಿಡಿಗೇಡಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತಂತೆ ಗಂಗಾಧರ್ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Video:
ಉಳ್ಳಾಲ: ರಸ್ತೆ ಬದಿ ನಿಂತಿದ್ದ ಆಂಬುಲೆನ್ಸ್ ಒಡೆದು ಸೈರನ್ ಪರಿಕರ ದೋಚಿದ ಕಿಡಿಗೇಡಿಗಳು
Posted by Headline Karnataka on Friday, July 2, 2021
Ullal Miscrensts damage Ambulance and steal PPA Kit and also a siren. A video of the driver alleging about Public safety has gone viral on Social Media.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm