ಬ್ರೇಕಿಂಗ್ ನ್ಯೂಸ್
04-07-21 05:20 pm Mangaluru Correspondent ಕ್ರೈಂ
ಮಂಗಳೂರು, ಜುಲೈ 4: ಯುವಕನೊಬ್ಬ ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿ, ಲಕ್ಷಾಂತರ ರೂಪಾಯಿ ಕಳಕೊಂಡ ಘಟನೆ ನಡೆದಿದ್ದು ಆರೋಪಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಚೀಚಗದ್ದೆ ಇಬ್ರಾಹಿಂ ಎಂಬವರ ಪುತ್ರ ಅಬ್ದುಲ್ ನಾಸೀರ್ ಹೈಟೆಕ್ ಹನಿಟ್ರ್ಯಾಪ್‌ಗೆ ಒಳಗಾದ ಯುವಕ. ಅಬ್ದುಲ್ ನಾಸೀರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಕಳ ಮೂಲದ ತನಿಶಾ ಎಂಬಾಕೆಯ ಪರಿಚಯವಾಗಿತ್ತು.
ಪರಿಚಯವಾದ ಕೆಲವೇ ದಿನಗಳಲ್ಲಿ ಅಬ್ದುಲ್ ನಾಸೀರ್ ಯುವತಿಯ ಬಲೆಗೆ ಬಿದ್ದಿದ್ದಾನೆ. ಪ್ರೀತಿ, ಪ್ರೇಮದ ನೆಪದಲ್ಲಿ ಅರೆನಗ್ನ ಸ್ಥಿತಿಯ ವಿಡಿಯೋಗಳನ್ನು ಕಳಿಸಲು ಕೋರಿದ್ದಳು. ವಿಡಿಯೋ ಕಾಲ್ ಮೂಲಕ ಅರೆನಗ್ನವಾಗುತ್ತಿದ್ದ ಅಬ್ದುಲ್ ನಾಸೀರ್ ವಿಡಿಯೋಗಳನ್ನು ಸ್ಕ್ರೀನ್ ರೆಕಾರ್ಡರ್ ಮೂಲಕ ತನಿಶಾ ದಾಖಲಿಸಿಕೊಂಡಿದ್ದು, ಆನಂತರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. 30 ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದಳು.
ದಿನ ಕಳೆಯುತ್ತಿದ್ದಂತೆ ಯುವತಿ ಮತ್ತು ಆಕೆಯ ಸಹಚರರು ಸೇರಿ ಬೆದರಿಕೆ ಹಾಕಿದ್ದಾರೆ. ಕೊನೆಗೆ ಯುವಕ ಅಬ್ದುಲ್ ನಾಸೀರ್ ಪುತ್ತೂರು ಗ್ರಾಮಾಂತರ ಠಾಣೆಯ ಮೆಟ್ಟಿಲೇರಿದ್ದಾನೆ. ಪುತ್ತೂರು ಪೊಲೀಸರು ತನಿಶಾಳನ್ನು ಬಂಧಿಸಿದ್ದು, ಆಕೆಯ ಆರು ಮಂದಿ ಸಹಚರರಿಗಾಗಿ ಹುಡುಕಾಟ ನಡೆಸಿದ್ದಾರೆ.
ನೆಟ್ಟಣಿಗೆ ಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮಹಮ್ಮದ್ ಕುಂಞ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, ಸಯಿದ್ ಮೋನು ಮತ್ತು ನಾಸೀರ್ ಎಂಬವರು ಆರೋಪಿಗಳೆಂದು ದೂರಿನಲ್ಲಿ ಹೇಳಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಏಪ್ರಿಲ್ 12ರ ಬಳಿಕ ಈ ರೀತಿ ಪೀಡಿಸುವ ಕಾರ್ಯ ನಡೆದಿದ್ದು, ಯುವಕ ನಾಸೀರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾನೆ. ಬಳಿಕ ಅಧಿಕಾರಿಗಳ ಸೂಚನೆಯಂತೆ ನಾಸೀರ್, ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
A youth from Nettanige Mudnoor of the taluk here has filed a complaint with the police against seven people accusing them of fleecing lacs of rupees from him through honey-trapping. Police have arrested a woman in this connection. The 25-year-old complainant, a resident Cheechagadde of Nettanige Mudnur village has filed a complaint with police that he lost Rs 30 lac due to honey-trap. The complainant is a salesman by profession.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am