ಬ್ರೇಕಿಂಗ್ ನ್ಯೂಸ್
11-07-21 10:40 pm Headline Karnataka News Network ಕ್ರೈಂ
ನವದೆಹಲಿ, ಜುಲೈ 11: ದಂಪತಿಯ ಜಗಳದಿಂದ 11 ತಿಂಗಳ ಹಸುಗೂಸೊಂದು ಪ್ರಾಣ ಕಳೆದುಕೊಂಡಿದೆ. ದಕ್ಷಿಣ ದೆಹಲಿಯಲ್ಲಿ ತನ್ನ ಗಂಡನ ಜೊತೆ ಜಗಳವಾಡಿಕೊಂಡ ಮಹಿಳೆಯೊಬ್ಬಳು ಕೋಪದಿಂದ ತನ್ನ ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ.
ದೆಹಲಿಯ ಬಳಿ ಇರುವ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಮಗುವನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು. ಮಗುವಿನ ಸಾವಿಗೆ ನೀನೇ ಕಾರಣ ಎಂದು ಆಸ್ಪತ್ರೆಯ ಎದುರಲ್ಲೇ ತಂದೆ-ತಾಯಿಯಿಬ್ಬರೂ ಜಗಳವಾಡಿ, ಹೊಡೆದಾಡಿಕೊಂಡ ಘಟನೆಯೂ ನಡೆದಿದೆ.
ಏನಿದು ಘಟನೆ? ;
ಈ ದಂಪತಿಯ 11 ತಿಂಗಳ ಗಂಡು ಮಗುವಿಗೆ ಬಹಳ ಜ್ವರವಿತ್ತು. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಮಗುವಿನ ತಾಯಿ ತನ್ನ ಗಂಡನಿಗೆ ಹೇಳಿದ್ದಳು. ಆದರೆ, ಆತ ತನ್ನ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಹೆಂಡತಿಯೊಂದಿಗೆ ಜಗಳವಾಡಿದ್ದ. ಅವರಿಬ್ಬರ ಜಗಳದ ನಡುವೆ ಮಗುವಿನ ಅನಾರೋಗ್ಯದ ವಿಚಾರವನ್ನೇ ಮರೆತು ಇಬ್ಬರೂ ಕಿತ್ತಾಡಿದ್ದಾರೆ. ಗಂಡನ ಮೇಲಿನ ಕೋಪವನ್ನು ಮಗುವಿನ ಮೇಲೆ ತೋರಿಸಿದ ಆಕೆ ನೀನು ನನ್ನ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ದರೆ ನಾನೇ ಕೊಂದು ಹಾಕುತ್ತೇನೆ ಎಂದು ಮಗುವಿನ ಕುತ್ತಿಗೆಯನ್ನು ತನ್ನ ದುಪ್ಪಟ್ಟಾದಿಂದ ಸುತ್ತಿದ್ದಾಳೆ. ಹೀಗಾಗಿ, ಉಸಿರಾಟದ ತೊಂದರೆಯಿಂದ ಮಗು ಪ್ರಾಣ ಬಿಟ್ಟಿದೆ.
ಮಗುವಿನ ತಾಯಿ 26 ವರ್ಷದ ಜ್ಯೋತಿ ಹಾಗೂ ಆಕೆಯ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರೆದುರು ತಪ್ಪೊಪ್ಪಿಕೊಂಡಿರುವ ಜ್ಯೋತಿ, ನನ್ನ ಗಂಡನಿಗೆ ನನ್ನ ಮೇಲೆ ಪ್ರೀತಿ ಇರಲಿಲ್ಲ. ದಿನವೂ ಮನೆಗೆ ಬಂದು ಜಗಳವಾಡುತ್ತಿದ್ದ. ನನ್ನ ಮಗುವನ್ನೂ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ಜ್ಯೋತಿ ಆರೋಪಿಸಿದ್ದಾಳೆ.
ಇನ್ನು, ಜ್ಯೋತಿಯ ತಂದೆ-ತಾಯಿ ಆ ಮಗುವನ್ನು ಜ್ಯೋತಿಯ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಮೃತ ಮಗುವಿನ ತಂದೆ ಅಲ್ಲಗಳೆದಿದ್ದಾನೆ. ಆ ಗ್ರಾಮದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
A woman in Delhi allegedly strangled her 11-month-old infant after a fight with her husband, the police said. According to South Delhi Deputy Commissioner Atul Thakur, when police reached the crime scene at Fatehpur Beri area, the infant had already died at a hospital. When questioned, the child's parent accused each other of the murder. However, investigation revealed the boy's mother had strangled him with her stole.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am