ಬ್ರೇಕಿಂಗ್ ನ್ಯೂಸ್
13-07-21 11:33 am Udupi Correspondent ಕ್ರೈಂ
ಉಡುಪಿ, ಜುಲೈ 13: ಅಪಾರ್ಟ್ಮೆಂಟ್ ಮನೆಯಲ್ಲಿ ನೆಲೆಸಿದ್ದ ಮಹಿಳೆಯೊಬ್ಬರನ್ನು ಕುತ್ತಿಗೆ ಬಿಗಿದು ಕೊಲೆಗೈದ ಘಟನೆ ಬ್ರಹ್ಮಾವರದಲ್ಲಿ ನಡೆದಿದ್ದು ಹಣ ಮತ್ತು ಚಿನ್ನಕ್ಕಾಗಿ ಕೊಲೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಕೊಲೆಯಾದ ಮಹಿಳೆ ಗಂಗೊಳ್ಳಿಯ ನಾಯಕವಾಡಿ ಜನತಾ ಕಾಲನಿ ನಿವಾಸಿ ವಿಶಾಲ ಗಾಣಿಗ(35) ಎಂಬವರಾಗಿದ್ದು ಕುತ್ತಿಗೆಗೆ ವಯರ್ ಬಿಗಿದು ಕೊಲೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಕೊಲೆಯಾದ ಮಹಿಳೆ ಕೆಲವು ದಿನಗಳ ಹಿಂದೆಯಷ್ಟೆ ವಿದೇಶದಿಂದ ಆಗಮಿಸಿದ್ದರು ಎನ್ನಲಾಗಿದೆ.
ಪತಿ ರಾಮಕೃಷ್ಣ ಜತೆ ವಿದೇಶದಲ್ಲಿದ್ದ ವಿಶಾಲಾ ಅವರು, 10 ದಿನಗಳ ಹಿಂದಷ್ಟೇ ಮಗು ಜತೆ ಊರಿಗೆ ಬಂದಿದ್ದರು. ದಂಪತಿ ಉಪ್ಪಿನಕೋಟೆಯ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಹೊಂದಿದ್ದು, ಊರಿಗೆ ಬಂದಾಗ ಇಲ್ಲಿರುತ್ತಿದ್ದರು. ಈ ಬಾರಿ ತಂದೆ- ತಾಯಿ ಜತೆ ವಿಶಾಲಾ ಫ್ಲ್ಯಾಟ್‌ನಲ್ಲಿ ಇದ್ದರು. ಸೋಮವಾರ ಮಧ್ಯಾಹ್ನ ವಿಶಾಲಾ ತಂದೆ, ತಾಯಿ ಹಾಗೂ ಮಗು ಜತೆ ರಿಕ್ಷಾದಲ್ಲಿ ನಾಯಕವಾಡಿಯ ಮನೆಗೆ ತೆರಳಿದ್ದರು. ನಂತರ ಬ್ಯಾಂಕ್‌ನಲ್ಲಿ ಕೆಲಸವಿದೆ ಎಂದು ಮಹಿಳೆ ಒಬ್ಬರೇ ಹಿಂತಿರುಗಿದ್ದರು. ಸಾಯಂಕಾಲ 3 ಗಂಟೆಯಾದರೂ ಮಗಳು ಹಿಂದಿರುಗದ ಕಾರಣ, ತಂದೆ ಫ್ಲ್ಯಾಟ್‌ಗೆ ತೆರಳಿ ನೋಡಿದಾಗ ಬೀಗ ಹಾಕಿದ್ದು ಕಂಡುಬಂದಿದೆ. ಬಳಿಕ ಬೇರೊಂದು ಕೀಯಿಂದ ಬೀಗ ತೆರೆದು ನೋಡಿದಾಗ ವಿಶಾಲಾ ಬೆಡ್ ರೂಮಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
'
ಕೂಡಲೇ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಹೆತ್ತವರ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ. ಅವರಿಗೆ ಬೇರಾವುದೇ ಮಾಹಿತಿ ಇರಲಿಲ್ಲ. ಆಟೋದಲ್ಲಿ ಮನೆಗೆ ಹಿಂತಿರುಗಿ ಬಂದಿದ್ದಳು ಎನ್ನೋ ವಿಚಾರವನ್ನು ತಿಳಿಸಿದ್ದರು. ಅದರಂತೆ, ಆಕೆ ಪ್ರಯಾಣಿಸಿದ್ದ ಆಟೋರಿಕ್ಷಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿದೇಶದಲ್ಲಿ ನೆಲೆಸಿದ್ದ ಮಹಿಳೆಯ ಬಳಿ ಸಾಕಷ್ಟು ಹಣ ಮತ್ತು ಚಿನ್ನ ಇರಬಹುದೆಂದು ಆಟೋ ಚಾಲಕನೇ ಕೃತ್ಯ ಎಸಗಿದ್ದಾನೆಯೇ, ಬೇರಾವುದೇ ಕೈವಾಡ ಇರಬಹುದೇ ಎನ್ನುವ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Video:
35-year-old woman found murdered in her apartment at Brahmavar in Udupi. The deceased has been identified as Vishala Ganiga (35). As per primary sources, although the killing happened on Sunday, the news broke out on Monday.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 04:57 pm
Mangaluru Correspondent
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm