ಬ್ರೇಕಿಂಗ್ ನ್ಯೂಸ್
14-07-21 09:45 pm Mangaluru Correspondent ಕ್ರೈಂ
ಮಂಗಳೂರು, ಜುಲೈ 14: ಉರ್ವಾ ಠಾಣೆಗೆ ಬಂದಿದ್ದ ವ್ಯಕ್ತಿಗಳಿಬ್ಬರು ಪೊಲೀಸರ ಜೊತೆ ದುರ್ನಡತೆ ತೋರಿದ ಘಟನೆ ನಡೆದಿದ್ದು ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ನೋಯಲ್ ಸಿಕ್ವೇರಾ ಮತ್ತು ಜೊಹಾನ್ ಸಿಕ್ವೇರಾ ಬಂಧಿತರು. ನೋಯಲ್ ಸಿಕ್ವೇರಾ ಉರ್ವಾ ಸ್ಟೋರ್ ಬಳಿಯ ಚಿಲಿಂಬಿ ನಿವಾಸಿಯಾಗಿದ್ದು ಕಳೆದ ಮೇ ತಿಂಗಳಲ್ಲಿ ತನ್ನ ಅಪಾರ್ಟ್ಮೆಂಟ್ ವಿಚಾರದಲ್ಲಿ ಪೊಲೀಸ್ ದೂರು ನೀಡಿದ್ದರು. ಅಪಾರ್ಟ್ಮೆಂಟ್ ಅಸೋಸಿಯೇಷನ್ ಕಡೆಯಿಂದ ನೀರು ಕಡಿತ ಮಾಡಿದ ವಿಚಾರದಲ್ಲಿ ಜಟಾಪಟಿ ನಡೆದು ಬಳಿಕ ಎರಡೂ ಕಡೆಯಿಂದ ದೂರು - ಪ್ರತಿದೂರು ಸಲ್ಲಿಕೆ ಆಗಿತ್ತು.


ಇದೀಗ ಎರಡು ತಿಂಗಳ ನಂತರ ಅಪಾರ್ಟ್ಮೆಂಟ್ ಜಟಾಪಟಿ ವಿಚಾರ ಇತ್ಯರ್ಥ ಆಗಿದೆ ಎನ್ನಲಾಗುತ್ತಿದ್ದು ಇಂದು ನೋಯಲ್ ಸಿಕ್ವೇರಾ ಉರ್ವಾ ಠಾಣೆಗೆ ದೂರು ಹಿಂಪಡೆಯುವುದಕ್ಕಾಗಿ ತೆರಳಿದ್ದರು. ಈ ವೇಳೆ, ಸಾಮಾಜಿಕ ಕಾರ್ಯಕರ್ತನೆಂದು ಗುರುತಿಸ್ಕೊಂಡಿರುವ ಜೊಹಾನ್ ಸಿಕ್ವೇರಾ ಕೂಡ ನೋಯಲ್ ಜೊತೆಗೆ ಠಾಣೆಗೆ ತೆರಳಿದ್ದರು ಎನ್ನಲಾಗಿದೆ. ಠಾಣೆಯಲ್ಲಿ ಇದೇ ವಿಚಾರದಲ್ಲಿ ಮಾತುಕತೆ ನಡೆದಿದ್ದು ಜೊಹಾನ್ ಸಿಕ್ವೇರಾ ಪೊಲೀಸರ ಜೊತೆ ಮಾತನಾಡುತ್ತಿದ್ದ ವೇಳೆ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಮೊಬೈಲ್ ಕಿತ್ತುಕೊಂಡಿದ್ದಾರೆ.
ಈ ವೇಳೆ,ಜೊಹಾನ್ ಸಿಕ್ವೇರಾ ಮತ್ತು ಪೊಲೀಸರ ನಡುವೆ ತಳ್ಳಾಟ ನಡೆದಿದೆ. ಪೊಲೀಸರು ಹೇಳುವ ಪ್ರಕಾರ, ಜಾನ್ ಮತ್ತು ನೋಯಲ್ ಇಬ್ಬರೂ ಅಲ್ಲಿನ ಸಿಬಂದಿ ಜೊತೆ ದುರ್ನಡತೆ ತೋರಿದ್ದಾರೆ. ಈ ವೇಳೆ ಒಬ್ಬರು ಮಹಿಳಾ ಸಿಬಂದಿ ಪೂಜಾ ಹಿರೇಮಠ ಮತ್ತು ಇನ್ನೊಬ್ಬ ಹೆಡ್ ಕಾನ್ಸ್ ಟೇಬಲ್ ನಾರಾಯಣ ಎಂಬವರಿಗೆ ಗಾಯಗಳಾಗಿದ್ದು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂಧಿಸಿ ಪೊಲೀಸರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದು ನೋಯಲ್ ಮತ್ತು ಜೊಹಾನ್ ಸಿಕ್ವೇರಾನನ್ನು ಬಂಧಿಸಿದ್ದಾರೆ. ಹೀಗಾಗಿ ಕೇಸು ಹಿಂಪಡೆಯಲು ಹೋದವರು ಜೈಲು ಸೇರುವಂತಾಗಿದೆ.
Two including activist Johan Sequeira taken to custody for assault on two police constables at Urwa Police Station. Narayana and Pooja have been admitted to Wenlock hospital in Mangalore.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am