ಬ್ರೇಕಿಂಗ್ ನ್ಯೂಸ್
16-07-21 09:47 am Mangalore Correspondent ಕ್ರೈಂ
ಮಂಗಳೂರು, ಜುಲೈ 15: ಬ್ಲಿಸ್ ಸಿಗ್ನೇಚರ್ ಯುನಿಸೆಕ್ಸ್ ಸೆಲೂನಲ್ಲಿ ಮಹಿಳೆಗೆ ಕಿರುಕುಳ ನೀಡಿ, ಪೊಲೀಸರಿಂದ ಬಂಧನಕ್ಕೊಳಗಾಗಿದ್ದು ಗೊತ್ತು. ಅದಕ್ಕೆ ಪೂರಕವಾಗಿ, ಗುರುವಾರದಂದು ಪೊಲೀಸರು ಸಿಸಿಟಿವಿಯನ್ನೂ ರಿಲೀಸ್ ಮಾಡಿ, ಬಂಧನ ಕ್ರಮವನ್ನೂ ಸಮರ್ಥಿಸಿಕೊಂಡಿದ್ದಾರೆ. ಇಷ್ಟಕ್ಕೂ ಬಂಧನ ಆಗಿದ್ದ ವ್ಯಕ್ತಿಯೇ ಬ್ಲಿಸ್ ಸಿಗ್ನೇಚರ್ ಸೆಲೂನ್ ಮಾಲೀಕ ಅಂದರೆ ಹೆಚ್ಚಿನ ಮಂದಿಗೆ ನಂಬಿಕೆ ಬರಲಿಕ್ಕಿಲ್ಲ.
ಹೌದು.. ಕದ್ರಿಯ ಬ್ಲಿಸ್ ಸಿಗ್ನೇಚರ್ ಯುನಿಸೆಕ್ಸ್ ಸೆಲೂನಲ್ಲಿ ಮಹಿಳೆಯ ಮೇಲೆ ಕೈಮಾಡಿ, ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿರುವ ಅತ್ತಾವರ ನಿವಾಸಿ ಅಬ್ದುಲ್ ದಾವೂದ್ ಸ್ವತಃ ಅದೇ ಸೆಲೂನ್ ಮಾಲೀಕ. ದಾವೂದ್ ಕದ್ರಿ ಮತ್ತು ಬೆಂದೂರು ವೆಲ್ ನಲ್ಲಿ ಪ್ರತ್ಯೇಕ ಸ್ಪಾ ಸೆಲೂನ್ ಹೊಂದಿದ್ದಾರೆ. ಕದ್ರಿಯ ಬ್ಲಿಸ್ ಸಿಗ್ನೇಚರ್ ಶಾಪ್ ಅನ್ನು ಕ್ರಿಸ್ತಿಯನ್ ಒಬ್ಬರ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದರೆ, ಬೆಂದೂರುವೆಲ್ ಶಾಪ್ ಅನ್ನು ಪಂಜಾಬ್ ಮೂಲದ ವ್ಯಕ್ತಿಯೊಬ್ಬರ ಪಾಲುದಾರಿಕೆಯಲ್ಲಿ ದಾವೂದ್ ನಡೆಸುತ್ತಿದ್ದರು. ಏಳೆಂಟು ವರ್ಷಗಳಿಂದ ಎರಡು ಕಡೆಯೂ ಸೆಲೂನ್ ಯಶಸ್ವಿಯಾಗಿ ನಡೆದುಬಂದಿತ್ತು.
ಆದರೆ, ಈ ಮಧ್ಯೆ ಕದ್ರಿಯ ಸಿಗ್ನೇಚರ್ ಶಾಪ್ ನಲ್ಲಿ ಸಹ ಪಾಲುದಾರನಾಗಿದ್ದ ಕ್ರಿಸ್ತಿಯನ್ ವ್ಯಕ್ತಿಗೂ ಆತನ ಪತ್ನಿಗೂ ಇತ್ತೀಚೆಗೆ ವೈಮನಸ್ಸು ಉಂಟಾಗಿ ವಿಚ್ಚೇದನ ಆಗಿತ್ತು. ಇಲ್ಲಿ ವರೆಗೂ ಶಾಪ್ ನಲ್ಲಿ ಮ್ಯಾನೇಜರ್ ಆಗಿರುತ್ತಿದ್ದ ಆ ವ್ಯಕ್ತಿಯ ಪತ್ನಿ ಜುಲೈ 1ರ ಬಳಿಕ ಶಾಪ್ ಗೆ ಬರದಂತೆ ಕೋರ್ಟಿನಿಂದ ಆರ್ಡರ್ ಆಗಿತ್ತು. ಈ ವಿಚಾರ ಗೆಳೆಯರಾಗಿರುವ ಇಬ್ಬರು ಪಾಲುದಾರರಿಗೂ ಗೊತ್ತಿದ್ದು ಸ್ನೇಹಿತರಾಗಿದ್ದ ಅವರಿಬ್ಬರು ಇದನ್ನು ಮಾತಾಡಿಕೊಂಡಿದ್ದರು. ಆದರೆ ಅಲ್ಲೀ ವರೆಗೂ ಅದೇ ಶಾಪಲ್ಲಿ ಮ್ಯಾನೇಜರ್ ಕಂ ಓನರ್ ಆಗಿದ್ದ ಮಹಿಳೆ ಜುಲೈ ಒಂದರ ಬಳಿಕ ಎಂಟ್ರಿ ಆಗುವಂತಿರಲಿಲ್ಲ. ವಿಷ್ಯ ಹೀಗಿರ್ಬೇಕಾದರೆ, ಆ ಮಹಿಳೆ ಜುಲೈ ಒಂದರಂದು ಕಚೇರಿಗೆ ಬಂದಿದ್ದು ತಾನು ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಫೈಲ್ ತೆಗೆದಿಡುತ್ತಿದ್ದರು. ಆದರೆ, ಈ ಬಗ್ಗೆ ಮೊದಲೇ ಗೆಳೆಯನಿಂದ ಸೂಚನೆ ಪಡೆದಿದ್ದ ಅಬ್ದುಲ್ ದಾವೂದ್ ಕಚೇರಿಗೆ ಬಂದಾಗ ಮಹಿಳೆ ಇರುವುದನ್ನು ಕಂಡು ಜಟಾಪಟಿ ನಡೆಸಿದ್ದಾರೆ.
ಯಾವುದೋ ಫೈಲ್ ತೆಗೆದಿಡುತ್ತಿದ್ದನ್ನು ಆಕ್ಷೇಪಿಸಿ, ಇಬ್ಬರೂ ಎಳೆದಾಡಿದ್ದು ಅಬ್ದುಲ್ ದಾವೂದ್ ಮಹಿಳೆಯನ್ನು ದೂಡಿ ಹಾಕಿ, ಆಕೆಯ ಕೈಯಿಂದ ಅದನ್ನು ಕಿತ್ತುಕೊಂಡು ಹೋಗಿದ್ದರು. ಅಬ್ದುಲ್ ದಾವೂದ್ ಮಹಿಳೆಯ ಮೇಲೆ ಕೈಮಾಡಿ, ಕಿತ್ತುಕೊಂಡ ಘಟನೆ ಅಲ್ಲಿಯೇ ರಿಸೆಪ್ಶನ್ ಮೇಲ್ಗಡೆ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಮೊದಲೇ ಗಂಡನ ಮೇಲೆ ಕೋಪದಲ್ಲಿದ್ದ ಮಹಿಳೆ ಅದೇ ನೆಪದಲ್ಲಿ ಅಬ್ದುಲ್ ದಾವೂದ್ ವಿರುದ್ಧ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಸಿಸಿಟಿವಿ ಮತ್ತು ಮಹಿಳೆಯ ದೂರು ಆಧರಿಸಿ ಅಬ್ದುಲ್ ದಾವೂದ್ ಮೇಲೆ ಕೇಸು ದಾಖಲಿಸಿ ಬಂಧಿಸಿದ್ದಾರೆ. ಇದೇ ಕಾರಣಕ್ಕೆ ಅಬ್ದುಲ್ ದಾವೂದ್ ಬಂಧನದ ಬಗ್ಗೆ ಆಕ್ಷೇಪವೂ ವ್ಯಕ್ತವಾಗಿತ್ತು. ಆದರೆ ಪೊಲೀಸರು ತಾವು ದೂರು ಆಧರಿಸಿ, ಸಿಸಿಟಿವಿ ಮುಂದಿಟ್ಟು ಕ್ರಮ ಜರುಗಿಸಿದ್ದೇವೆ ಎಂದು ಹೇಳಿದ್ದರು.
ಆರೋಪಿ ವಿರುದ್ಧ ಮಹಿಳೆಯ ಮೇಲೆ ಕಿರುಕುಳ, ಹಲ್ಲೆ ಮತ್ತು 14 ಸಾವಿರ ರೂ. ನಗದು ದರೋಡೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಜುಲೈ 1 ರಂದು ಘಟನೆ ನಡೆದಿದ್ದರೂ, ಮಹಿಳೆ ಕೆಲವು ದಿನಗಳ ಬಳಿಕ ದೂರು ನೀಡಿದ್ದರು. ತನ್ನದೇ ಶಾಪ್ ನಲ್ಲಿ ಕ್ಷಣ ಕಾಲದಲ್ಲಿ ನಡೆದುಹೋದ ಅನುಚಿತ ವರ್ತನೆ ಮಾಲೀಕನನ್ನೇ ಜೈಲು ಕಂಬಿ ಎಣಿಸುವಂತೆ ಮಾಡಿದೆ.
Video:
Bliss Signature Saloon owner Abdul Dawood alleged of Molesting and Assault on women at Kadri arrested. According to Police Abdul Dawood has been arrested for alleged Molesting, Assault, and Robbery of Rs 14,000 from a lady in Kadri, Mangaluru, which happened on 1 July 2021 at Bliss Signature Unisex Saloon, located near Mallikatta Ground, Kadri, Mangaluru. The Divorce of the partner of Bliss Eliaz turned to all this fight reports family.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 02:44 pm
Mangalore Correspondent
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
Naxal Vikram Gowda, Murdeshwar, Mangalore: ಪೊ...
24-11-24 03:21 pm
Mangalore, Someshwara Suicide; ಸೋಮೇಶ್ವರ ರುದ್ರ...
24-11-24 01:18 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm