ಬ್ರೇಕಿಂಗ್ ನ್ಯೂಸ್
17-07-21 11:26 am Udupi Correspondent ಕ್ರೈಂ
ಉಡುಪಿ, ಜುಲೈ 16: ವಿಶಾಲ ಗಾಣಿಗ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಘಟನೆ ಸಂಬಂಧಿಸಿ ಹತ್ತಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಎಸ್ಪಿ ವಿಷ್ಣುವರ್ಧನ್, ಈಗಾಗ್ಲೇ ನಾಲ್ಕು ಪೊಲೀಸ್ ತಂಡಗಳು ಈ ಬಗ್ಗೆ ತನಿಖಾ ಕಾರ್ಯ ನಡೆಸುತ್ತಿದ್ದಾರೆ. ಕೊಲೆಯ ಸುಳಿವು ಸಿಕ್ಕಿದ್ದು ನೈಜ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದೇವೆ. ಒಂದೆರಡು ದಿನದಲ್ಲಿ ಅಪರಾಧಿಗಳ ಪತ್ತೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಬ್ರಹ್ಮಾವರದ ಉಪ್ಪಿನಕೋಟೆಯ ಫ್ಲಾಟ್ ನಲ್ಲಿ ಜುಲೈ 12 ರಂದು ವಿಶಾಲಾ ಗಾಣಿಗ ಕೊಲೆಯಾಗಿದ್ದರು. ಕೊಲೆ ಕೃತ್ಯ ಭಾರೀ ಸಂಚಲನ ಎಬ್ಬಿಸಿದ್ದು ಯಾರು, ಯಾಕಾಗಿ ಕೃತ್ಯ ಎಸಗಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಫ್ಲಾಟ್ ಸುಪರ್ ವೈಸರ್, ಆಟೋ ಚಾಲಕ ಸೇರಿದಂತೆ ಹಲವರನ್ನು ಪೊಲೀಸರು ಅಂದೇ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಸೂಕ್ತ ಸುಳಿವು ಲಭಿಸಿರಲಿಲ್ಲ. ಕರೆಯ ಜಾಡು ಹಿಡಿದು ಒಂದು ಪೊಲೀಸ್ ತಂಡ ಬೆಂಗಳೂರಿಗೆ ತೆರಳಿದೆ ಎನ್ನಲಾಗುತ್ತಿದ್ದು ಕೊಲೆಗೂ ಬೆಂಗಳೂರಿಗೂ ಲಿಂಕ್ ಇದ್ಯಾ ಎನ್ನುವ ಅನುಮಾನ ಹುಟ್ಟಿಸಿದೆ.
ಇತ್ತೀಚೆಗಷ್ಟೇ ದುಬೈನಿಂದ ಊರಿಗೆ ಬಂದಿದ್ದ ವಿಶಾಲಾ ಗಾಣಿಗ ಕೊಲೆಯ ಬಳಿಕ ಆಕೆಯ ಮೈಯಲ್ಲಿದ್ದ ಆವರಣವನ್ನು ಆಗಂತುಕರು ದೋಚಿದ್ದರು. ಆದರೆ, ಕೃತ್ಯಕ್ಕೂ ಮೊದಲು ಟೀ ಕುಡಿದಿರುವ ಸಾಕ್ಷ್ಯ ಫ್ಲಾಟಿಗೆ ಯಾರೋ ಪರಿಚಿತರೇ ಬಂದಿದ್ದರು ಎನ್ನೋದಕ್ಕೆ ಸುಳಿವು ನೀಡಿತ್ತು. ಹೀಗಾಗಿ ಪರಿಚಿತನೇ ಈ ಕೃತ್ಯ ಎಸಗಿದ್ದಾನೆಯೇ ಎನ್ನುವ ಶಂಕೆ ಪೊಲೀಸರಲ್ಲಿದೆ. ಇವೆಲ್ಲ ಸುಳಿವು ಮತ್ತು ಮೊಬೈಲ್ ಕರೆ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read: ವಿದೇಶದಲ್ಲಿ ನೆಲೆಸಿದ್ದ ಮಹಿಳೆಯ ಬರ್ಬರ ಕೊಲೆ ; ಬ್ರಹ್ಮಾವರದ ಫ್ಲಾಟ್ ನಲ್ಲಿ ಕೃತ್ಯ, ಹಣ, ಚಿನ್ನಕ್ಕಾಗಿ ಹತ್ಯೆ ಶಂಕೆ
Continuing the probe in the sensational murder case of Vishala Ganiga which took place in a private apartment in Uppinakote, Brahmavar on Monday the police have integrated almost ten persons. A special police team has also gone to Bangalore suspecting some involvement of some persons.
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm