ಬ್ರೇಕಿಂಗ್ ನ್ಯೂಸ್
17-07-21 11:54 am Mangaluru Correspondent ಕ್ರೈಂ
ಉಳ್ಳಾಲ, ಜು.17: ಫ್ಲ್ಯಾಟ್ ಒಳಗಡೆ ನುಗ್ಗಿದ ಆರೋಪಿಯೋರ್ವ 24 ಗ್ರಾಂ ತೂಕದ ಚಿನ್ನದ ನಕ್ಲೇಸ್ ಮತ್ತು ಮನೆಯೊಳಗಿದ್ದ ಸಿಸಿಟಿವಿಯನ್ನು ಕಳವು ನಡೆಸಿದ್ದು, ಅಲ್ಲದೆ ಆರೋಪಿ ಸಹಿತ ಆತನ ಸಹೋದರ ಈ ಹಿಂದೆಯೂ 160 ಗ್ರಾಂ ಚಿನ್ನ ಇದೇ ಮನೆಯಿಂದ ಕಳವುಗೈದಿರುವ ಕುರಿತು ಮಹಿಳೆಯೋರ್ವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕುತ್ತಾರು ಜಂಕ್ಷನ್ ನಲ್ಲಿರುವ ಸಿಲಿಕಾನಿಯಾ ಅಪಾರ್ಟ್‍ಮೆಂಟಿನ ಡೋರ್ ನಂ. 1207 ನಲ್ಲಿರುವ ಖತೀಜಾ ಮೆಹಸರ್ ಎಂಬವರ ಫ್ಲ್ಯಾಟ್‍ನಲ್ಲಿ ಕಳವು ನಡೆದಿದೆ. ಮದನಿ ನಗರ ನಿವಾಸಿ ಅಬ್ದುಲ್ ಮುನೀರ್ ಮತ್ತು ಆತನ ಸಹೋದರ ಮೊಹಮ್ಮದ್ ಸಿರಾಜ್ ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಅಬ್ದುಲ್ ಮುನೀರ್ ನನ್ನು ತಡರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜು.2 ರಂದು ಅಬ್ದುಲ್ ಮುನೀರ್ ಫ್ಲ್ಯಾಟ್ ನಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಮನೆಯೊಳಗೆ ನುಗ್ಗಿ 24 ಗ್ರಾಂ ತೂಕದ ಚಿನ್ನದ ನಕ್ಲೇಸ್ ಮತ್ತು ಸಿಸಿಟಿವಿ ಕಳವು ನಡೆಸಿದ್ದಾನೆ. ಈತ ಫ್ಲ್ಯಾಟ್ ಒಳಗೆ ಹೋಗಿರುವ ಕುರಿತು ಫ್ಲ್ಯಾಟ್ ಹೊರಗಡೆ ಇರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈತ ಒಂದು ವರ್ಷದ ಹಿಂದೆ ಸಹೋದರ ಮೊಹಮ್ಮದ್ ಸಿರಾಜ್ ಜೊತೆ ಸೇರಿಕೊಂಡು ಇದೇ ಮನೆಯಿಂದ 160 ಗ್ರಾಂ ಚಿನ್ನವನ್ನು ಕಳವು ನಡೆಸಿದ್ದಾರೆಂದು ಆರೋಪಿಸಲಾಗಿದೆ. ಸಹೋದರರಿಬ್ಬರು ಕಳವು ನಡೆಸಿದ ಸೊತ್ತುಗಳನ್ನು ಮಾರಾಟ ಮಾಡಿ ಬೆಲೆಬಾಳುವ ಎರಡು ಕಾರುಗಳನ್ನು ಹೊಂದಿ ಅದರಲ್ಲಿ ಸುತ್ತಾಡುತ್ತಿರುವ ಮಾಹಿತಿಯನ್ನು ನೀಡಿದ್ದಾರೆ.
ಮಹಿಳೆಯ ಸ್ನಾನ ಶೂಟ್ ಮಾಡಿ ಸಿಕ್ಕಿಬಿದ್ದಿದ್ದ !
ಆರೋಪಿ ಅಬ್ದುಲ್ ಮುನೀರ್ ಈ ಹಿಂದೆ ಜ.20 ರಂದು ಅಸೌಖ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರೋರ್ವರನ್ನು ನೋಡುವ ನೆಪದಲ್ಲಿ ಆಸ್ಪತ್ರೆಗೆ ತೆರಳಿ, ಅಲ್ಲೇ ಇದ್ದ ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದ ವೀಡಿಯೋವನ್ನು ಮೊಬೈಲಿನಲ್ಲಿ ಚಿತ್ರೀಕರಿಸಿದ್ದ. ಆ ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರಿಂದಲೇ ಬಂಧಿತನಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಕೆಲವು ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಾತ ಮತ್ತೆ ಕಳವು ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾನೆ.
ಆಸ್ಪತ್ರೆ ವಾರ್ಡ್ ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ; ಆರೋಪಿ ಬಂಧನ
A woman has filed a complaint with Ullal police alleging theft of a 24-gm gold necklace and a CCTV camera from her apartment residence. In her complaint, she alleged that the accused had stolen 160-gm gold from her residence a year ago. The theft was reported in the residence of Kathija Mahesar in the Silicon Apartment of the city.
02-01-26 06:09 pm
HK News Desk
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 02:02 pm
Mangalore Correspondent
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm