ಬ್ರೇಕಿಂಗ್ ನ್ಯೂಸ್
19-07-21 05:29 pm Udupi Correspondent ಕ್ರೈಂ
ಉಡುಪಿ, ಜುಲೈ 19: ವಿಶಾಲ ಗಾಣಿಗ(35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ತಂಡಗಳಲ್ಲಾಗಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಹಾದಿ ಈಗ ಬೆಂಗಳೂರು, ಕೇರಳಕ್ಕೂ ವಿಸ್ತರಣೆಯಾಗಿದೆ. ಈ ನಡುವೆ, ಪೊಲೀಸರು ವಿಶಾಲಾ ಗಾಣಿಗ ಪತಿ ರಾಮಕೃಷ್ಣ ಗಾಣಿಗ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
ಪತ್ನಿಯ ಕೊಲೆಯ ನಂತರ ದುಬೈನಿಂದ ಊರಿಗೆ ಬಂದಿದ್ದ ರಾಮಕೃಷ್ಣ ಅವರನ್ನು ಪೊಲೀಸರು ಎರಡು, ಮೂರು ಬಾರಿ ವಿಚಾರಣೆ ನಡೆಸಿದ್ದರು. ಇದೀಗ ಕೆಲವೊಂದು ಮಾಹಿತಿ ಪಡೆಯುವುದಕ್ಕಾಗಿ ರಾಮಕೃಷ್ಣ ಅವರನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೇಲ್ನೋಟಕ್ಕೆ ಯಾರೋ ಸುಪಾರಿ ನೀಡಿ ವಿಶಾಲ ಗಾಣಿಗ ಅವರನ್ನು ಕೊಲೆಗೈದಿರುವ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಬೆಂಗಳೂರು ಮತ್ತು ಕೇರಳಕ್ಕೆ ವಿಸ್ತರಿಸಿದ್ದಾರೆ. ಕೊಲೆಯ ಬಳಿಕ ಆರೋಪಿಗಳು ಹೊರ ರಾಜ್ಯಕ್ಕೆ ಪರಾರಿಯಾಗಿದ್ದಾರೆಯೇ ಎಂಬ ಸಂಶಯ ಕೇಳಿಬಂದಿದೆ. ಪ್ರಕರಣ ಸಂಬಂಧಿಸಿ ಇಬ್ಬರು ಸುಪಾರಿ ಕಿಲ್ಲರ್‌ಗಳನ್ನು ಪೊಲೀಸರು ಹೊರ ರಾಜ್ಯದಲ್ಲಿ ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.
ದುಬೈಯಿಂದ ಮಗುವಿನೊಂದಿಗೆ ಊರಿಗೆ ಬಂದಿದ್ದ ವಿಶಾಲ ಗಾಣಿಗ ಬ್ರಹ್ಮಾವರದ ಕುಮ್ರಗೋಡು ಗ್ರಾಮದ ಫ್ಲ್ಯಾಟ್ ನಲ್ಲಿ ಜು.12ರಂದು ಒಬ್ಬರೇ ಇರುವಾಗ ದುಷ್ಕರ್ಮಿಗಳು, ಕುತ್ತಿಗೆ ಬಿಗಿದು ಕೊಲೆಗೈದು ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಪ್ರಕರಣ ಭಾರೀ ಸಂಚಲನಕ್ಕೆ ಕಾರಣವಾಗಿದ್ದು ಯಾವುದೇ ಸುಳಿವು ನೀಡದೆ ಆರೋಪಿಗಳು ಕೃತ್ಯ ಎಸಗಿರುವುದು ಪೊಲೀಸರಿಗೆ ಸವಾಲಾಗಿದೆ.
ಕೃತ್ಯ ನಡೆದಿದ್ದ ದಿನ ವಿಶಾಲಾ ಗಾಣಿಗ ಬ್ಯಾಂಕಿಗೆ ತೆರಳಿ, ಫ್ಲಾಟಿಗೆ ಬಂದಿದ್ದರು. ಈ ವೇಳೆ, ಹತ್ತಿರದ ಸಂಬಂಧಿಕರು ಬಿಟ್ಟರೆ ಅಪರಿಚಿತ ಕರೆಗಳು ಬಂದಿರಲಿಲ್ಲ. ಆದರೆ, ವಿಶಾಲಾ ಅವರು ಇಂಟರ್ನೆಟ್ ಕರೆ ಅಥವಾ ವಾಟ್ಸಪ್ ಕರೆಗಳನ್ನು ಪಡೆದಿದ್ದರೆ ಅದನ್ನು ಪತ್ತೆ ಮಾಡಲು ಸಾಧ್ಯವಾಗಲ್ಲ. ಆ ರೀತಿಯ ಕರೆ ಬಂದಿರುವುದು ಮಾತ್ರ ಹೇಳುತ್ತದೆ ವಿನಾ ಅದು ಎಲ್ಲಿಂದ ಮತ್ತು ಯಾರು ಮಾಡಿದ್ದಾರೆ ಎನ್ನೋದನ್ನು ಖಚಿತಪಡಿಸಲ್ಲ. ಇದೇ ವೇಳೆ ಪತಿಯಿಂದ ಕರೆ ಬಂದಿದೆ ಎನ್ನಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಪತಿ ಬಗ್ಗೆ ಸಂಶಯಗೊಂಡು ಹೆಚ್ಚುವರಿ ತನಿಖೆಗೆ ಒಳಪಡಿಸಿದ್ದಾರೆ.
ವಿಶಾಲಾ ಗಾಣಿಗ ಕೊಲೆ ; ಆರೋಪಿಗಳ ಸುಳಿವು ಲಭ್ಯ, ಪೊಲೀಸ್ ತಂಡ ಬೆಂಗಳೂರಿಗೆ, ಶೀಘ್ರದಲ್ಲೇ ಕೀಚಕರ ಬಂಧನ ಸಾಧ್ಯತೆ
ವಿದೇಶದಲ್ಲಿ ನೆಲೆಸಿದ್ದ ಮಹಿಳೆಯ ಬರ್ಬರ ಕೊಲೆ ; ಬ್ರಹ್ಮಾವರದ ಫ್ಲಾಟ್ ನಲ್ಲಿ ಕೃತ್ಯ, ಹಣ, ಚಿನ್ನಕ್ಕಾಗಿ ಹತ್ಯೆ ಶಂಕೆ
Vishala Ganiga Murder case Husband taken into Police custody for interrogation. It is said that Vishala's husband used to deal in properties and had acquired properties in different places. In some cases, there were disputes over the properties, it is being claimed. Therefore, enmity could also be a reason for the murder.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm