ಬ್ರೇಕಿಂಗ್ ನ್ಯೂಸ್
22-07-21 01:01 pm Headline Karnataka News Network ಕ್ರೈಂ
ಲಕ್ನೋ, ಜುಲೈ 22 : ತಮ್ಮ ಮಾತು ಮೀರಿ ಜೀನ್ಸ್ ಪ್ಯಾಂಟ್ ಹಾಕುತ್ತಿದ್ದಾಳೆಂದು ಸ್ವತಃ ಅಜ್ಜ ಮತ್ತು ಚಿಕ್ಕಪ್ಪಂದಿರೇ ಸೇರಿ 17 ವರ್ಷದ ಬಾಲಕಿಯನ್ನು ಗೋಡೆಗೆ ತಲೆಯನ್ನು ಜಜ್ಜಿ ಕೊಲೆಗೈದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ರಾಜಧಾನಿ ಲಕ್ನೋ ಹೊರವಲಯದ ಕಶ್ಯಪ್ - ಪಾಟ್ನಾ ಹೆದ್ದಾರಿಯಲ್ಲಿ ಸೇತುವೆ ಒಂದರಲ್ಲಿ ಬಾಲಕಿಯ ಶವ ನೇತಾಡುತ್ತಿರುವುದನ್ನು ಸ್ಥಳೀಯರು ನೋಡಿ, ಪೊಲೀಸರಿಗೆ ವಿಷಯ ತಿಳಿಸಿದ್ದರು. ತನಿಖೆ ನಡೆಸಿದ ಪೊಲೀಸರು ಬಾಲಕಿಯನ್ನು ಹತ್ಯೆಗೈದಿದ್ದ ಆಕೆಯ ಅಜ್ಜ ಪರಮಹಂಸ ಪಾಸ್ವಾನ್ ಮತ್ತು ಚಿಕ್ಕಪ್ಪಂದಿರಾದ ವ್ಯಾಸ್ ಪಾಸ್ವಾನ್ ಹಾಗೂ ಅರವಿಂದ್ ಪಾಸ್ವಾನ್ ಎಂಬವರನ್ನು ಬಂಧಿಸಿದ್ದಾರೆ.

ಮೃತ ಬಾಲಕಿಯ ತಂದೆ ಪಂಜಾಬ್ ರಾಜ್ಯದ ಲುಧಿಯಾನಾ ನಗರದಲ್ಲಿ ಕೆಲಸ ಮಾಡುತ್ತಿದ್ದರು. ಇತರೇ ಕುಟುಂಬಸ್ಥರು ಲಕ್ನೋ ಜಿಲ್ಲೆಯ ಡಿಯೋರಿಯಾ ಮಹುದೀಹ್ ಎಂಬ ಹಳ್ಳಿಯಲ್ಲಿ ವಾಸವಿದ್ದರು. ಇವರ ಕುಟುಂಬದಲ್ಲಿ ಹೆಣ್ಣು ಮಕ್ಕಳು ಜೀನ್ಸ್ ಧರಿಸಬಾರದು ಎಂಬ ಕಟ್ಟುಪಾಡು ಪಾಲಿಸಿಕೊಂಡು ಬಂದಿದ್ದರು. 17 ವರ್ಷದ ಬಾಲಕಿ ಲುಧಿಯಾನಾಕ್ಕೆ ಹೋಗಿ ಮರಳುತ್ತಿದ್ದಂತೆ ಇತರೇ ಹುಡುಗಿಯರ ರೀತಿ ವಯೋಸಹಜ ಆಸೆಯಿಂದ ಜೀನ್ಸ್ ಸೇರಿ, ಪಾಶ್ಚಿಮಾತ್ಯ ಉಡುಗೆಗಳನ್ನು ಧರಿಸಲು ಪ್ರಾರಂಭಿಸಿದ್ದಳು. ಕೆಲವು ದಿನಗಳ ಹಿಂದೆ ಬಾಲಕಿ ತನ್ನ ತಾಯಿ ಶಕುಂತಲಾ ಜೊತೆ ಗ್ರಾಮಕ್ಕೆ ವಾಪಸ್ ಆಗಿದ್ದಳು. ಜೀನ್ಸ್ ಹಾಕ್ಕೊಂಡು ಆಗಮಿಸಿದ್ದು ಕುಟುಂಬದ ಹಿರಿಯರ ಕೋಪಕ್ಕೆ ಕಾರಣವಾಗಿತ್ತು. ಅಲ್ಲದೆ, ಆಕೆ ಮನೆಯಿಂದ ಹೊರಗಡೆ ಓಡಾಡುತ್ತಿದ್ದಳು. ತಾತ, ಚಿಕ್ಕಪ್ಪಂದಿರು ಇದನ್ನು ವಿರೋಧಿಸಿದ್ದರು. ಆದರೆ, ಬಾಲಕಿ ಕುಟುಂಬದ ಹಿರಿಯರ ಮಾತು ಕೇಳದೆ ಓಡಾಡಿಕೊಂಡಿದ್ದಳು.
ಮೊನ್ನೆ ಸೋಮವಾರ ಇದೇ ವಿಚಾರಕ್ಕೆ ಬಾಲಕಿ ತಾಯಿ ಮತ್ತು ಆಕೆಯ ಜೊತೆಗೆ ಕುಟುಂಬಸ್ಥರು ಗಲಾಟೆ ಮಾಡಿದ್ದರು. ಜೀನ್ಸ್ ಧರಿಸಬಾರದು ಎಂಬ ತನ್ನ ಸೂಚನೆಯನ್ನು ವಿರೋಧಿಸಿದ ಬಾಲಕಿ ತನ್ನ ಚಿಕ್ಕಪ್ಪ ಅರವಿಂದ್ ಜೊತೆಗೆ ಗಲಾಟೆ ಮಾಡಿದ್ದಕ್ಕೆ ನಂತರ ಅರವಿಂದ್, ಆತನ ಪತ್ನಿ, ಸಹೋದರ ವ್ಯಾಸ್, ತಂದೆ ಪರಮಹಂಸ್ ಪಾಸ್ವಾನ್ ಎಲ್ಲ ಸೇರಿ ಬಾಲಕಿಯನ್ನು ಗೋಡೆಗೆ ಜಜ್ಜಿ, ನೆಲಕ್ಕೆ ಅಪ್ಪಳಿಸಿದ್ದಾರೆ. ಇದರಿಂದ ತಲೆಯಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಬಾಲಕಿ ಮೃತಪಟ್ಟಿದ್ದಾಳೆ. ನಂತರ ಶವವನ್ನು ಆಟೋದಲ್ಲಿ ತೆಗೆದುಕೊಂಡು ಹೋಗಿ ಹೆದ್ದಾರಿಯ ಪತನ್ವಾ ಸೇತುವೆಯ ಕೆಳಕ್ಕೆ ಹಾಕಿದ್ದಾರೆ. ಆದರೆ ಶವ, ಸೇತುವೆಯ ಗ್ರಿಲ್ಗೆ ಸಿಲುಕಿಕೊಂಡು ಪಾಪಿಗಳನ್ನು ಜೈಲು ಕಂಬಿ ಎಣಿಸಲು ಸಾಕ್ಷಿಯಾಗಿತ್ತು. ಸೇತುವೆಯ ಕೆಳಗೆ ನೇತಾಡಿಕೊಂಡಿದ್ದ ಶವ ನೋಡಿದ ದಾರಿಹೋಕರು ಪೊಲೀಸರಿಗೆ ತಿಳಿಸಿದ್ದರು ಎಂದು ಲಕ್ನೋ ಪೊಲೀಸ್ ಅಧಿಕಾರಿ ಶ್ರೀಪತಿ ಮಿಶ್ರಾ ತಿಳಿಸಿದ್ದಾರೆ.
A 17-year-old girl was allegedly killed by her own grandfather and two uncles in Uttar Pradesh’s Deoria district after she defied their “no jeans” diktat. The girl’s body was found hanging from a bridge on Kasya-Patna highway, after an attempt to dispose it by the accused failed. While the grandfather of the deceased girl has been arrested, her uncles are still absconding.
08-12-25 11:26 am
Bangalore Correspondent
Gangavati Accident, Koppal: ಪ್ರಿ ವೆಡ್ಡಿಂಗ್ ಶೂ...
07-12-25 10:21 pm
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
08-12-25 04:52 pm
Mangalore Correspondent
ಬಂಡವಾಳ ಇಲ್ಲದೆ ಆದಾಯದ ಅವಕಾಶ ; ಎಸ್ಸೆಸ್ಸೆಲ್ಸಿ, ಪಿ...
08-12-25 01:42 pm
ಮುಂದುವರಿದ ಇಂಡಿಗೋ ಬಿಕ್ಕಟ್ಟು ; ಮಂಗಳೂರಿನಲ್ಲಿ ಡಿ....
08-12-25 11:23 am
ಉಡುಪಿ ಶ್ರೀಕೃಷ್ಣ ಮಠಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ...
07-12-25 10:45 pm
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm