ಬ್ರೇಕಿಂಗ್ ನ್ಯೂಸ್
16-08-21 03:21 pm Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 16: ನಗರದ ಬಂದರಿನಲ್ಲಿ ಗೋಡೌನ್ ಒಂದರಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ಭಾರೀ ಪ್ರಮಾಣದ ವಿವಿಧ ರೀತಿಯ ಸ್ಫೋಟಕ ಸಾಮಗ್ರಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸ್ವಾತಂತ್ರ್ಯ ಹಿನ್ನೆಲೆಯಲ್ಲಿ ಅಲರ್ಟ್ ಆಗಿದ್ದ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಅಕ್ರಮ ದಾಸ್ತಾನು ಪತ್ತೆಯಾಗಿದ್ದು, ಪ್ರಕರಣ ಸಂಬಂಧಿಸಿ ಒಬ್ಬನನ್ನು ಬಂಧಿಸಿದ್ದಾರೆ.
ಮುಡಿಪು ಬಳಿಯ ಕೈರಂಗಳ ನಿವಾಸಿ ಆನಂದ್ ಗಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ. ಬಂದರಿನ ಅಜೀಜುದ್ದೀನ್ ರಸ್ತೆಯ ಗಾಂಧಿ ಸನ್ಸ್ ಕಟ್ಟಡದ ಅಡಿಭಾಗದಲ್ಲಿ ಮೆಟ್ಟಿಲ ಸಂದಿನಲ್ಲಿ ಗೋಡೆ ಕಟ್ಟಿ ಗೋಡೌನ್ ಮಾಡಲಾಗಿತ್ತು. ಅದರಲ್ಲಿ 1500 ಕೇಜಿಗೂ ಹೆಚ್ಚು ವಿವಿಧ ಮಾದರಿಯ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಬಂದರು ಪೊಲೀಸರು ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಸಲ್ಫರ್ ಪೌಡರ್ ಇದ್ದ ತಲಾ 50 ಕೇಜಿಯ ಎಂಟು ಚೀಲಗಳು(400 ಕೇಜಿ), 40 ಕೇಜಿ ಇದ್ದ ಆರು ಚೀಲ ಇದ್ದಿಲು, ಪೊಟ್ಯಾಶಿಯಂ ನೈಟ್ರೇಟ್ 50 ಕೇಜಿಯ ನಾಲ್ಕು ಚೀಲ(350 ಕೇಜಿ), 25 ಕೇಜಿಯ ಏಳು ಚೀಲ ಕಲ್ಲುಪ್ಪು, ಅಪಾಯಕಾರಿ ಪೊಟ್ಯಾಶಿಯಂ ಕ್ಲೋರೇಟ್ 25 ಕೇಜಿ(395 ಕೇಜಿ), ಅಲ್ಯುಮಿನಿಯಂ ಪೌಡರ್ ಮತ್ತು ಬೀಡ್ 30 ಕೇಜಿ(360 ಕೇಜಿ), ಏರ್ ಪಿಸ್ಟಲ್ ಪೆಲ್ಲಟ್ ಗಳು 161 ಬಾಕ್ಸ್- 260 ಕೇಜಿ, ಲೆಡ್ ಬಾಲ್ 30 ಕೇಜಿ ಇವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.
ಒಟ್ಟು 1,11,140 ರೂಪಾಯಿ ಮೌಲ್ಯದ ಸ್ಫೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಆನಂದ ಗಟ್ಟಿ ಗನ್ ಮಾರಾಟ ಮಾಡುವ ಅಂಗಡಿ ಹೊಂದಿದ್ದು, ಅದಕ್ಕೆ ಬೇಕಾಗುವ ವಸ್ತುಗಳನ್ನು ಸ್ಟೋರೇಜ್ ಮಾಡಲು ಗೋಡೌನ್ ಬಳಸುತ್ತಿದ್ದ. ಆದರೆ, ಅಲ್ಲಿ ಪತ್ತೆಯಾದ ಸ್ಫೋಟಕ ವಸ್ತುಗಳು ಗನ್ ತಯಾರಿಗೆ ಬಳಸುವಂಥವುಗಳಲ್ಲ. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕಲ್ಲಿನ ಕ್ವಾರಿ, ಬಾವಿಗಳಲ್ಲಿ ಬಳಸುವ ಸ್ಫೋಟಕಗಳಿಗಾಗಿ ಇಲ್ಲಿಂದ ಕಚ್ಚಾವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಯಿಂದ ಸ್ಫೋಟಕ, ಸಿಡಿಮದ್ದು ತಯಾರಿಗೆ ಇಲ್ಲಿಂದ ಕಚ್ಚಾ ವಸ್ತುಗಳನ್ನು ಒಯ್ಯುತ್ತಿದ್ದರು ಎನ್ನುವುದು ತಿಳಿದುಬಂದಿದೆ ಎಂದು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ನಕ್ಸಲ್ ಅಥವಾ ಇತರ ಸಮಾಜವಿರೋಧಿ ಕೃತ್ಯಗಳಿಗೆ ಇಲ್ಲಿಂದ ಸ್ಫೋಟಕ ಪೂರೈಕೆ ಆಗುತ್ತಿದ್ದ ಬಗ್ಗೆ ಮಾಹಿತಿಯಿಲ್ಲ. ಆದರೆ, ಈ ರೀತಿಯ ದುಷ್ಕೃತ್ಯಗಳಿಗೆ ಇಲ್ಲಿನ ಕಚ್ಚಾವಸ್ತು ಬಳಕೆಯಾಗಲ್ಲ ಎನ್ನುವ ಹಾಗಿಲ್ಲ. ಸುಲಭದಲ್ಲಿ ಇಲ್ಲಿ ಲಭ್ಯ ಆಗುತ್ತಿದ್ದುದರಿಂದ ಸಮಾಜ ವಿರೋಧಿ ಶಕ್ತಿಗಳು ಕೃತ್ಯಕ್ಕೆ ಬಳಕೆ ಮಾಡುವ ಸಾಧ್ಯತೆಯೂ ಇರುತ್ತದೆ ಎಂದಿದ್ದಾರೆ.
Video:
The Mangalore police have arrested a Gun Shop Owner for the Sale of explosive raw materials illegally by storing them in Bunder Godown. The arrested has been identified as Anand Gathi. Lakhs worth Materials have been seized.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 11:48 am
Mangalore Correspondent
Gopadi Beach Drowning, Kundapura: ಕುಂದಾಪುರ ;...
08-09-25 12:08 pm
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm