ಬ್ರೇಕಿಂಗ್ ನ್ಯೂಸ್
19-08-21 01:55 pm Headline Karnataka News Network ಕ್ರೈಂ
ಬೆಂಗಳೂರು, ಆಗಸ್ಟ್ 19: ಐಸಿಸ್ ನೆಟ್ವರ್ಕ್ ಜಾಲದ ಹಿಂದೆ ಬಿದ್ದಿರುವ ಎನ್ಐಐ ಅಧಿಕಾರಿಗಳು ದೇಶಾದ್ಯಂತ ಕಾರ್ಯಾಚರಣೆ ಮುಂದುವರಿದಿದ್ದು, ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಮತ್ತೆ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಿಝಾ ಸಿದ್ದಿಕ್ (23) ಮತ್ತು ಶಿಫಾ ಹಾರಿಸ್ (27) ಎಂದು ಗುರುತಿಸಲಾಗಿದೆ.
ಇಬ್ಬರು ಯುವತಿಯರು ಕೂಡ ಸಿರಿಯಾ ಮತ್ತು ಅಫ್ಘಾನಿಸ್ತಾನದಲ್ಲಿ ನಿಯಂತ್ರಣ ಹೊಂದಿರುವ ಐಸಿಸ್ ಉಗ್ರ ಸಂಘಟನೆಯನ್ನು ಸೇರಲು ಉತ್ಸುಕರಾಗಿದ್ದರು. ಅಲ್ಲದೆ, ಐಸಿಸ್ ಪ್ರೇರಣೆಯಿಂದ ಸಂಘಟನೆಗೆ ದೇಣಿಗೆ ಸಂಗ್ರಹ ಮಾಡುತ್ತಿದ್ದರು. ಐಸಿಸ್ ಸಂಘಟನೆ ಸೇರಲು ಯುವಕರಿಗೆ ಪ್ರೇರಣೆಯನ್ನೂ ನೀಡುತ್ತಿದ್ದರು. ವಿವಿಧ ಮೂಲಗಳಿಂದ ಸಂಗ್ರಹಗೊಂಡ ಹಣವನ್ನು ಜಮ್ಮು ಕಾಶ್ಮೀರದ ಉಗ್ರರ ಮೂಲಕ ಸಂದಾಯ ಮಾಡುತ್ತಿದ್ದರು ಎನ್ನುವ ಮಾಹಿತಿಯನ್ನು ಎನ್ಐಐ ಅಧಿಕಾರಿಗಳು ತನಿಖೆಯಲ್ಲಿ ಹೊರಗೆಡವಿದ್ದಾರೆ.
ಮಿಝಾ ಸಿದ್ದಿಕ್ ಶಾರ್ಜಾ ಯುನಿವರ್ಸಿಟಿಯಲ್ಲಿ ಇಸ್ಲಾಮ್ ಬಗ್ಗೆ ಉನ್ನತ ಅಧ್ಯಯನ ಕೈಗೊಂಡಿದ್ದಳು. ಆದರೆ, ಅಧ್ಯಯನ ಪೂರ್ತಿಯಾಗುವ ಮುನ್ನ ಅಲ್ಲಿಂದ ಮರಳಿದ್ದಳು. ಅದಕ್ಕೂ ಮುನ್ನ ಕೇರಳದಲ್ಲಿ ಪಿಯುಸಿ ಕಲಿತು ಬಿಕಾಂ ಪದವಿ ಸೇರಿದ್ದಳು. ಅದನ್ನೂ ಪೂರ್ತಿಗೊಳಿಸದೆ, ಅದರ ನಡುವೆ ಟೀಚಿಂಗ್ ಕೋರ್ಸ್ ಡಿಪ್ಲೊಮಾ ಮಾಡಿದ್ದಳು. ಈ ನಡುವೆ, 2019ರಲ್ಲಿ ಮಿಝಾ ಇರಾನ್ ದೇಶದ ಟೆಹ್ರಾನ್ ಭಾಗಕ್ಕೆ ತೆರಳಿದ್ದು, ಅಲ್ಲಿಂದ ಐಸಿಸ್ ಪ್ರಾಬಲ್ಯದ ಸಿರಿಯಾಕ್ಕೆ ಹೋಗಲು ಪ್ರಯತ್ನಿಸಿದ್ದಳು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಐಸಿಸ್ ಸಂಘಟನೆಗೆ ಯುವಕರ ಸೇರ್ಪಡೆ, ದೇಣಿಗೆ ಸಂಗ್ರಹ ಆಗುತ್ತಿರುವ ಬಗ್ಗೆ ಮಾಹಿತಿ ಪಡೆದ ಎನ್ಐಎ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಬಳಿಕ ಕಣ್ಣೂರು ಮೂಲದ ಮೊಹಮ್ಮದ್ ಅಮೀನ್ ಅಲಿಯಾಸ್ ಅಬು ಯಾಹ್ಯಾ ಮತ್ತು ಆತನ ಮತ್ತಿಬ್ಬರು ಸಹಚರರನ್ನು ಬಂಧಿಸಿದ್ದರು. ಡಾ.ರಹೀಸ್ ರಶೀದ್ ಮತ್ತು ಮುಶಾಬ್ ಅನ್ವರ್, ಮೊಹಮ್ಮದ್ ಅಮೀನ್ ಸಹಚರರಾಗಿದ್ದು, ಇವರನ್ನು ತನಿಖೆಗೆ ಒಳಪಡಿಸಿದಾಗ ದೇಶಾದ್ಯಂತ ಹರಡಿಕೊಂಡಿರುವ ಐಸಿಸ್ ನೆಟ್ವರ್ಕ್ ಬೆಳಕಿಗೆ ಬಂದಿತ್ತು. ಅದರಂತೆ, ಆಗಸ್ಟ್ ಮೊದಲ ವಾರದಲ್ಲಿ ಕರ್ನಾಟಕದ ಬೆಂಗಳೂರು, ಮಂಗಳೂರು ಮತ್ತು ಜಮ್ಮು ಕಾಶ್ಮೀರದ ವಿವಿಧ ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು. ಮಂಗಳೂರಿನಲ್ಲಿ ಮಾಜಿ ಶಾಸಕ ಇದಿನಬ್ಬ ಅವರ ಮೊಮ್ಮಗ ಅಮರ್ ರೆಹ್ಮಾನ್ ಸೇರಿ ವಿವಿಧ ಕಡೆ ಐವರನ್ನು ಬಂಧಿಸಲಾಗಿತ್ತು.
ಯಾಹ್ಯಾ ಪ್ರೇರಣೆಯಿಂದ ಇನ್ ಸ್ಟಾ ಗ್ರಾಮ್ ಪೇಜ್
ಈಗ ಬಂಧಿತರಾಗಿರುವ ಇಬ್ಬರು ಮಹಿಳೆಯರಿಗೂ ಮೊಹಮ್ಮದ್ ಅಮೀನ್ ಯಾಹ್ಯಾ ಪ್ರೇರಣೆಯಾಗಿದ್ದ. ಆತನ ಸೂಚನೆಯಂತೆ, ಮಿಝಾ ಸಿದ್ದಿಕ್ ತನ್ನದೇ ಹೆಸರಲ್ಲಿ ಹೊಸತಾಗಿ ಇನ್ ಸ್ಟಾ ಗ್ರಾಮ್ ಪೇಜ್ ಆರಂಭಿಸಿದ್ದಳು. ಅದರಲ್ಲಿ ಇಸ್ಲಾಂ ಬಗ್ಗೆ ತೀವ್ರವಾದಿಗಳಾಗಿರುವ ಯುವಕ- ಯುವತಿಯರನ್ನು ಐಸಿಸ್ ಸೇರಲು ಪ್ರೋತ್ಸಾಹ ನೀಡುತ್ತಿದ್ದಳು. ಐಸಿಸ್ ಧ್ಯೇಯೋದ್ದೇಶಗಳ ಬಗ್ಗೆ ಹೇಳುತ್ತಾ ಯುವಕರನ್ನು ಮತ್ತಷ್ಟು ತೀವ್ರವಾದದತ್ತ ಹೊರಳುವಂತೆ ಮಾಡುತ್ತಿದ್ದಳು. ಈಕೆಯ ಈ ರೀತಿಯ ಸಂದೇಶಗಳಿಂದ ಪ್ರೇರಿತಗೊಂಡು ಮಿಝಾ ಸಿದ್ದಿಕ್ ಸೋದರ ಸಂಬಂಧಿಗಳಾಗಿದ್ದ ಮುಶಾಬ್ ಅನ್ವರ್ ಮತ್ತು ಶಿಫಾ ಹಾರಿಸ್ ಐಸಿಸ್ ಸೇರಲು ಮುಂದಾಗಿದ್ದರು ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.
ಮಿಝಾ ಮತ್ತು ಮುಶಾಬ್ ಅನ್ವರ್ ಪ್ರೇರಣೆಯಂತೆ, ಶಿಫಾ ಹಾರಿಸ್ ಐಸಿಸ್ ಪರವಾಗಿ ಕೆಲಸ ಮಾಡಲು ಆರಂಭಿಸಿದ್ದಳು. ಅಲ್ಲದೆ, ಐಸಿಸ್ ಪರವಾಗಿ ದೇಣಿಗೆ ಸಂಗ್ರಹಿಸಿ, ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಬಂಧಿತನಾಗಿದ್ದ ಮೊಹಮ್ಮದ್ ವಕಾರ್ ಲೋನ್ ಎಂಬಾತನಿಗೆ ರವಾನಿಸುತ್ತಿದ್ದಳು. ಮೊಹಮ್ಮದ್ ಅಮೀನ್ ಯಾಹ್ಯಾ ಜೊತೆಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಮೊಹಮ್ಮದ್ ವಕಾರ್ ಲೋನ್ ನನ್ನು ಬಂಧಿಸಲಾಗಿತ್ತು. ವಕಾರ್ ಲೋನ್ ಬಂಧಿಸಿ, ಹಣಕಾಸು ಚಟುವಟಿಕೆಯ ಹಿನ್ನೆಲೆ ಪರಿಶೀಲಿಸಿದಾಗ ಶಿಫಾ ಹಾರಿಸ್ ಸಂಪರ್ಕ ಖಚಿತವಾಗಿತ್ತು. ಅದರ ಆಧಾರದಲ್ಲಿ ಎನ್ಐಎ ಅಧಿಕಾರಿಗಳು ಮತ್ತೆ ಕಣ್ಣೂರಿಗೆ ದಾಳಿ ನಡೆಸಿ, ಮಿಝಾ ಮತ್ತು ಶಿಫಾಳನ್ನು ಬಂಧಿಸಿದ್ದಾರೆ.
ಹಿಜಿರಾ ಆಗಲು ರೆಡಿಯಾಗಿದ್ದ ಯುವತಿಯರು !
ಅಲ್ಲದೆ, ಮಿಝಾ ಮತ್ತು ಶಿಫಾ ಐಸಿಸ್ ಸೇರಲು ಮುಂದಾಗಿದ್ದಲ್ಲದೆ, ಅಫ್ಘಾನಿಸ್ತಾನದಲ್ಲಿ ಹಿಜಿರಾ ಆಗಲು ರೆಡಿಯಾಗಿದ್ದರು. ಇಸ್ಲಾಂ ಪ್ರಕಾರ, ಹಿಜಿರಾ ಎಂದರೆ ಸರ್ವವನ್ನೂ ತ್ಯಜಿಸಿ ನಿಗದಿತ ಸ್ಥಳಕ್ಕೆ ವಲಸೆ ಹೋಗುವುದು. ಸಿರಿಯಾವನ್ನು ಇಸ್ಲಾಮಿಕ್ ಸ್ಟೇಟ್ ಎಂದು ಈಗಾಗಲೇ ಘೋಷಣೆ ಮಾಡಿಕೊಂಡಿದ್ದು, ಅಲ್ಲಿಗೆ ತೆರಳುವುದಕ್ಕೆ ಭಾರತೀಯ ಮುಸ್ಲಿಮರಿಗೆ ಪ್ರೇರಣೆ ನೀಡಲಾಗುತ್ತಿದೆ. ಈಗ ಅಫ್ಘಾನಿಸ್ತಾನವನ್ನೂ ಆಕ್ರಮಿಸಿಕೊಂಡಿರುವ ಐಸಿಸ್ ಪ್ರೇರಿತ ತಾಲಿಬಾನ್ ಪಡೆ, ಮುಂದೆ ಇಸ್ಲಾಮಿಕ್ ಸ್ಟೇಟ್ ಎಂದು ಮರು ನಾಮಕರಣ ಮಾಡಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
The two arrested were reportedly part of a group which was running various ISIS propaganda channels on different social media platforms, such as Telegram, Hoop and Instagram, for radicalizing and recruiting new members. The investigating team from New Delhi arrested Shifa Harris and Misha Siddique, early morning from their house.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm