ಟೆಸ್ಟ್ ಡ್ರೈವ್ ನೆಪದಲ್ಲಿ ನಕಲಿ ಕೀ ಬಳಸಿ ವಾಹನ ಕಳವು

06-09-20 06:22 pm       Bangalore Correspondent   ಕ್ರೈಂ

ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಓಡಿಸಿ ನಕಲಿ ಕೀ ಮಾಡಿಕೊಂಡು ಕಾರು ಕದ್ದು ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 6:  ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಓಡಿಸಿ ನಕಲಿ ಕೀ ಮಾಡಿಕೊಂಡು ಕಾರು ಕದ್ದು ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧಿಸಿ ಬಿ.ಎಂ. ಭರತ್ ಎಂಬಾತನನ್ನು ಕಲಾಶಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಚೆನ್ನಸಂದ್ರ ನಿವಾಸಿಯಾಗಿರುವ ಭರತ್ ವೃತ್ತಿಯಲ್ಲಿ ಮೆಕ್ಯಾನಿಕ್. ಆತನಿಂದ ಕಾರು ಹಾಗೂ ಮೂರು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ. ಒಎಲ್ ಎಕ್ಸ್ ನಲ್ಲಿ ವಾಹನ ಮಾರಾಟಕ್ಕೆ ಇಟ್ಟಿದ್ದವರನ್ನು ಪರಿಚಯಿಸಿಕೊಳ್ಳುತ್ತಿದ್ದ ಭರತ್ ಟೆಸ್ಟ್ ಡ್ರೈವ್ ಗೆಂದು ವಾಹನ ಪಡೆಯುತ್ತಿದ್ದ. ನಕಲಿ ಕೀ ಮಾಡುವುದರಲ್ಲಿ ಪರಿಣತನಾಗಿದ್ದರಿಂದ ಕೆಲದಿನಗಳಲ್ಲಿ ಕೀ ರೆಡಿ ಮಾಡುತ್ತಿದ್ದ. ಟೆಸ್ಟ್ ಡ್ರೈವ್ ವೇಳೆ ಸ್ವಲ್ಪ ದಿನಗಳ ಬಳಿಕ ರೇಟ್ ಬಗ್ಗೆ ಮಾತಾಡೋಣ ಎಂದು ಬರುತ್ತಿದ್ದ ಆರೋಪಿ, ಆನಂತ್ರ ವಾಹನವನ್ನು ನಕಲಿ ಕೀ ಬಳಸಿ ಕದಿಯುತ್ತಿದ್ದ. ಕಲಾಶಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ 14.80 ಲಕ್ಷ ಮೌಲ್ಯದ ಕಾರು ಕಳವಾಗಿತ್ತು. ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ನಷ್ಟು ಕೃತ್ಯಗಳ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಪಾಟೀಲ್ ತಿಳಿಸಿದ್ದಾರೆ.